ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್ ಖಾನ್, ಗಂಗೂಲಿ, ಮೋಹನ್ಲಾಲ್
ನಟ ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ವೇದಿಕೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸೌರವ್ ಗಂಗೂಲಿ, ಮೋಹನ್ಲಾಲ್, ಸಲ್ಮಾನ್ ಖಾನ್ ಅವರು ವಿಶ್ ಮಾಡಿದ್ದಾರೆ. ಈ ಸರ್ಪ್ರೈಸ್ ನೋಡಿ ಸುದೀಪ್ ಅವರು ಖುಷಿ ಆಗಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ವೇದಿಕೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸೌರವ್ ಗಂಗೂಲಿ, ಮೋಹನ್ಲಾಲ್, ಸಲ್ಮಾನ್ ಖಾನ್ ಅವರು ವಿಶ್ ಮಾಡಿದ್ದಾರೆ. ಈ ಸರ್ಪ್ರೈಸ್ ನೋಡಿ ಸುದೀಪ್ ಅವರು ಖುಷಿ ಆಗಿದ್ದಾರೆ. ಅಲ್ಲದೇ, ಈ ಕ್ಷಣ ಅವರಿಗೆ ತುಂಬ ಎಮೋಷನಲ್ ಕೂಡ ಆಗಿತ್ತು. ಸುದೀಪ್ ತಂದೆ ಸಂಜೀವ್ ಅವರು ಮಾತನಾಡಿದ ಆಡಿಯೋ ಕ್ಲಿಪ್ ಪ್ಲೇ ಮಾಡಲಾಗಿದೆ. ಅದನ್ನು ಕೇಳಿಸಿಕೊಂಡ ಸುದೀಪ್ ಅವರು ಕಣ್ಣೀರು ಸುರಿಸುತ್ತ, ‘ಐ ಲವ್ ಯೂ ಅಪ್ಪ’ ಎಂದಿದ್ದಾರೆ. ಸೆಪ್ಟೆಂಬರ್ 27ರ ಬಿಗ್ ಬಾಸ್ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

