
ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಸುದೀಪ್ ಅವರು ಅಧಿಕೃತವಾಗಿ ಬಿಗ್ಬಾಸ್ಗೆ ಆರಂಭ ನೀಡಿದ್ದು, ಜಾಲಿವುಡ್ನ ಸ್ಟುಡಿಯೋದ ಒಳಗೆ ನಿರ್ಮಾಣ ಮಾಡಲಾಗಿರುವ ಬಿಗ್ಬಾಸ್ ಮನೆಗೆ ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಕಳಿಸುತ್ತಿದ್ದಾರೆ. ಈ ಬಾರಿ ಫ್ಲೈಟ್ ಥೀಮ್ನಲ್ಲಿ ಬಿಗ್ಬಾಸ್ ಮನೆ ವಿನ್ಯಾಸ ಮಾಡಲಾಗಿದ್ದು, ಪ್ರಪಂಚದ ಏಳು ಅಚ್ಚರಿಗಳನ್ನು ಬಿಗ್ಬಾಸ್ ಮನೆಯೊಳಗೆ ನಿರ್ಮಿಸಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಹಲವು ಕ್ಷೇತ್ರಗಳಿಂದ, ಹಲವು ವ್ಯಕ್ತಿತ್ವದ ಸ್ಪರ್ಧಿಗಳು ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ. ಬಿಗ್ಬಾಸ್ ಮನೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ.
ಅಗ್ನಿಪರೀಕ್ಷೆಯಿಂದ ಈ ಬಾರಿ ನಾಲ್ವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೂವರನ್ನು ಜನರು ಆಯ್ಕೆ ಮಾಡಿದ್ದರೆ ನಾಲ್ಕನೇ ಸ್ಪರ್ಧಿಯನ್ನು ಅಗ್ನಿಪರೀಕ್ಷೆ ಜ್ಯೂರಿಗಳು ಆಯ್ಕೆ ಮಾಡಿದ್ದು, ಮಾಡರ್ನ್ ಮಹಾಕವಿ ಮಂಜು ಅವರು ಬಿಗ್ಬಾಸ್ ಮನೆಗೆ ಹೋಗಿದ್ದಾರೆ.
ಅಗ್ನಿಪರೀಕ್ಷೆ ನಡೆಸಿಕೊಟ್ಟ ಜ್ಯೂರಿಗಳಾದ ವಿನಯ್, ಚಂದನ್ ಗೌಡ, ಶ್ರುತಿ ಅವರುಗಳನ್ನು ಸುದೀಪ್ ಅವರು ಬಿಗ್ಬಾಸ್ ವೇದಿಕೆಗೆ ಆಹ್ವಾನಿಸಿದ್ದು, ಅವರು ಮಾಡಿದ ಕಾರ್ಯವನ್ನು ಕೊಂಡಾಡಿದರು. ವಿನಯ್ ಅವರಿಗೆ ತುಸು ಕಾಲೆಳೆದರು ಸಹ.
ಯುವ ನಟ ಯಶಸ್ ಕೃಷ್ಣ ಅವರು ಧಾರಾವಾಹಿ ನಟ. ಎಂಜಿನಿಯರಿಂಗ್ ಓದಿದ ಅವರು ನಟ ಆಗಬೇಕೆಂದು ಹಠತೊಟ್ಟು ನಟ ಆದವರು. ಮಂಡ್ಯ ಮೂಲದ ಯಶಸ್ ಕೃಷ್ಣ, ಇದೀಗ ಅವರು ಬಿಗ್ಬಾಸ್ಗೆ ಬಂದಿದ್ದಾರೆ.
ಅಗ್ನಿಪರೀಕ್ಷೆಯಲ್ಲಿ ಆಯ್ಕೆಯಾದ ಮೂರನೇ ಸ್ಪರ್ಧಿ ಧನುಶ್. ಈಗಾಗಲೇ ಇಬ್ಬರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮೂರನೇ ಮತ್ತು ಕೊನೆಯ ಸ್ಪರ್ಧಿ ಧನುಶ್ ಅವರು ಎಂಟ್ರಿ ಕೊಟ್ಟಿದ್ದರು. ಇವರು ಅಗ್ನಿಪರೀಕ್ಷೆಯಲ್ಲಿ ತಮ್ಮ ಗಿನ್ನೀಸ್ ದಾಖಲೆಯನ್ನು ಸಹ ಹರಿದು ಹಾಕಿದ್ದರು.
ನಟಿ ವೈಷ್ಣವಿ ಕೌಂಡಿನ್ಯ ಅವರು ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಾವು ಎಳವೆಯಿಂದಲೇ ಎದುರಿಸಿದ ಸವಾಲುಗಳ ಬಗ್ಗೆ ವೈಷ್ಣವಿ ಮಾತನಾಡಿದ್ದಾರೆ. ಜೊತೆಗೆ ತಮಗೆ ಓಸಿಡಿ ಸಮಸ್ಯೆ ಇರುವ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ತಮಗೆ ಬೇಗ ಸಿಟ್ಟು ಬರುತ್ತದೆ ಎಂದೂ ಸಹ ಹೇಳಿದ್ದಾರೆ.
‘ಜೋಡಿ ಹಕ್ಕಿ’ ಸೇರಿದಂತೆ ಹಲವಾರು ಧಾರಾವಾಹಿ ಮತ್ತು ಕೆಲ ಸಿನಿಮಾಗಳಲ್ಲೂ ನಟನೆ ಮಾಡಿರುವ ತಾಂಡವ್ ರಾಮ್ ಅವರು ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಾಂಡವ್ ರಾಮ್ ಅವರು ಶೂಟೌಟ್ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು.
ಅಗ್ನಿಪರೀಕ್ಷೆ ಗೆದ್ದ ಎರಡನೇ ಸ್ಪರ್ಧಿ ಲಿಖಿತ್ ಗೋಂಧಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಮಕ್ಕಳಿಬ್ಬರು ಅಗ್ನಿಪರೀಕ್ಷೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಕೊನೆಗೆ ಮಗ ಲಿಖಿತ್ ಅವರು ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ನಾಯಕಿ ‘ಶ್ರಾವಣಿ’ ಪಾತ್ರದಲ್ಲಿ ನಟಿಸಿರುವ ಆಸಿಯಾ ಫಿರ್ದೋಸ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿ ಸಾಮಾನ್ಯರು ಸಹ ಬಿಗ್ಬಾಸ್ಗೆ ಹೋಗುವ ಅವಕಾಶ ಇತ್ತು. ಅವರಿಗೆ ಅಗ್ನಿಪರೀಕ್ಷೆ ಆಯೋಜಿಸಲಾಗಿತ್ತು. ಅದರಲ್ಲಿ ಗೆದ್ದ ಮೊದಲ ಸ್ಪರ್ಧಿ ಕಿರಣ್ ಶಾಸ್ತ್ರಿ. ಉತ್ತರ ಕರ್ನಾಟಕ ಮೂಲದ ಕಿರಣ್ ಶಾಸ್ತ್ರಿ ಅವರು ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ.
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಎರಡನೇ ಬಾರಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಈ ಹಿಂದೆ ಅನಾರೋಗ್ಯದಿಂದಾಗಿ ಅವರು ಹೊರಗೆ ಹೋಗಿದ್ದರು. ಈಗ ಮತ್ತೆ ಮರಳಿ ಬಂದಿದ್ದಾರೆ. ಸುದೀಪ್ ಅವರು ಪ್ರೀತಿಯಿಂದ ಸ್ವಾಗತಿಸಿದರು ಸುದೀಪ್.
ಏಳನೇ ಸ್ಪರ್ಧಿಯಾಗಿ ಕಾವ್ಯಾ ಗೌಡ ಬಿಗ್ಬಾಸ್ ಮನೆಗೆ ಹೋದರು. ಈ ವೇಳೆ ಸುದೀಪ್ ಅವರು ಮಾಡಿದ ಹಾಸ್ಯಕ್ಕೆ ವೀಕ್ಷಕರು ನಕ್ಕು ಸುಸ್ತಾದರು. ಆದರೆ ಕಾವ್ಯಾ ಗೌಡ ಮಾತ್ರ ಏನೂ ಅರ್ಥವಾಗದೆ ಪೆಚ್ಚಾದರು.
ಬಿಗ್ಬಾಸ್ ಮನೆಯ ಏಳನೇ ಸ್ಪರ್ಧಿ ಯಾಗಿ ನಟಿ ಕಾವ್ಯಾ ಗೌಡ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾವ್ಯಾ ಗೌಡ ಅವರು ವೇದಿಕೆ ಬರುತ್ತಿದ್ದಂತೆ ಸುದೀಪ್ ಅವರು ನಗುಇನ ಅಲೆಯನ್ನೇ ಎಬ್ಬಿಸಿದರು. ನಗು-ನಗುತ್ತಾ ಬಿಗ್ಬಾಸ್ ಮನೆ ಪ್ರವೇಶಿಸಿದರು ಕಾವ್ಯಾ ಗೌಡ.
ಸಿನಿಮಾ ನಟಿ ಸಂಗೀತಾ ಭಟ್ ಅವರು ಆರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಂಗೀತಾ ಭಟ್ ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟನೆ ಮಾಡಿದ್ದಾರೆ. ಚಿತ್ರರಂಗದಿಂದ ದೂರಾಗಿದ್ದ ಸಂಗೀತ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ನಟ ಗಗನ್ ಚಿನ್ನಪ್ಪ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಂಗಳಗೌರಿ’, ‘ಸೀತಾರಾಮ’ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಗಗನ್ ಚಿನ್ನಪ್ಪ ಇದೀಗ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ನಾನು ಯಾರನ್ನೂ ಕೇರ್ ಮಾಡುವವನಲ್ಲ ಎಂದು ಗಗನ್ ಚಿನ್ನಪ್ಪ ಹೇಳಿದ್ದಾರೆ.
ಮಗಳನ್ನು ಕಳಿಸಿಕೊಡಲು ವಿನಯಾ ಪ್ರಸಾದ್ ಅವರು ಆಗಮಿಸಿದ್ದರು. ಪ್ರೇಕ್ಷಕರ ಸಾಲಿನಲ್ಲಿ ವಿನಯಾ ಪ್ರಸಾದ್ ಕೂತಿದ್ದರು. ಇದನ್ನು ಗಮನಿಸಿದ ಸುದೀಪ್ ಅವರು, ಕೂಡಲೇ ಹೋಗಿ ವಿನಯಾ ಪ್ರಸಾದ್ ಅವರಿಗೆ ನಮಸ್ಕರಿಸಿದರು ಜೊತೆಗೆ ಅವರನ್ನು ವೇದಿಕೆ ಕರೆತಂದರು. ಸುದೀಪ್ ಅವರ ಈ ಕಾರ್ಯಕ್ಕೆ ಭಾರಿ ಕರತಾಡನ ವ್ಯಕ್ತವಾಯ್ತು.
ವಿನಯಾ ಪ್ರಸಾದ್ ಪುತ್ರಿ, ಪ್ರಥಮಾ ಪ್ರಸಾದ್ ಅವರು ಬಿಗ್ಬಾಸ್ ಮನೆಗೆ ಕಾಲಿರಿಸಿದ್ದಾರೆ. ಪ್ರಥಮಾ ಪ್ರಸಾದ್ ಅವರು ನಟಿ, ನೃತ್ಯಕಲಾವಿದೆ, ಹಾಡುಗಾರ್ತಿ ಹೀಗೆ ಬಹುಮುಖ ಪ್ರತಿಭೆ ಆಗಿದ್ದಾರೆ. ತಮ್ಮನ್ನು ತಾವು ಜಗತ್ತಿಗೆ ತೋರಿಸಲೆಂದು ಬಿಗ್ಬಾಸ್ಗೆ ಬರ್ತಿದ್ದಾರಂತೆ ನಟಿ.
ಬಿಗ್ಬಾಸ್ ಮೂರನೇ ಸ್ಪರ್ಧಿಯಾಗಿ ಅವಿನಾಶ್ ಎಂಟ್ರಿ ಕೊಟ್ಟಿದ್ದಾರೆ. ಭಿನ್ನ ವ್ಯಕ್ತಿತ್ವದ ಅವಿನಾಶ್ ಅವರು. ತಾವು ಸೋತವನು, ಸ್ವಾತಂತ್ರ್ಯ ಪ್ರೇಮಿ ಎಂದು ತಮ್ಮನ್ನು ಪರಿಚಯ ಮಾಡಿಕೊಂಡ ಅವಿನಾಶ್. ಬಿಗ್ಬಾಸ್ ವೇದಿಕೆ ಮೇಲೆ ಹಾಡೊಂದನ್ನು ಸಹ ಹಾಡಿ ಗಮನ ಸೆಳೆದರು.
ಬಿಗ್ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ. ಹುಟ್ಟಿದ್ದು ಮಸ್ಕತ್ ಅಲ್ಲಿ, ಮೂಲ ಮಂಗಳೂರು, ಈಗಿರುವುದು ಮುಂಬೈನಲ್ಲಿ. ಸಖತ್ ಜಾಲಿ ಹುಡುಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ (ಜಗದೀಶ ಎಂಬಿ) ಅವರು ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಜಗದೀಶ್ ಅವರು ‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೀಗ ಎರಡನೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ವೇದಿಕೆ ಮೇಲೆ ಸುದೀಪ್ ಅವರು ಜಗ್ಗು ಅವರನ್ನು ಸಖತ್ ಆಗಿ ಕಾಲೆಳೆದಿದ್ದಾರೆ.
Jaggu
ಕನ್ನಡ, ತೆಲುಗು, ತಮಿಳು, ಮಲಯಾಳಂ ಬಿಗ್ಬಾಸ್ ರಿಯಾಲಿಟಿ ಶೋ ಒಟ್ಟಿಗೆ ಪ್ರಾರಂಭ ಆಗುತ್ತಿದ್ದು, ಇದೇ ಮೊದಲ ಬಾರಿಗೆ ನಾಲ್ಕೂ ಭಾಷೆಯ ಬಿಗ್ಬಾಸ್ ಶೋನ ನಿರೂಪಕರಾದ ಸುದೀಪ್, ಮೋಹನ್ಲಾಲ್, ವಿಜಯ್ ಸೇತುಪತಿ, ನಾಗಾರ್ಜುನ ಅಕ್ಕಿನೇನಿ ಅವರುಗಳು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡು, ಪರಸ್ಪರರಿಗೆ ಹಾರೈಸಿದರು.
ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಅದ್ಧೂರಿ ಚಾಲನೆ, ಕಿಚ್ಚ ಸುದೀಪ್ ಅವರು ಮನೆಯ ಪರಿಚಯ ಮಾಡಿಸುವ ಮೂಲಕ ಈ ಬಾರಿಯ ಸೀಸನ್ಗೆ ಚಾಲನೆ ನೀಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ವಿಶ್ವದ ಅದ್ಭುತ ಮಾನ್ಯುಮೆಂಟ್ಗಳನ್ನು ಮರು ಸೃಷ್ಟಿಸಲಾಗಿದೆ.
Bigg Boss House
ಈ ಬಾರಿ ಬಿಗ್ಬಾಸ್ನಲ್ಲಿ ಅಪರೂಪದ ಘಟನೆ ನಡೆಯಲಿದೆ. ನಾಲ್ಕು ಭಾಷೆಯ ಬಿಗ್ಬಾಸ್ ಶೋ ಒಟ್ಟಿಗೆ ಆರಂಭ ಆಗುತ್ತಿದ್ದು, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಬಿಗ್ಬಾಸ್ ಏಕಕಾಲಕ್ಕೆ ಪ್ರಾರಂಭ ಆಗುತ್ತಿದೆ. ನಾಲ್ಕೂ ಶೋಗಳ ನಾಲ್ಕೂ ಜನ ನಿರೂಪಕರು ಒಟ್ಟಿಗೆ ಕಿರುತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ವಿಶೇಷ.
ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸಹ ಈ ಬಾರಿ ಬಿಗ್ಬಾಸ್ ಸ್ಪರ್ಧಿ ಆಗಿ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ. ಈ ಹಿಂದೆಯೂ ಒಮ್ಮೆ ಬಿಗ್ಬಾಸ್ ಮನೆಗೆ ಓಂ ಪ್ರಕಾಶ್ ಹೋಗಿದ್ದರು ಆದರೆ ಅನಾರೋಗ್ಯದಿಂದ ಹೊರಗೆ ಬಂದಿದ್ದರು.
ಕಾವ್ಯಾ ಗೌಡ ಮತ್ತು ನಟಿ ಸಂಗೀತಾ ಭಟ್ ಅವರುಗಳು ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಸಂಗೀತಾ ಭಟ್ ಅವರ ಪತಿ ಸುದರ್ಶನ್ ಅವರು ಪತ್ನಿಯನ್ನು ಬೀಳ್ಕೊಡಲು ಆಗಮಿಸಿದ್ದರು. ಅಂದಹಾಗೆ ಅವರ ಆನ್ ಸ್ಕ್ರೀನ್ ಪತ್ನಿ ಕಾವ್ಯಾ ಸಹ ಬಿಗ್ಬಾಸ್ ಸ್ಪರ್ಧಿ ಆಗಿದ್ದಾರೆ.
Published On - 5:59 pm, Sun, 6 September 26