
ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 20’ ಅದ್ದೂರಿಯಾಗಿ ಶುರುವಾಗಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ನಿರೂಪಕನಾಗಿ ಕಮಾಲ್ ಮಾಡಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಭಾಗವಹಿಸಲಿರುವ ಹಲವು ಸ್ಪರ್ಧಿಗಳು ಬಂದಿದ್ದಾರೆ. ಬಾಕ್ಸಿಂಗ್ ತಾರೆ ಮೇರಿ ಕೋಮ್ ಸೇರಿದಂತೆ ಹಲವು ಕ್ಷೇತ್ರದ ಖ್ಯಾತ ತಾರೆಯರು ದೊಡ್ಮನೆ ಪ್ರವೇಶಿಸಿದ್ದಾರೆ ಅನ್ನೋದು ವಿಶೇಷ.
ಈ ಬಾರಿಯ ಸೀಸನ್‌ನಲ್ಲಿ ಸ್ಪರ್ಧಿಗಳಿಗೆ ‘ವರ್ದಾನ್’ ಮತ್ತು ‘ಜೀವನ್‌ದಾನ್’ ಹೆಸರಿನ ವಿಶೇಷ ಲೈಫ್‌ಲೈನ್‌ಗಳನ್ನು ನೀಡಲಾಗುತ್ತಿದೆ. ಇದು ಆಟದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ದೊಡ್ಮನೆ ಪ್ರವೇಶಿಸಿರುವ ಪ್ರಮುಖ ಸ್ಪರ್ಧಿಗಳಲ್ಲಿ ಒಲಿಂಪಿಕ್ ಪದಕ ವಿಜೇತ ಮೇರಿ ಕೋಮ್ ಪ್ರಮುಖರು. ಅವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಭೋಜ್‌ಪುರಿ ನಟಿ ಆಮ್ರಪಾಲಿ ದುಬೆ ಹಾಗೂ ಹಿರಿಯ ನಟಿ ಗೀತಾ ಬಸ್ರಾ ಕೂಡ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಇವರ ಜೊತೆಗೆ ಕಿರುತೆರೆಯ ಖ್ಯಾತ ನಟಿಯರಾದ ಮಹಿ ವಿಜ್ ಮತ್ತು ಕನಿಕಾ ಮಾನ್ ಭಾಗವಹಿಸಿದ್ದಾರೆ.
ಒಟಿಟಿ ನಟ ಆಸಿಫ್ ಖಾನ್, ಗೇಮಿಂಗ್ ಸ್ಟಾರ್ ತನ್ಮಯ್ ಸಿಂಗ್ (ಸ್ಕೌಟ್) ಹಾಗೂ ರಿಯಾಲಿಟಿ ಶೋ ವಿಜೇತ ಕುಶಾಲ್ ತನ್ವಾರ್ ಪ್ರವೇಶಿಸುತ್ತಿದ್ದಾರೆ. ಗಾಯಕ ಖಾಜಿ ತೌಕೀರ್, ಪಂಜಾಬಿ ನಟಿ ಹಾಗೂ ಬಾದ್ಶಾ ಮಾಜಿ ಪತ್ನಿ ಇಶಾ ರಿಖಿ, ಲವ್ ಗಿಲ್ ಮತ್ತು ಮಾಡೆಲ್ ಉದಿತಿ ಸಿಂಗ್ ಕೂಡ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಪ್ರಥಮಾ ಪ್ರಸಾದ್ಗೆ ಬಾಡಿ ಶೇಮಿಂಗ್ ಮಾಡಿ ವಿವಾದಕ್ಕೆ ಸಿಲುಕಿದ ಕಿರಣ್ ಶಾಸ್ತ್ರಿ
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅರ್ಷಿಫಾ ಖಾನ್, ರ‍್ಯಾಪರ್ ಯಂಗ್ ಡಿಎಸ್‌ಎ, ಮಾಡೆಲ್ ರಿಯಾ ಅಹಿರ್ ಸೇರಿದ್ದಾರೆ. ಇವರೊಂದಿಗೆ ಸಿಂಗರ್ ರೀತಿ ತಿವಾರಿ ಹಾಗೂ ವಿದೇಶಿ ಮೂಲದ ನಟ ರೋಹೆಡ್ ಖಾನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಒಟ್ಟಿನಲ್ಲಿ ವಿವಿಧ ರಂಗಗಳ 18 ಜನಪ್ರಿಯ ಮುಖಗಳು ಈ ಬಾರಿ ದೊಡ್ಮನೆಯಲ್ಲಿ ಕಾಂಪೀಟ್ ಮಾಡಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.