
‘ಬಿಗ್ ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಎರಡು ತಿಂಗಳು ಪೂರೈಸಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಬರಲಿದೆ. ಅದಕ್ಕೂ ಮೊದಲು ನಾಮಿನೇಷನ್ ಸಾಕಷ್ಟು ರಂಗು ಪಡೆದುಕೊಂಡಿದೆ. ಮೊದಲೆಲ್ಲ ನೇರವಾಗಿ ನಾಮಿನೇಟ್ ಮಾಡಲು ಅವಕಾಶ ನೀಡಲಾಗುತ್ತಾ ಇತ್ತು. ಆದರೆ, ಈ ವಾರ ನಾಮಿನೇಷನ್ ಪ್ರಕ್ರಿಯೆ ಬದಲಾಯಿಸಲಾಗಿದೆ. ಇದರಿಂದ ಪ್ರಮುಖರೇ ನಾಮಿನೇಟ್ ಆಗಿದ್ದಾರೆ.
ಈ ವಾರ ಪರಿಷತ್ ಮಾದರಿಯಲ್ಲಿ ಬಿಗ್ ಬಾಸ್ ಮನೆ ರೆಡಿ ಮಾಡಲಾಗಿದೆ. ಇದಕ್ಕೆ ಅತಿಥಿಯಾಗಿ ಆಗಮಿಸಿರೋ ಮಂಜು ಅವರು ಅಧ್ಯಕ್ಷರಾಗಿದ್ದಾರೆ. ಯಶಸ್ ಕ್ಯಾಪ್ಟನ್. ಇಬ್ಬರನ್ನು ವೇದಿಕೆ ಮೇಲೆ ಕರೆಸಬೇಕು. ಆ ಬಳಿಕ ವಾದ-ವಿವಾದ ಮಂಡಿಸಬೇಕು. ಇದನ್ನು ಆಧರಿಸಿ ಮಂಜು ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕು.
ಮೊದಲ ಸುತ್ತಿನಲ್ಲಿ ಪ್ರಶಾಂತ್-ಗಗನ್ ಅವರನ್ನು ವೇದಿಕೆ ಮೇಲೆ ಕರೆಯಲಾಯಿತು. ಇವರ ವಾದ ವಿವಾದ ಗಮನಿಸಿ, ತಾಂಡವ್ ಅವರನ್ನು ಮಂಜು ನಾಮಿನೇಟ್ ಮಾಡಿದರು. ನಂತರ ಗಗನ್ ಹಾಗೂ ಪ್ರಶಾಂತ್ ಅವರನ್ನು ಕರೆಸಲಾಯಿತು. ಈ ವೇಳೆ ತಾಂಡವ್ ರಾಮ್ ಅವರನ್ನು ನಾಮಿನೇಟ್ ಮಾಡಲಾಯಿತು.
ನಂತರ ಸೌಂದರ್ಯಾ ಹಾಗೂ ಜಗದೀಶ್ ಅವರನ್ನು ಕರೆಸಲಾಯಿತು. ಇಬ್ಬರ ವಾದ-ವಿವಾದ ಪರಿಗಣಿಸಿ ಜಗದೀಶ್ ಅವರನ್ನು ನಾಮಿನೇಟ್ ಮಾಡಲಾಯಿತು. ಆಸಿಯಾ ಹಾಗೂ ಧನುಷ್ ಅವರನ್ನು ವಾದ ವಿವಾದಕ್ಕೆ ಕರೆಸಲಾಯಿತು. ಈ ವಾದದಲ್ಲಿ ಆಸಿಯಾರನ್ನು ನಾಮಿನೇಟ್ ಮಾಡಲಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಕಿರಣ್ ಶಾಸ್ತ್ರಿ ಹಾಗೂ ಸೌಂದರ್ಯಾ ಶೆಟ್ಟಿ ಅವರು ಪರಸ್ಪರ ಮಾತಿನ ಫೈಟ್‌ಗೆ ಇಳಿದರು. ಇವರ ಮಧ್ಯೆ ಭರ್ಜರಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ನಾಮಿನೇಟ್ ಆಗಿದ್ದು ಕಿರಣ್ ಶಾಸ್ತ್ರಿ ಅವರು.
ಕೊನೆಗೆ ಈ ವಾರದ ನಾಮಿನೇಷನ್ ಲಿಸ್ಟ್ ಅಲ್ಲಿ ಗಗನ್, ಪ್ರಶಾಂತ್, ತಾಂಡವ್, ಜಗದೀಶ್, ಕಿರಣ್ ಶಾಸ್ತ್ರಿ, ಆಸಿಯಾ ಹಾಗೂ ಸೋನಿಕಾ ನಿಂತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:48 pm, Tue, 10 November 26