- TV9 Kannada Photo gallery Bigg Boss Kannada Season 13: Full List of 16 Contestants with Photos and Details
ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳ ಫೋಟೋ, ವಿವರ ಇಲ್ಲಿದೆ
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಬರೋಬ್ಬರಿ 16 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳು ಯಾರ್ಯಾರು ಗೊತ್ತಾ? ಆ ಬಗ್ಗೆ ನಾವು ಫೋಟೋ ಹಾಗೂ ವಿವರದ ಬಗ್ಗೆ ಹೇಳುತ್ತಾ ಇದ್ದೇವೆ. ಸಂಪೂರ್ಣ ವಿವರ ಇಲ್ಲಿದೆ.
Updated on: Sep 07, 2026 | 7:09 AM

ಆಸಿಯಾ ಫಿರ್ದೋಸ್ ಅವರು ‘ಕನ್ಯಾಕುಮಾರಿ’ ಹಾಗೂ ಇತ್ತೀಚೆಗೆ ಕೊನೆಗೊಂಡ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ನಟಿ. ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಎಲ್ಲ ಮಿತಿಯನ್ನು ಮೀರಿ ಅವರು ಈ ಕ್ಷೇತ್ರಕ್ಕೆ ಬಂದಿದ್ದಾಗಿ ಹೇಳಿರೋ ಅವರು, ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.

ಅವಿನಾಶ್ ಶತಮರ್ಷನ್ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿರುವವರು 2018ರ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ದೊಡ್ಮನೆಯಲ್ಲಿ ಗಮನ ಸೆಳೆಯಲು ರೆಡಿ ಆಗಿದ್ದಾರೆ.

ಗಗನ್ ಚಿನ್ನಪ್ಪ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ‘ಮಂಗಳ ಗೌರಿ ಮದುವೆ’ ಹಾಗೂ ‘ಸೀತಾ ರಾಮ ಕಲ್ಯಾಣ’ ಧಾರಾವಾಹಿಯಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

‘ಜಗ್ಗ ಮಮ್ಮಿ’ ಎಂದೇ ಫೇಮಸ್ ಆದವರು ಜಗದೀಶ್. ಅವರು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಅವರು ಮೈಸೂರಿನ ಮಹದೇವಪುರದವರು. ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ಜಗ್ಗ ಮಮ್ಮಿ ಆಪ್ತರು.

ಕಿರಣ್ ಶಾಸ್ತ್ರಿ ಅವರು ಉತ್ತರ ಕರ್ನಾಟಕದವರು. ಅವರು ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಮಾತು ಹಾಗೂ ಆಟದ ಮೂಲಕ ಗಮನ ಸೆಳೆದವರು. ಅವರು ಈಗ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟವರು ಕಿರಣ್ ಶಾಸ್ತ್ರಿ.

ಅಗ್ನಿಪರೀಕ್ಷೆಯಲ್ಲಿ ಎಲ್ಲರ ಗಮನ ಸೆಳೆದ ಲಿಖಿತ್ ಗೊಂದಿ ಅವರು ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರ ತಂದೆ ಕೂಡ ಅಗ್ನಿ ಪರೀಕ್ಷೆಯಲ್ಲಿ ಇದ್ದರು. ಆದರೆ, ಅವರಿಗೆ ಬಿಗ್ ಬಾಸ್ ವೇದಿಕೆ ಏರಲು ಸಾಧ್ಯವಾಗಿಲ್ಲ.

ಮಾಡರ್ನ್ ಮಹಾಕವಿ ಮಂಜು ಕೂಡ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಮಂಜು ಇದ್ದರು. ಅವರು ಜಡ್ಜ್ಗಳ ಆಯ್ಕೆ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

ಗಿನ್ನೆಸ್ ದಾಖಲೆ ಬರೆದವರು ಧನುಷ್. ಅಗ್ನಿಪರೀಕ್ಷೆಯಲ್ಲಿ ಬಂದಾಗ ಅವರು ಗಿನ್ನೆಸ್ ದಾಖಲೆ ಹರಿದು ಚರ್ಚೆ ಆಗಿದ್ದರು. ವಿವಿಧ ದೇಶಗಳಿಂದ ಸೈಕಲ್ ಹೊಡೆದು ಅವರು ಈ ದಾಖಲೆ ಬರೆದಿದ್ದರು. ಅವರು ಹರಿದು ಹಾಕಿದ್ದು ನಕಲಿ ಅಂತಾ ಆ ಬಳಿಕ ಗೊತ್ತಾಗಿತ್ತು. ಅಗ್ನಿಪರೀಕ್ಷೆಗೆ ಬಂದು ಈಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಓಂ ಪ್ರಕಾಶ್ ರಾವ್ ಅವರು ಕನ್ನಡದ ಖ್ಯಾತ ನಿರ್ದೇಶಕರು. ಇವರು ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ಬಂದಿದ್ದರು. ಅನಾರೋಗ್ಯದ ಕಾರಣದಿಂದ ಹೊರ ಹೋಗಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಬಂದಿದ್ದಾರೆ.

ಪ್ರಥಮಾ ಪ್ರಸಾದ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಎಂಟ್ರಿ ಕೊಟ್ಟ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. ಇವರು ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಎಂಬುದು ವಿಶೇಷ.

ಸಂಗೀತಾ ಭಟ್ ಅವರು ದೊಡ್ಮನೆಗೆ ಪ್ರವೇಶಿಸಿದ ಕಂಟೆಸ್ಟಂಟ್ಗಳಲ್ಲಿ ಒಬ್ಬರು. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಒಂದು ಹಂತದ ಬಳಿಕ ಅವರು ಸಿನಿಮಾ ರಂಗದಿಂದ ದೂರ ಉಳಿದರು. ಈಗ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಕಾವ್ಯಾ ಗೌಡ ಅವರು ‘ಭಾಗ್ಯಕ್ಷ್ಮೀ’ ಧಾರಾವಾಹಿಯಲ್ಲಿ ಶ್ರೇಷ್ಠ ಹೆಸರಿನ ಪಾತ್ರ ಮಾಡಿದ್ದರು. ಅವರು ಕಾವ್ಯಾ ಆಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಿಗ್ ಬಾಸ್ನಲ್ಲಿ ಯಾವ ರೀತಿಯಲ್ಲಿ ಆಡುತ್ತಾರೆ ಎಂಬ ಕುತೂಹಲ ಮೂಡಿದೆ.

ಸೌಂದರ್ಯಾ ಶೆಟ್ಟಿ ಹುಟ್ಟಿದ್ದು ಮಸ್ಕತ್ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಈಗ ಇರೋದು ಅವರು ಮುಂಬೈನಲ್ಲಿ. ಸ್ಪಿಟ್ಸ್ ವಿಲ್ಲಾದಲ್ಲಿ ಅವರು ಭಾಗವಹಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ತಾಂಡವ್ ರಾಮ್ ಹಲವು ವರ್ಷಗಳಿಂದಲೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಮೂಲತಃ ಹಾಸನದವರಾದ ತಾಂಡವ್ ರಾಮ್, ಶಿಕ್ಷಣ ಮುಗಿಸಿದ್ದೆಲ್ಲ ಹಾಸನದಲ್ಲೇ. ಅವರು ಮನೆಯಲ್ಲೇ ಗರಡಿಮನೆ ಹೊಂದಿದ್ದಾರೆ.

ಮಿಥುನ ರಾಶಿ ಸೀರಿಯಲ್ನಲ್ಲಿ ನಟಿಸಿದ್ದ ವೈಷ್ಣವಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬೋಲ್ಡ್ ಮಾತುಗಳಿಂದಲೇ ಅವರು ಗಮನ ಸೆಳೆದವರು. ‘ತುಂಬಾನೇ ಕ್ಲೀನ್ ಇರಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ವೈಷ್ಣವಿ.

ಪವಿತ್ರ ಬಂಧನ ಧಾರಾವಾಹಿಯಲ್ಲಿ ಕಥಾ ನಾಯಕ ಸೂರಜ್ ಅವರ ಸಹೋದರನ ಪಾತ್ರದಲ್ಲಿ ನಟಿಸಿದ್ದರು ಯಶಸ್. ಸಾವಿನೊಂದಿಗೆ ಇವರ ಪಾತ್ರ ಕೊನೆ ಆಗಿತ್ತು. ಅವರು ವೃತ್ತಿಯಲ್ಲಿ ಇಂಜಿನಿಯರ್.




