ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ

ಬಿಗ್ ಬಾಸ್ ಕನ್ನಡ ಸೀಸನ್ 13ರ ಆಡಿಷನ್‌ ಆರಂಭವಾಗಿದೆ. ಮನೆಗೆ ಹೋಗಲು ಬಯಸುವ ಸ್ಪರ್ಧಿಗಳು ಆಡಿಷನ್ ವಿಡಿಯೋ ಮಾಡುವಾಗ ಸಾಮಾನ್ಯ ತಪ್ಪುಗಳನ್ನು ತಪ್ಪಿಸಬೇಕು. 3 ನಿಮಿಷದ ಸ್ಪಷ್ಟ, ಉತ್ತಮ ಗುಣಮಟ್ಟದ ವಿಡಿಯೋ ಮಾಡಿ. ನಿಮ್ಮ ವ್ಯಕ್ತಿತ್ವ ಹಾಗೂ ಅರ್ಹತೆಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿ. ಸರಿಯಾದ ವೆಬ್‌ಸೈಟ್‌ನಲ್ಲಿ ಮಾತ್ರ ಅಪ್‌ಲೋಡ್ ಮಾಡಿ, ನಿಮ್ಮ ಬಿಗ್ ಬಾಸ್ ಕನಸು ನನಸಾಗಿಸಿಕೊಳ್ಳಿ.

ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ
ಸುದೀಪ್

Updated on: Jun 09, 2026 | 2:04 PM

ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಹೋಗಲು ಕಲರ್ಸ್ ಕನ್ನಡ ವಾಹಿನಿ ಸುವರ್ಣಾವಕಾಶ ನೀಡಿದೆ. ಈಗಾಗಲೇ ಸಾವಿರಾರು ಜನ ತಮ್ಮ ಅದೃಷ್ಟ ಪರೀಕ್ಷಿಸಲು ಆಡಿಷನ್ ವಿಡಿಯೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ, ನೀವು ಮಾಡುವ ಒಂದು ಸಣ್ಣ ತಪ್ಪು ನಿಮ್ಮ ಬಿಗ್ ಬಾಸ್ ಕನಸನ್ನು ಭಂಗಗೊಳಿಸಬಹುದು!

ನಿಮ್ಮ ಆಡಿಷನ್ ವಿಡಿಯೋ ರಿಜೆಕ್ಟ್ ಆಗಬಾರದು ಎಂದರೆ ವಿಡಿಯೋ ಮಾಡುವಾಗ ಈ ಕೆಳಗಿನ ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ವಿಡಿಯೋ ಹಂಚಿಕೊಂಡಿದೆ.

3 ನಿಮಿಷಗಳ ನಿಖರ ವಿಡಿಯೋ ಇರಲಿ:

ವಾಹಿನಿ ನೀಡಿರುವ ಅಧಿಕೃತ ನಿಯಮದ ಪ್ರಕಾರ, ನಿಮ್ಮ ಆಡಿಷನ್ ವಿಡಿಯೋ ಕಡ್ಡಾಯವಾಗಿ 3 ನಿಮಿಷಗಳ ಕಾಲಾವಧಿಯದ್ದೇ ಆಗಿರಬೇಕು. ಅದಕ್ಕಿಂತ ತೀರಾ ಕಡಿಮೆ ಅಥವಾ ಅತಿ ಉದ್ದದ ವಿಡಿಯೋಗಳನ್ನು ಮಾಡಿದರೆ ಅವುಗಳನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಿಗದಿತ ಸಮಯದೊಳಗೇ ನಿಮ್ಮ ವಿವರಣೆಯನ್ನು ಅಚ್ಚುಕಟ್ಟಾಗಿ ನೀಡಬೇಕು.

ಸ್ಪಷ್ಟವಾದ ವಿವರಣೆ ಅತ್ಯಗತ್ಯ:

ವಿಡಿಯೋದಲ್ಲಿ ಕೇವಲ ನಿಮ್ಮ ಹೆಸರು, ಊರು ಹೇಳುವುದಷ್ಟೇ ಅಲ್ಲದೆ, ‘ನೀವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಅರ್ಹರು?’ ಮತ್ತು ‘ನಿಮ್ಮ ವ್ಯಕ್ತಿತ್ವದ ವಿಶೇಷತೆ ಏನು?’ ಎಂಬುದನ್ನು ನಿಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟವಾಗಿ ವಿವರಿಸಬೇಕು. ನಿಮ್ಮ ಮುಗ್ಧತೆ, ಧೈರ್ಯ ಅಥವಾ ಯಾವುದೇ ವಿಭಿನ್ನ ಪ್ರತಿಭೆ ಇದ್ದರೆ ಅದನ್ನು ಮುಕ್ತವಾಗಿ ಹಂಚಿಕೊಳ್ಳಿ.

ಬಿಗ್ ಬಾಸ್ ಪ್ರೋಮೋ

ವೀಡಿಯೊ ಕ್ವಾಲಿಟಿ ಮತ್ತು ಹಿನ್ನೆಲೆ:

ಅನೇಕರು ಆತುರದಲ್ಲಿ ಕತ್ತಲಿರುವ ಜಾಗದಲ್ಲಿ ಅಥವಾ ಅತಿ ಹೆಚ್ಚು ಗಲಾಟೆ ಇರುವಲ್ಲಿ ವಿಡಿಯೋ ಮಾಡುತ್ತಾರೆ. ಇಂತಹ ತಪ್ಪು ಮಾಡಬೇಡಿ. ನಿಮ್ಮ ಮುಖ ಮತ್ತು ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಉತ್ತಮ ಬೆಳಕಿರುವ ಜಾಗದಲ್ಲಿ ವಿಡಿಯೋ ರೆಕಾರ್ಡ್ ಮಾಡಿ.

ಇದನ್ನೂ ಓದಿ:

ಅಪ್‌ಲೋಡ್ ಮಾಡುವುದು ಹೇಗೆ?

ನಿಮ್ಮ 3 ನಿಮಿಷದ ವಿಡಿಯೋ ಸಿದ್ಧವಾದ ಬಳಿಕ, ಅದನ್ನು ವಾಹಿನಿಯ ಅಧಿಕೃತ ವೆಬ್‌ಸೈಟ್ ಆದ colorskannada.jiostar.com ಗೆ ಭೇಟಿ ನೀಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಕೆಲವರು ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಕಲರ್ಸ್ ಕನ್ನಡಕ್ಕೆ ಟ್ಯಾಗ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:27 pm, Tue, 9 June 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us