ತಲೆ ಬೋಳಿಸಿಕೊಂಡು ಅಲ್ಲಿ ಕಿಚ್ಚ ಸುದೀಪ್ ಹೆಸರು ಬರೆದುಕೊಳ್ಳಲು ಮುಂದಾದ ಆರ್ಯವರ್ಧನ್

ಆರ್ಯವರ್ಧನ್​ಗೆ ಕಿಚ್ಚ ಸುದೀಪ್ ಎಂದರೆ ಎಲ್ಲಿಲ್ಲದ ಪ್ರೀತಿ. ವೀಕೆಂಡ್ ಸಂದರ್ಭದಲ್ಲಿ ಸುದೀಪ್ ಬಂದಾಗ ಅವರ ಬಳಿ ಈ ಮಾತನ್ನು ಆರ್ಯವರ್ಧನ್ ಹೇಳುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ರಿಪೀಟ್ ಆಗಿದೆ.

ತಲೆ ಬೋಳಿಸಿಕೊಂಡು ಅಲ್ಲಿ ಕಿಚ್ಚ ಸುದೀಪ್ ಹೆಸರು ಬರೆದುಕೊಳ್ಳಲು ಮುಂದಾದ ಆರ್ಯವರ್ಧನ್
ಆರ್ಯವರ್ಧನ್​-ಸುದೀಪ್
Edited By:

Updated on: Nov 12, 2022 | 6:30 AM

ಆರ್ಯವರ್ಧನ್ (Aryvardhan) ಅವರು ‘ಬಿಗ್ ಬಾಸ್​’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋದು ಅನೇಕರಿಂದ ಸಾಧ್ಯವಾಗಿಲ್ಲ. ಒಂದು ಕ್ಷಣ ಒಂದು ರೀತಿ ಇರುವ ಅವರು ಮತ್ತೊಂದು ಕ್ಷಣಕ್ಕೆ ಬದಲಾಗುತ್ತಾರೆ. ಒಮ್ಮೆ ನಗುತ್ತಾ ಇರುವ ಅವರು ಮತ್ತೊಂದು ಕ್ಷಣಕ್ಕೆ ಕೋಪಗೊಳ್ಳುತ್ತಾರೆ. ಈ ವಾರ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದರು. ಆದರೆ, ಇದಕ್ಕೆ ದಿವ್ಯಾ ಉರುಡುಗ ಬ್ರೇಕ್ ಹಾಕಿದ್ದಾರೆ.

ಆರ್ಯವರ್ಧನ್​ಗೆ ಕಿಚ್ಚ ಸುದೀಪ್ ಎಂದರೆ ಎಲ್ಲಿಲ್ಲದ ಪ್ರೀತಿ. ವೀಕೆಂಡ್ ಸಂದರ್ಭದಲ್ಲಿ ಸುದೀಪ್ ಬಂದಾಗ ಅವರ ಬಳಿ ಈ ಮಾತನ್ನು ಆರ್ಯವರ್ಧನ್ ಹೇಳುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ರಿಪೀಟ್ ಆಗಿದೆ. ‘ಸರ್ ನಿಮ್ಮನ್ನು ನೋಡೋದೇ ಒಂದು ಸೌಭಾಗ್ಯ’ ಎಂದು ಆರ್ಯವರ್ಧನ್ ಅನೇಕ ಬಾರಿ ಹೇಳಿದ್ದು ಇದೆ. ಈಗ ಕಿಚ್ಚ ಸುದೀಪ್ ಹೆಸರನ್ನು ಆರ್ಯವರ್ಧನ್ ತಲೆಯಮೇಲೆ ಬರೆಸಿಕೊಳ್ಳಲು ಮುಂದಾಗಿದ್ದರು.

ಬಣ್ಣ ಬಳಿದುಕೊಂಡು ಜೋಕರ್ ಮುಖವಾಡ ಹಾಕಿಕೊಂಡರು ಅರುಣ್ ಸಾಗರ್. ಆರ್ಯವರ್ಧನ್ ಕೂಡ ಬಣ್ಣದಿಂದ ಜೋಕರ್ ಮುಖವಾಡ ಹಾಕಿಕೊಂಡಿದ್ದಾರೆ. ಜೊತೆಗೆ ತಲೆ ಬೋಳಿಸಿಕೊಂಡು ತಲೆಯ ಮೇಲೆ ಕಿಚ್ಚ ಸುದೀಪ್ ಎಂದು ಬರೆಸಿಕೊಳ್ಳಲು ಮುಂದಾದರು. ಆದರೆ, ಇದಕ್ಕೆ ದಿವ್ಯಾ ಒಪ್ಪಲಿಲ್ಲ. ಹೀಗಾಗಿ, ದಿವ್ಯಾ ಅವರು ಆರ್ಯವರ್ಧನ್ ಅವರ ಒಂದು ತೋಳಿಗೆ ಕಿಚ್ಚ ಮತ್ತೊಂದು ತೋಳಿಗೆ ಸುದೀಪ್​ ಎಂದು ಬರೆದುಕೊಟ್ಟಿದ್ದಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ತಲೆ ಬೋಳಿಸಿಕೊಳ್ಳುತ್ತೇನೆ. ಅಲ್ಲಿ ಕಿಚ್ಚ ಸುದೀಪ್ ಎಂದು ಬರೆಯಿರಿ ಎಂದು ಆರ್ಯವರ್ಧನ್​ ಕೋರಿದ್ದರು. ಬೇಡ ಗುರುಗಳೇ ಆ ರೀತಿ ಮಾಡೋದು ಬೇಡ ಎಂದು ನಾನು ಹೇಳಿದೆ. ಕೊನೆಗೂ ನನ್ನ ಮಾತಿಗೆ ಒಪ್ಪಿದರು. ತೋಳಿನ ಮೇಲೆ ಕಿಚ್ಚ ಸುದೀಪ್ ಎಂದು ಬರೆಸಿಕೊಳ್ಳಲು ಅವರು ಒಪ್ಪಿಕೊಂಡರು’ ಎಂದಿದ್ದಾರೆ ದಿವ್ಯಾ ಉರುಡುಗ.‘

ಇದನ್ನೂ ಓದಿ: ರೂಪೇಶ್ ಶೆಟ್ಟಿ ಮಾಡಿದ ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ನೀಡಿದ ಬಿಗ್ ಬಾಸ್​

ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಅವರು ರೂಪೇಶ್ ಶೆಟ್ಟಿ ಮುಖಕ್ಕೆ ಬಣ್ಣ ಬಳಿದಿದ್ದಾರೆ. ಕೆನ್ನೆಗೆ ಹಾರ್ಟ್ ಮಾರ್ಕ್ ಹಾಕಿದ್ದಾರೆ. ಅಲ್ಲದೆ, ಹಣೆಗೆ ಪಟ್ಟಿ ಕಟ್ಟಿ ಸಾನ್ಯಾ ಎಂದು ಬರೆಸಿಕೊಂಡಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us