‘ಹೊರಡೋದಾದ್ರೆ ಹೊರಡಿ, ಡೋರ್ ಓಪನ್ ಮಾಡಿಸ್ತೀನಿ’; ಗಾನವಿಗೆ ಸುದೀಪ್ ಖಡಕ್ ಎಚ್ಚರಿಕೆ

ಬಿಗ್ ಬಾಸ್ ಟಾಸ್ಕ್‌ನಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ವಾದಕ್ಕಿಳಿದ ಸ್ಪರ್ಧಿ ಗಾನವಿಗೆ ನಿರೂಪಕ ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ರಗಡ್ ವರ್ತನೆ ಇಲ್ಲಿ ನಡೆಯಲ್ಲ ಎಂದು ಎಚ್ಚರಿಸಿದ ಸುದೀಪ್, ಹೊರಗೆ ಹೋಗುವುದಾದರೆ ಹೊರಡಿ, ತಕ್ಷಣವೇ ಮನೆಯ ಮುಖ್ಯ ಬಾಗಿಲು ಓಪನ್ ಮಾಡಿಸುವುದಾಗಿ ತಿಳಿಸಿದ್ದಾರೆ.

‘ಹೊರಡೋದಾದ್ರೆ ಹೊರಡಿ, ಡೋರ್ ಓಪನ್ ಮಾಡಿಸ್ತೀನಿ’; ಗಾನವಿಗೆ ಸುದೀಪ್ ಖಡಕ್ ಎಚ್ಚರಿಕೆ
ಗಾನವಿ-ಸುದೀಪ್
Edited By:

Updated on: Oct 03, 2026 | 11:10 PM

ಮುಖ್ಯಾಂಶಗಳು

  • ‘ಹಳ್ಳಿ ಪವರ್’ ರಗಡ್ ಅವತಾರ ಬಿಗ್ ಬಾಸ್‌ನಲ್ಲಿ ನಡೆಯಲ್ಲ
  • ಗಾನವಿಗೆ ಸುದೀಪ್ ಟಾಂಗ್
  • ಗಾನವಿ ವಾದಕ್ಕೆ ಕಿಚ್ಚ ಗರಂ

 

‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ರಗಡ್ ಪರ್ಫಾರ್ಮೆನ್ಸ್ ನೀಡಿ ಸದ್ದು ಮಾಡಿದ್ದ ಗಾನವಿ ಅವರಿಗೆ ‘ಬಿಗ್ ಬಾಸ್ ಕನ್ನಡ’ ವೇದಿಕೆಯಲ್ಲಿ ಕಿಚ್ಚ ಸುದೀಪ್ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಟಾಸ್ಕ್‌ನಲ್ಲಿ ತಪ್ಪು ಮಾಡಿ ಅದನ್ನು ಒಪ್ಪಿಕೊಳ್ಳದೆ ವಾದಕ್ಕಿಳಿದ ಗಾನವಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸುದೀಪ್, ‘ಹೊರ ಹೋಗ್ತೀರಾ ಅಂದ್ರೆ ಹೊರಡಿ, ಡೋರ್ ಓಪನ್ ಮಾಡಿಸ್ತೀನಿ’ ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ.

ರಗಡ್ ಆಟ ಇಲ್ಲಿ ನಡೆಯಲ್ಲ

‘ಹಳ್ಳಿ ಪವರ್’ ಶೋನಲ್ಲಿ ತಮ್ಮ ರಗಡ್ ಅವತಾರ ಹಾಗೂ ಆಟದ ವೈಖರಿಯಿಂದಲೇ ಗುರುತಿಸಿಕೊಂಡಿದ್ದ ಗಾನವಿ, ಬಿಗ್ ಬಾಸ್ ಮನೆಯಲ್ಲೂ ಅದೇ ಶೈಲಿ ಮುಂದುವರಿಸಲು ಯತ್ನಿಸಿದ್ದರು. ಆದರೆ, ಬಿಗ್ ಬಾಸ್ ಪಂಚಾಯಿತಿ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಮುಂದೆ ಅವರ ಈ ರಗಡ್ ವರ್ತನೆ ನಡೆಯಲಿಲ್ಲ.

‘ನಾನು ಏನು ನೋಡಬೇಕು ಅಂತ ನೀವು ಹೇಳಬೇಡಿ’

ವಾರಾಂತ್ಯದ ಸಂಚಿಕೆಯಲ್ಲಿ ಟಾಸ್ಕ್ ಒಂದರಲ್ಲಿ ಗಾನವಿ ಮಾಡಿದ ತಪ್ಪಿನ ವಿಡಿಯೋವನ್ನು ತೋರಿಸಲಾಗಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಗಾನವಿ, ‘ನೀವೇ ಬೇಕಿದ್ರೆ ನೋಡಿ ಸರ್, ಅಲ್ಲಿ ನನ್ನ ತಪ್ಪೇ ಇಲ್ಲ’ ಎಂದು ವಾದಿಸಲು ಮುಂದಾದರು.

ಇದರಿಂದ ಆಕ್ರೋಶಗೊಂಡ ಸುದೀಪ್, ‘ನಾನು ಏನು ನೋಡಬೇಕು, ಏನು ಹೇಳಬೇಕು ಎಂಬುದನ್ನು ನೀವು ಹೇಳಬೇಕಿಲ್ಲ’ ಎಂದು ಗಾನವಿಗೆ ವೇದಿಕೆಯಲ್ಲೇ ಟಾಂಗ್ ನೀಡಿದರು.

ತಪ್ಪನ್ನು ಒಪ್ಪಿಕೊಳ್ಳದ ಧೋರಣೆಗೆ ಕಿಚ್ಚ ಗರಂ!

ಗಾನವಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಸುದೀಪ್, ‘ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳುತ್ತಲೇ ಇಲ್ಲ. ನೀವು ಎಫರ್ಟ್ ಹಾಕುತ್ತಿದ್ದೀರಾ ಹೌದು, ಆದರೆ ‘ಅವರು ತಪ್ಪು ಮಾಡಿದ್ದಾರೆ, ಅದಕ್ಕೆ ನಾನು ಮಾಡ್ತೀನಿ’ ಎಂದರೆ ಅದು ತಪ್ಪಾಗುತ್ತದೆ. ಈ ರೀತಿ ಸಮಜಾಯಿಷಿ ನೀಡುವುದು ಸರಿಯಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

‘ಹೊರಡೋದಾದ್ರೆ ಹೊರಡಿ, ಡೋರ್ ಓಪನ್ ಮಾಡಿಸ್ತೀನಿ!

ಸುದೀಪ್ ಅವರ ಮಾತಿಗೂ ಸರಿಯಾಗಿ ಸ್ಪಂದಿಸದೆ ವಾದ ಮುಂದುವರಿಸಲು ಯತ್ನಿಸಿದಾಗ, ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಇತಿಹಾಸದಲ್ಲೇ ನೀಡುವ ಕಠಿಣ ಎಚ್ಚರಿಕೆಯನ್ನು ನೀಡಿದರು. ‘ನೀವು ಹೊರ ಹೋಗ್ತೀರಾ ಅಂದ್ರೆ ಹೊರಡಿ. ಈಗಲೇ ಡೋರ್ ಓಪನ್ ಮಾಡಿಸ್ತೀನಿ’ ಎಂದು ಖಡಕ್ ಆಗಿ ಹೇಳಿದರು.

ಇದನ್ನೂ ಓದಿ ನೀವು ಈ ಮನೆಯಲ್ಲಿ ಇರಲು ಅರ್ಹರಲ್ಲ  ಎಂದು ಲಿಖಿತ್‌ಗೆ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕ್ಲಾಸ್

ಸುದೀಪ್ ಅವರ ಈ ಕಠಿಣ ಎಚ್ಚರಿಕೆಯಿಂದ ಗಾನವಿ ಸೇರಿದಂತೆ ಮನೆಯ ಇತರ ಸ್ಪರ್ಧಿಗಳು ಕೆಲಕಾಲ ಸ್ತಬ್ಧರಾದರು. ಸಿಕ್ಕ ಅವಕಾಶವನ್ನು ಗೌರವಿಸಿ, ಆಟದ ತತ್ವಕ್ಕೆ ಬದ್ಧವಾಗಿ ಆಡಬೇಕೆ ಹೊರತು ಅನಗತ್ಯ ವಾದ-ಉಡಾಫೆ ನಡೆಯುವುದಿಲ್ಲ ಎಂಬುದನ್ನು ಸುದೀಪ್ ಮತ್ತೊಮ್ಮೆ ನಿರೂಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us