
ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿವೆ. ಅದರಲ್ಲೂ ಮೂಲ ನಿಯಮ ಎಂಬುದು ಬಂದಾಗ ಅದನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಲೇಬೇಕು. ಆದರೆ, ಅನೇಕ ಬಾರಿ ಅದು ಫಾಲೋ ಆಗೋದಿಲ್ಲ. ಇದರಿಂದ ಸ್ಪರ್ಧಿಗಳು ಕಿಚ್ಚನಿಂದ ಕ್ಲಾಸ್ ತೆಗೆದುಕೊಳ್ಳಬೇಕಾಗುತ್ತದೆ. ಈಗ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ಗೆ ಇದೇ ತೊಂದರೆ ಉಂಟಾಗುವ ಸೂಚನೆ ಸಿಕ್ಕಿದೆ. ಅವರು ಮೂಲ ನಿಯಮವನ್ನು ಬ್ರೇಕ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದು ಅವರವರ ನಿರ್ಧಾರಕ್ಕೆ ಬಿಟ್ಟಿದ್ದು. ಅದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ ಆಗಿರಬೇಕು. ಆದರೆ, ಗಗನ್ ಅವರು ಆ ರೀತಿ ಮಾಡಿಲ್ಲ. ಈ ವಾರ ಯಾರನ್ನು ನಾಮಿನೇಟ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದಕ್ಕೆ ಹಲವರನ್ನು ಒಲಿಸಬೇಕು ಎಂಬ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
‘ನೀನು ಯಾರನ್ನು ನಾಮಿನೇಟ್ ಮಾಡ್ತೀಯಾ’ ಎಂದು ತಾಂಡವ್ ಬಳಿ ಗಗನ್ ಕೇಳಿದ್ದಾರೆ. ಇದಕ್ಕೆ ಮಾಡರ್ನ್ ಮಹಾಕವಿ ಮಂಜು ಹೆಸರನ್ನು ತೆಗೆದುಕೊಂಡಿದ್ದಾರೆ ತಾಂಡವ್. ಅವರ ಹೆಸರನ್ನು ಎಲ್ಲರೂ ಸೂಚಿಸುವಂತೆ ಸಂಗೀತಾ ಮೊದಲಾದವರನ್ನು ಒಲಿಸಬೇಕು ಎಂದು ಇಬ್ಬರೂ ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಈ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಮೊದಲ ವಾರವೇ ಅವರು ಕಠಿಣ ಪಾಠ ಕಲಿತುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಗಗನ್ ಹಾಗೂ ತಾಂಡವ್ ತಾವೇ ಒಂದು ತಂಡ ಮಾಡಿಕೊಂಡಿದ್ದಾರೆ. ಇಬ್ಬರೂ ಇಡೀ ಮನೆಯಲ್ಲಿ ಗೇಮ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗ ಗಗನ್ ಹಾಗೂ ತಾಂಡವ್ ಮಾಡಿರೋ ಪ್ಲ್ಯಾನ್ ಅವರಿಗೆ ಬ್ಯಾಕ್ಫೈಯರ್ ಆಗುವ ಸೂಚನೆ ಸಿಕ್ಕಿದೆ. ಇದಕ್ಕೆ ವೀಕೆಂಡ್ವರೆಗೆ ಕಾಯಲೇಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.