ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು

ಅನುಷಾ ಮತ್ತು ಧರ್ಮರ ನಡುವೆ ಮುನಿಸು ಉಂಟಾಯಿತು. ಧರ್ಮ ಅನುಷಾರ ತಂಡವನ್ನು ನಾಮಿನೇಟ್ ಮಾಡಿದ್ದರಿಂದ ಅವರ ನಡುವೆ ಜಗಳವಾಯಿತು. ಒಂದು ರೊಮ್ಯಾಂಟಿಕ್ ಕಿಸ್ ಮೂಲಕ ಅವರ ಮುನಿಸು ಕೊನೆಗೊಂಡಿತು.

ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು
ಅನುಷಾ-ಧರ್ಮ

Updated on: Nov 16, 2024 | 7:50 AM

ಅನುಷಾ ರೈ ಹಾಗೂ ಧರ್ಮ ಹಲವು ವರ್ಷಗಳಿಂದ ಗೆಳೆಯರು. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಧರ್ಮ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಧರ್ಮ ಕೂಡ ಅನುಷಾ ಮೇಲೆ ವಿಶೇಷ ಕಾಳಜಿ ತೋರಿಸುತ್ತಾರೆ. ಆದರೆ, ಈ ವಾರ ಎಲ್ಲವೂ ಬದಲಾಗಿತ್ತು. ಧರ್ಮ ಹಾಗೂ ಅನುಷಾ ಮಧ್ಯೆ ಮುನಿಸು ಮೂಡಿತ್ತು. ಈಗ ಸಿಹಿಮುತ್ತಿನಿಂದ ಎಲ್ಲವೂ ತಿಳಿಯಾಗಿದೆ. ಮುನಿಸು ಮರೆಯಾಗಿದೆ.

ಅನುಷಾ ಹಾಗೂ ಧರ್ಮ ಈ ಬಾರಿ ಒಟ್ಟಿಗೆ ಇರೋಕೆ ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಜೋಡಿ ಟಾಸ್ಕ್. ಅನುಷಾ ಅವರು ಸುರೇಶ್​ಗೆ ಜೊತೆಯಾದರೆ ಧರ್ಮ ಅವರು ಐಶ್ವರ್ಯಾಗೆ ಜೊತೆಯಾದರು. ಇನ್ನು ನೇರ ನಾಮಿನೇಷನ್ ಮಾಡುವಾಗ ಧರ್ಮ ಅವರು ಅನುಷಾ ತಂಡವನ್ನು ನಾಮಿನೇಟ್ ಮಾಡಿದರು. ಇದು ಅನುಷಾ ಕೋಪಕ್ಕೆ ಕಾರಣ ಆಯಿತು. ಅವರು ಇದನ್ನು ಸಹಿಸಿಕೊಳ್ಳಲೇ ಇಲ್ಲ. ಈ ಕಾರಣಕ್ಕೆ ಇಬ್ಬರ ಮಧ್ಯೆ ಕಿತ್ತಾಟ ನಡೆಯಿತು.

ಕೆಲವು ದಿನಗಳ ಕಾಲ ಅನುಷಾ ಹಾಗೂ ಧರ್ಮ ಸರಿಯಾಗಿ ಮಾತನಾಡಿಕೊಳ್ಳಲೇ ಇಲ್ಲ. ಇತ್ತೀಚೆಗೆ ಇಬ್ಬರೂ ಕುಳಿತು ಮಾತನಾಡಿದ್ದರು. ‘ನನಗೆ ಎಲ್ಲರೂ ನಾಲಾಯಕ್ ಎಂದರು. ಹೀಗಾಗಿ, ನಾನು ನನ್ನ ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು ಧರ್ಮ. ಇದನ್ನು ಅನುಷಾ ಅರ್ಥ ಮಾಡಿಕೊಂಡರು. ಈ ಮಾತುಕತೆಯಿಂದ ಪರಿಸ್ಥಿತಿ ಸ್ವಲ್ಪ ತಿಳಿ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ

ಈಗ ಜೋಡಿ ಟಾಸ್ಕ್ ನಡೆಯುವಾಗಲೇ ಕಿಚನ್​ನಲ್ಲಿ ಅನುಷಾ, ಧರ್ಮ, ಸುರೇಶ್ ಹಾಗೂ ಐಶ್ವರ್ಯಾ ನಿಂತಿದ್ದರು. ಈ ವೇಳೆ ಅನುಷಾ ಹಾಗೂ ಧರ್ಮ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಎಂದು ಕೋರಲಾಯಿತು. ಅದೇ ರೀತಿ ಧರ್ಮ ಹಾಗೂ ಅನುಷಾ ಕ್ಲೋಸ್​ಅಪ್​ನಲ್ಲಿ ಬಂದರು. ಆಗ ಧರ್ಮ ಅವರು ಅನುಷಾರನ್ನು ಎಳೆದುಕೊಂಡು ತಲೆಗೆ ಮುತ್ತಿಟ್ಟರು. ಈ ಮೂಲಕ ಮುನಿಸು ಕೊನೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Sat, 16 November 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us