ಸತತ ಒಂದು ತಿಂಗಳ ಚಿಕಿತ್ಸೆ ವಿಫಲ; ಕೊವಿಡ್​ಗೆ ಬಲಿಯಾದ ಖ್ಯಾತ ಗಾಯಕಿ

ತಪು ಅವರಿಗೆ ಕಳೆದ ತಿಂಗಳ ಹಿಂದೆ ಕೊವಿಡ್​ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇದ್ದಿದ್ದರಿಂದ ಅವರು ಮನೆಯಲ್ಲೇ ಕ್ವಾರಂಟೈನ್​ ಆಗಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ದಿನ ಕಳೆದಂತೆ ಗಂಭೀರವಾಗುತ್ತಾ ಬಂದಿತ್ತು.

ಸತತ ಒಂದು ತಿಂಗಳ ಚಿಕಿತ್ಸೆ ವಿಫಲ; ಕೊವಿಡ್​ಗೆ ಬಲಿಯಾದ ಖ್ಯಾತ ಗಾಯಕಿ
ತಪು ಮಿಶ್ರಾ
Edited By:

Updated on: Jun 20, 2021 | 3:11 PM

ಸೆಲೆಬ್ರಿಟಿಗಳ ವಲಯಕ್ಕೆ ಕೊವಿಡ್​ ದುಸ್ವಪ್ನವಾಗಿ ಕಾಡುತ್ತಿದೆ. ಈಗಾಗಲೇ ಸಾಕಷ್ಟು, ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಕೊವಿಡ್​ನಿಂದ ನಿಧನ ಹೊಂದಿದ್ದಾರೆ. ಈಗ ಒಡಿಶಾದ ಖ್ಯಾತ ಗಾಯಕಿ ತಪು ಮಿಶ್ರಾ ಕೊವಿಡ್​ನಿಂದ ನಿಧನ ಹೊಂದಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ತಪು ಅವರಿಗೆ ಕಳೆದ ತಿಂಗಳು ಕೊವಿಡ್​ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇದ್ದಿದ್ದರಿಂದ ಅವರು ಮನೆಯಲ್ಲೇ ಕ್ವಾರಂಟೈನ್​ ಆಗಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ದಿನ ಕಳೆದಂತೆ ಗಂಭೀರವಾಗುತ್ತಾ ಬಂದಿತ್ತು. ಹೀಗಾಗಿ, ಮೇ 19ರಂದು ಅವರನ್ನು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಸತತ ಒಂದು ತಿಂಗಳ ಚಿಕಿತ್ಸೆ ಪಡೆದ ನಂತರದಲ್ಲಿ ಅವರು ಮೃತಪಟ್ಟಿದ್ದಾರೆ.

ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ತಪು ಅವರ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗಿತ್ತು. ಕಳೆದ ಎರಡು ದಿನಗಳಿಂದ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಈಗ ಅವರು ಮೃತಪಟ್ಟಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ತಪು ಮಿಶ್ರಾ ಅವರು ಸಂಬಾಲ್​ಪುರ್​ನಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಮುಗಿಸಿದರು. ಸಣ್ಣ ವಯಸ್ಸಿಗೇ ಸಂಗೀತ ಲೋಕಕ್ಕೆ ಕಾಲಿಟ್ಟರು. ಗಾಯಕಿಯಾಗಿ ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನು ಅವರು ಹಾಡಿದ್ದರು. ಒಡಿಶಾ ಭಾಷೆಯಲ್ಲಿ ಮಾತ್ರವಲ್ಲದೆ ಬೆಂಗಾಲಿ ಹಾಗೂ ಹಿಂದಿಯಲ್ಲೂ ತಪು ಸಾಕಷ್ಟು ಹಾಡಿಗೆ ಧ್ವನಿಯಾಗಿದ್ದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ತಪು ಸಾವಿಗೆ ಸಂಪಾತ ಸೂಚಿಸಿದ್ದಾರೆ. ‘ತಪು ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ’ ಎಂದಿದ್ದಾರೆ. ನಟ ಹಾಗೂ ಸಂಸದ ಅನುಭವ್​ ಕೂಡ ತಪು ಸಾವಿಗೆ ಸಂಪಾತ ಸೂಚಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಕಾಲಿವುಡ್​ ನಿರ್ದೇಶಕ ಜಿಎನ್​ ರಂಗರಾಜನ್​ ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us