Joe Lara Death: ವಿಮಾನ ದುರಂತದಲ್ಲಿ ‘ಟಾರ್ಜನ್​’ ಖ್ಯಾತಿಯ ನಟ ಜೋ ಲಾರಾ ಮತ್ತು ಪತ್ನಿ ಸೇರಿ 7 ಮಂದಿ ದುರ್ಮರಣ

ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಜೋ ಲಾರಾ ಮತ್ತು ಅವರ ಜೊತೆ ಪ್ರಯಾಣಿಸುತ್ತಿದ್ದ ಇನ್ನುಳಿದವರೆಲ್ಲ ಸ್ಥಳೀಯರು ಎಂದು ಹೇಳಲಾಗಿದೆ.

Joe Lara Death: ವಿಮಾನ ದುರಂತದಲ್ಲಿ ‘ಟಾರ್ಜನ್​’ ಖ್ಯಾತಿಯ ನಟ ಜೋ ಲಾರಾ ಮತ್ತು ಪತ್ನಿ ಸೇರಿ 7 ಮಂದಿ ದುರ್ಮರಣ
ಜೋ ಲಾರಾ

Updated on: May 31, 2021 | 10:53 AM

ಅನೇಕ ಹಾಲಿವುಡ್​ ಸಿನಿಮಾಗಳು ಮತ್ತು ಅಮೆರಿಕದ ಕಿರುತೆರೆ ಕಾರ್ಯಕ್ರಮಗಳ ಮೂಲಕ ಫೇಮಸ್​ ಆಗಿದ್ದ ನಟ ಜೋ ಲಾರಾ ಅವರು ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಶನಿವಾರ (ಮೇ 29) ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಈ ವಿಮಾನದಲ್ಲಿ ಜೋ ಲಾರಾ ಮತ್ತು ಅವರ ಪತ್ನಿ ಸೇರಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು. ಅಮೆರಿಕದ ಟಿನಸಿಯಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಖಾಸಗಿ ಜೆಟ್​ ಪತನವಾಗಿದೆ ಎಂದು ವರದಿ ಆಗಿದೆ. ಜೋ ಲಾರಾ ಅವರಿಗೆ 58 ವರ್ಷ ವಯಸ್ಸಾಗಿತ್ತು.

ಆಪಘಾತ ಸಂಭವಿಸಿದ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ತೆರಳಿದ್ದಾರೆ. ಆದರೂ ಪ್ರಯಾಣಿಕರು ಯಾರೂ ಬದುಕುಳಿದಿಲ್ಲ. ಬಳಿಕ ಮೃತರ ಕುಟುಂಬಗಳಿಗೆ ಸುದ್ದಿ ಮುಟ್ಟಿಸಲಾಗಿದೆ. ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಜೋ ಲಾರಾ ಮತ್ತು ಅವರ ಪತ್ನಿ ಜೊತೆ ಪ್ರಯಾಣಿಸುತ್ತಿದ್ದ ಇನ್ನುಳಿದವರೆಲ್ಲ ಸ್ಥಳೀಯರು ಎಂದು ಹೇಳಲಾಗಿದೆ. ಜೋ ಲಾರಾ ಪತ್ನಿ ವೃತ್ತಿಪರ ಡಯಟೀಶಿಯನ್​ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ನಟನಾಗಿ, ಮಾರ್ಷಲ್​ ಆರ್ಟ್ಸ್​ ಕಲಾವಿದನಾಗಿ, ಸಂಗೀತಗಾರನಾಗಿ ಜೋ ಲಾರಾ ಗುರುತಿಸಿಕೊಂಡಿದ್ದರು. ಅಮೆರಿಕದ ಟಿವಿ ಸೀರಿಯಲ್​ ‘ಟಾರ್ಜನ್​: ದಿ ಎಪಿಕ್​ ಅಡ್ವೆಂಚರ್ಸ್​’ನಲ್ಲಿ ಟಾರ್ಜನ್​ ಪಾತ್ರ ಮಾಡುವ ಮೂಲಕ ಅವರು ಹೆಚ್ಚು ಫೇಮಸ್​ ಆಗಿದ್ದರು. ಜೋ ಲಾರಾ ನಿಧನಕ್ಕೆ ವಿಶ್ವಾದ್ಯಂತ ಇರುವ ಅಭಿಮಾನಿಗಳು ಮತ್ತು ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:

Venkat Subha Death: ಕೊರೊನಾ ವೈರಸ್​ನಿಂದ ಮತ್ತೋರ್ವ ಜನಪ್ರಿಯ ನಟ ವೆಂಕಟ್​ ಶುಭಾ ನಿಧನ

‘ಬೆಂಕಿ ಬಿರುಗಾಳಿ’ ಖ್ಯಾತಿಯ ಹಿರಿಯ ನಿರ್ದೇಶಕ, ಕಲಾವಿದ ತಿಪಟೂರು ರಘು ನಿಧನ

Published On - 9:48 am, Mon, 31 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us