ಸಿನಿಮಾಕ್ಕೆ ಹೋದರೆ ಪಾರ್ಕಿಂಗ್​​ಗೆ ಹಣ ಕೊಡಬೇಕಿಲ್ಲ: ಹೈಕೋರ್ಟ್ ಆದೇಶ

Movie Ticket: ಚಿತ್ರಮಂದಿರ, ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದಲೂ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಸಿನಿಮಾ ಟಿಕೆಟ್ ಖರೀದಿ ಮಾಡಿದಾಗಲೇ ಚಿತ್ರಮಂದಿರದ ಅಥವಾ ಮಲ್ಟಿಪ್ಲೆಕ್ಸ್​ನ ಗ್ರಾಹಕ ಆಗಿರುವ ಪ್ರೇಕ್ಷಕನಿಗೆ ಪಾರ್ಕಿಂಗ್ ಅನ್ನು ಉಚಿತವಾಗಿ ಅಥವಾ ಸೇವೆಯ ರೂಪದಲ್ಲಿ ಕೊಡಬೇಕು ಎಂಬ ವಾದ ಇತ್ತು. ಇದೀಗ ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಸಿನಿಮಾಕ್ಕೆ ಹೋದರೆ ಪಾರ್ಕಿಂಗ್​​ಗೆ ಹಣ ಕೊಡಬೇಕಿಲ್ಲ: ಹೈಕೋರ್ಟ್ ಆದೇಶ
Movie Theater

Updated on: Mar 07, 2026 | 3:03 PM

ಸಿನಿಮಾ (Cinema) ವೀಕ್ಷಣೆಗೆ ಖರ್ಚಾಗುವ ಮೊತ್ತ ಹೆಚ್ಚಾಗಿದೆ ಎಂದು ಸಿನಿಮಾ ನಿರ್ಮಾಪಕರು, ವಿತಕರು ಮುಖ್ಯವಾಗಿ ಪ್ರೇಕ್ಷಕರು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಸಿನಿಮಾ ಟಿಕೆಟ್ ದರ, ಚಿತ್ರಮಂದಿರದಲ್ಲಿ ಸಿಗುವ ಪಾಪ್​​ಕಾರ್ನ್ , ಪೆಟ್ರೋಲ್-ಡೀಸೆಲ್ ದರ ಹೆಚ್ಚಾಗಿ ಪ್ರಯಾಣದ ಮೊತ್ತ ಹೆಚ್ಚಾಗಿದೆ. ಇದೆಲ್ಲದರ ಜೊತೆಗೆ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಸಹ ನೀಡಬೇಕಿದೆ. ಆದರೆ ಈ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದಲೂ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಸಿನಿಮಾ ಟಿಕೆಟ್ ಖರೀದಿ ಮಾಡಿದಾಗಲೇ ಚಿತ್ರಮಂದಿರದ ಅಥವಾ ಮಲ್ಟಿಪ್ಲೆಕ್ಸ್​ನ ಗ್ರಾಹಕ ಆಗಿರುವ ಪ್ರೇಕ್ಷಕನಿಗೆ ಪಾರ್ಕಿಂಗ್ ಅನ್ನು ಉಚಿತವಾಗಿ ಅಥವಾ ಸೇವೆಯ ರೂಪದಲ್ಲಿ ಕೊಡಬೇಕು ಎಂಬ ವಾದ ಇತ್ತು. ಇದೀಗ ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಇನ್ನು ಮುಂದೆ ಸಿನಿಮಾ ನೋಡಲು ಹೋದ ಪ್ರೇಕ್ಷಕನಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್​​ನಲ್ಲಿ ಯಾವುದೇ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ. ಆದರೆ ಇದು ಸದ್ಯಕ್ಕೆ ಕರ್ನಾಟಕದಲ್ಲಿ ಜಾರಿಯಲ್ಲಿಲ್ಲ. ಇದು ಜಾರಿಯಲ್ಲಿರುವುದು ತೆಲಂಗಾಣದಲ್ಲಿ ಮಾತ್ರ. ಆರಂಭದಲ್ಲಿ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿತ್ತು. ಬಳಿಕ ಸರ್ಕಾರವು ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳೆರಡರಲ್ಲೂ ಸಹ ಸಿನಿಮಾ ನೋಡಲು ಬಂದವರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶಿಸಿತು.

ಆದರೆ ಕೋವಿಡ್ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಸರ್ಕಾರವನ್ನು ಮನವಿ ಮಾಡಿ, ಆದೇಶದಿಂದ ವಿನಾಯಿತಿ ಪಡೆದರು. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ವಿನಾಯಿತಿ ಚಾಲ್ತಿಯಲ್ಲಿತ್ತು. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಈ ಸಂಬಂಧ ಸಲ್ಲಿಕೆ ಆಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ ಎರಡರಲ್ಲೂ ಸಿನಿಮಾ ನೋಡಲು ಬಂದ ಪ್ರೇಕ್ಷಕನಿಂದ ಕಡ್ಡಾಯವಾಗಿ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದಿದೆ. ಆ ಮೂಲಕ ಈ ಹಿಂದಿನ ಸರ್ಕಾರಿ ಆದೇಶವನ್ನು ರದ್ದು ಮಾಡಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಟ್ರೇಲರ್ ಚೆನ್ನಾಗಿದ್ದರೂ ಅಭಿಮಾನಿಗಳಿಗೆ ಕಾಣ್ತಿದೆ ಕೊರತೆ

ಕರ್ನಾಟಕದಲ್ಲಿ ಈ ನಿಯಮ ಜಾರಿಯಲ್ಲಿಲ್ಲ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಭರಿಸುವುದು ಕಡ್ಡಾಯ ಆಗಿದೆ. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ಗಂಟೆಗೆ 80 ರಿಂದ 100 ರೂಪಾಯಿ ಸಹ ವಸೂಲಿ ಮಾಡಲಾಗುತ್ತದೆ. ಅಲ್ಲಿಗೆ ಒಂದು ಸಿನಿಮಾ ನೋಡಿ ಮರಳುವಷ್ಟರಲ್ಲಿ ಪಾರ್ಕಿಂಗ್ ಶುಲ್ಕವೇ ಸುಮಾರು 200-300 ಆಗಿರುತ್ತದೆ. ತೆಲಂಗಾಣ ರೀತಿಯ ನಿಯಮ ಕರ್ನಾಟಕದಲ್ಲಿಯೂ ಜಾರಿಗೆ ಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us