ಬಿಗ್ ಬಾಸ್ನಲ್ಲಿ ಪ್ರಥಮಾ ಪ್ರಸಾದ್ಗೆ ಬಾಡಿ ಶೇಮಿಂಗ್ ಮಾಡಿ ವಿವಾದಕ್ಕೆ ಸಿಲುಕಿದ ಕಿರಣ್ ಶಾಸ್ತ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13ರ ಆರಂಭದಲ್ಲೇ ದೊಡ್ಡ ವಿವಾದ ಸೃಷ್ಟಿಯಾಗಿದೆ. ನಟಿ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಅವರಿಗೆ ‘ಆಂಟಿ’ ಎಂದು ಕರೆದು ಬಾಡಿ ಶೇಮಿಂಗ್ ಮಾಡಿದ ಕಿರಣ್ ಶಾಸ್ತ್ರಿ ಹಾಗೂ ಮಾಡರ್ನ್ ಮಹಾಕವಿ ಮಂಜ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೊದಲ ದಿನವೇ ದೊಡ್ಮನೆಯಲ್ಲಿ ಜಗಳದ ವಾತಾವರಣ ನಿರ್ಮಾಣವಾಗಿದೆ.

ಮುಖ್ಯಾಂಶಗಳು
- ಆಂಟಿ ಅಂದಿದ್ದಕ್ಕೆ ಪ್ರಥಮಾ ಗರಂ
- ಬಾಡಿ ಶೇಮಿಂಗ್‌ಗೆ ಕಟು ತಿರುಗೇಟು
- ಭವಿಷ್ಯ ಹೇಳಲು ಹೋಗಿ ಪೆಚ್ಚಾದ ಕಿರಣ್ ಶಾಸ್ತ್ರಿ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಬಿಗ್ ಬಾಸ್ (BBK) ಮನೆಗೆ ಕಾಲಿಟ್ಟಿರೋ ಕಿರಣ್ ಶಾಸ್ತ್ರಿ ಅವರು ಆರಂಭದಲ್ಲೇ ದೊಡ್ಡ ವಿವಾದ ಮಾಡುವ ಸೂಚನೆಯನ್ನು ಕೊಟ್ಟಿದ್ದಾರೆ. ವಿನಯಾ ಪ್ರಸಾದ್ ಮಗಳು ಪ್ರಥಮಾಪ್ರಸಾದ್ ಅವರನ್ನು ಆಂಟಿ ಎಂದು ಕರೆದರು. ಅಲ್ಲದೆ ಅವರಿಗೆ ಬಾಡಿ ಶೇಮಿಂಗ್ ಮಾಡಿದ್ದಾರೆ. ಮೊದಲ ದಿನವೇ ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕಿರಣ್ ಇದೇ ರೀತಿ ಮುಂದುವರಿದರೆ ಅವರು ಸಾಕಷ್ಟು ಜಗಳಗಳನ್ನು ಸೃಷ್ಟಿಸಬಹುದು ಎಂದು ಊಹಿಸಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. 60 ಜನ ಸಾಮಾನ್ಯರನ್ನು ಆಡಿಷನ್ ಮಾಡಿ ಈ ಪೈಕಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಧನುಷ್, ಲಿಖಿತ್, ಮಾಡರ್ನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಇದ್ದಾರೆ. ಕಿರಣ್ ಅವರು ಮುಖ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಈ ಮೊದಲು ಹೇಳಿದ್ದರು. ಬಿಗ್ ಬಾಸ್ ಮನೆಗೆ ಹೋದ ಬಳಿಕ ಎಲ್ಲರ ಮುಖ ನೋಡಿ ಭವಿಷ್ಯ ಹೇಳುವಂತೆ ಸೂಚನೆ ನೀಡಲಾಯಿತು.
ಕಿರಣ್ ಶಾಸ್ತ್ರಿ ಅವರು ಪ್ರಥಮಾ ಅವರನ್ನು ನೋಡಿ, ‘ಆಂಟಿ ಬನ್ನಿ ಇಲ್ಲಿ’ ಎಂದರು. ಇದನ್ನು ಕೇಳುತ್ತಿದ್ದಂತೆ ಪ್ರಥಮಾ ಸಿಟ್ಟಾಗಿದ್ದಾರೆ. ‘ನನ್ನನ್ನು ಆಂಟಿ ಎಂದು ಕರೆಯಬೇಡಿ. ನನಗೆ ನನ್ನದೇ ಆದ ಹೆಸರಿದೆ. ನನ್ನ ಹೆಸರು ಪ್ರಥಮಾ ಅಂತ. ಹಾಗೆಯೇ ಕರೆಯಿರಿ’ ಎಂದು ನೇರವಾಗಿ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳ ಫೋಟೋ, ವಿವರ ಇಲ್ಲಿದೆ
ಇಷ್ಟಕ್ಕೆ ನಿಲ್ಲಿಸದ ಮಾಡರ್ನ್ ಮಹಾಕವಿ ಮಂಜ, ಪ್ರಥಮಾ ಅವರನ್ನು ಆನೆ ಎಂಬ ಅರ್ಥ ಬರುವಂತೆ ಕರೆದಿದ್ದಾರೆ. ‘ನೋಡೋಕೆ ಬೇರೆ ಹಾಗೇ ಇದ್ದೀರಿ’ ಎಂದು ಹೇಳಿ ನಗಿಸಲು ಹೋದರು. ಆದರೆ, ಇದು ಪ್ರಥಮಾ ಅವರನ್ನು ಮತ್ತಷ್ಟು ಕೆರಳಿಸಿದೆ. ‘ಬಾಡಿ ಶೇಮಿಂಗ್ ಮಾಡೋದು ಸರಿ ಅಲ್ಲ’ ಎಂದು ಕಟುವಾಗೆ ಹೇಳಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿ ಮುಖ ಪೆಚ್ಚಗಾಯಿತು. ಮುಂದೆ ಅವರು ತಪ್ಪು ತಿದ್ದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Mon, 7 September 26




