ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ

ಬಿಗ್ ಬಾಸ್ ಕನ್ನಡ 12ರ ಮೊದಲ ವಾರದಲ್ಲಿ ಕಾಕ್ರೋಚ್ ಸುಧಿ ಕಾರಣಕ್ಕೆ ದೊಡ್ಮನೆ ಹೊತ್ತಿ ಉರಿಯಿತು. ಟಾಸ್ಕ್ ನಿರ್ಧಾರದಲ್ಲಿ ಉಸ್ತುವಾರಿಗಳ ತಪ್ಪು ಹಾಗೂ ನಿಯಮ ಉಲ್ಲಂಘನೆ ಬಗ್ಗೆ ಬಿಗ್ ಬಾಸ್ ಪ್ರಶ್ನಿಸಿದಾಗ ಗೊಂದಲ ಹೆಚ್ಚಿತು. ಸುಧಿಗೆ ಮತ್ತೆ ಅವಕಾಶ ನೀಡುವ ಬಗ್ಗೆ ಧನುಷ್ ವಿರೋಧ ವ್ಯಕ್ತಪಡಿಸಿದರು. ಸುಧಿ ವಾದದಿಂದ ಇಡೀ ಮನೆಯಲ್ಲಿ ಅಶಾಂತಿ ಮೂಡಿದೆ.

ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ
ಸುಧಿ

Updated on: Oct 03, 2025 | 7:32 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮೊದಲ ವಾರವೇ ಕಿಡಿ ಹೊತ್ತಿಕೊಂಡಿದೆ. ‘ನಾನು-ನೀವು ಬೆಸ್ಟ್ ಫ್ರೆಂಡ್ಸ್’ ಎಂದು ಹೇಳಿಕೊಂಡವರ ಮಧ್ಯೆಯೇ ಕಿರಿಕ್ ಉಂಟಾಗಿದೆ. ಜಗಳದ ಕಾವು ಜೋರಾಗಿದೆ. ಈಗ ದೊಡ್ಮನೆಯಲ್ಲಿ ಕಾಕ್ರೋಚ್ ಸುಧಿ ಅವರು ಮೊದಲ ಬಾರಿಗೆ ಧ್ವನಿ ಎತ್ತಿದ್ದಾರೆ. ಅವರ ಕಾರಣಕ್ಕೆ ಇಡೀ ಮನೆಯಲ್ಲಿ ಬಿಸಿಯ ಕಾವು ಹೆಚ್ಚಿದೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೊದಲ ವಾರ ಜಂಟಿ ಹಾಗೂ ಒಂಟಿ ಎಂಬ ಎರಡು ತಂಡಗಳನ್ನು ರಚಿಸಲಾಗಿದೆ. ಎರಡೂ ತಂಡಗಳ ಮಧ್ಯೆ ಟಾಸ್ಕ್ ಏರ್ಪಡಿಸಲಾಗುತ್ತಿದೆ. ಈಗ ಮೂರನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್ ಆಯ್ಕೆ ಮಾಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಉಸ್ತುವಾರಿ ಆಗಿದ್ದರು. ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ ಕಲ್ಲೋಲ ಆಗಿದೆ.

ಟಾಸ್ಕ್ ನಡೆಯುವ ವೇಳೆ ಉಸ್ತುವಾರಿಗಳು ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಶ್ನೆ ಮೂಡಿದೆ. ಈ ಬಗ್ಗೆ ಬಿಗ್ ಬಾಸ್ ಕೂಡ ಪ್ರಶ್ನೆ ಮಾಡಿದರು. ಆ ಬಳಿಕ ಉಸ್ತುವಾರಿಗಳು ಗೊಂದಲಕ್ಕೆ ಸಿಲುಕಿದರು. ನಿಯಮ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿತ್ತು. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಎಲ್ಲರೂ ಕಂಗಾಲಾದರು. ಆಗ ಧನುಷ್ ಹಾಗೂ ಸುಧಿ ಮಧ್ಯೆ ಕಿರಿಕ್ ಆಗಿದೆ.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್
ಕ್ಲೈಮ್ಯಾಕ್ಸ್​ನಲ್ಲಿ ‘ಕಾಂತಾರ: ಚಾಪ್ಟರ್ 2’ ಬಗ್ಗೆ ಘೋಷಣೆ
ಪ್ರೀಮಿಯರ್ ಶೋಗಳಿಂದಲೇ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಸುಧಿ ಅವರು ತಮಗೆ ಆಟದಲ್ಲಿ ಮತ್ತೆ ಅವಕಾಶ ನೀಡಬೇಕು ಎಂದು ವಾದಿಸಿದ್ದಾರೆ. ಆದರೆ, ಉಸ್ತುವಾರಿಗಳು ಇದಕ್ಕೆ ಸಿದ್ಧರಿಲ್ಲ. ಅತ್ತ ಧನುಷ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದರು. ಸುಧಿಗೆ ಮತ್ತೆ ಅವಕಾಶ ನೀಡಿದರೆ ನನಗೆ ಮೋಸ ಆಗುತ್ತದೆ ಎಂದು ವಾದ ಮುಂದಿಟ್ಟರು. ಆ ಬಳಿಕ ಅಶ್ವಿನಿ ಹಾಗೂ ಕಾವ್ಯಾ ಶೈವ ಬಳಿ ಜೋರು ಜೋರಾಗಿಯೇ ಕೂಗಾಡಿಬಿಟ್ಟರು. ಇದರಿಂದ ಇಡೀ ಮನೆಯಲ್ಲಿ ಅಶಾಂತಿ ಮೂಡಿದೆ.

ಇದನ್ನೂ ಓದಿ: ಅಶ್ವಿನಿ ಗೌಡಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಟ್ಟ ಗಿಲ್ಲಿ ನಟ: ಬಿಗ್ ಬಾಸ್ ಮನೆ ತುಂಬ ನಗು

ಸುಧಿ ಬಂದ ದಿನದಿಂದಲೂ ಸೈಲೆಂಟ್ ಆಗಿಯೇ ಇದ್ದರು. ಅವರ ಧ್ವನಿ ಎಲ್ಲಿಯೂ ಹೊರ ಬಂದಿರಲಿಲ್ಲ. ಆದರೆ, ಟಾಸ್ಕ್ ವಿಚಾರ ಎಂಬುದು ಬಂದಾಗ ಎಲ್ಲರೂ ರೌದ್ರಾವತರಾ ತಾಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us