ಮನೆಗೆ ಮರಳಿದ ತಾಂಡವ್​​ ವಿರುದ್ಧ ಧಿಕ್ಕಾರ ಕೂಗಿದ ಸ್ಪರ್ಧಿಗಳು: ಕಾರಣ?

ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ತಾಂಡವ್ ಅವರಿಗೆ ಮತ್ತೊಂದು ಅವಕಾಶ ಕೊಟ್ಟರು. ‘ಬಿಗ್​​ಬಾಸ್ ಎಂದಿಗೂ ಜನರ ಮತಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ’ ಎಂದು ಹೇಳಿ ಎವಿಕ್ಷನ್​​ ಇಂದ ಪಾರು ಮಾಡಿದ್ದರು. ಕಳೆದ ಒಂದು ವಾರದಿಂದಲೂ ಸೀಕ್ರೆಟ್ ರೂಮಿನಲ್ಲಿದ್ದ ತಾಂಡವ್ ಈಗ ಮನೆಗೆ ಮರಳಿದ್ದಾರೆ. ಆದರೆ ಮನೆಗೆ ಮರಳುತ್ತಿದ್ದಂತೆ ಅವರಿಗೆ ಕಠಿಣವಾದ ಟಾಸ್ಕ್ ಎದುರಾಗಿದೆ. ಅದರಿಂದಾಗಿ ಮನೆಯ ಧಿಕ್ಕಾರವೂ ಸಹ ಧಕ್ಕಿದೆ.

ಮನೆಗೆ ಮರಳಿದ ತಾಂಡವ್​​ ವಿರುದ್ಧ ಧಿಕ್ಕಾರ ಕೂಗಿದ ಸ್ಪರ್ಧಿಗಳು: ಕಾರಣ?
Bigg Boss Kannada 13

Updated on: Oct 02, 2026 | 11:09 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ಹೊಸ ಎಪಿಸೋಡ್
  • ಮನೆಗೆ ಮರಳಿರುವ ತಾಂಡವ್ ರಾಮ್
  • ತಾಂಡವ್ ರಾಮ್ ವಿರುದ್ಧ ಸ್ಪರ್ಧಿಗಳ ಪ್ರತಿಭಟನೆ

ತಾಂಡವ್ ರಾಮ್ ಬಿಗ್​​ಬಾಸ್ ಮನೆಗೆ ಮರಳಿದ್ದಾರೆ. ಕಳೆದ ವಾರ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ತಾಂಡವ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಅವರು ಬೇರೆ ಸ್ಪರ್ಧಿಯೊಬ್ಬರು ತಾಂಡವ್ ಅವರ ಓಟುಗಳನ್ನು ಪಡೆದುಕೊಂಡ ಕಾರಣದಿಂದಾಗಿ ತಾಂಡವ್ ಅವರು ಹೊರಗೆ ಹೋಗಬೇಕಾಗಿತ್ತು. ಆದರೆ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ತಾಂಡವ್ ಅವರಿಗೆ ಮತ್ತೊಂದು ಅವಕಾಶ ಕೊಟ್ಟರು. ‘ಬಿಗ್​​ಬಾಸ್ ಎಂದಿಗೂ ಜನರ ಮತಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ’ ಎಂದು ಹೇಳಿ ಎವಿಕ್ಷನ್​​ ಇಂದ ಪಾರು ಮಾಡಿದ್ದರು. ಕಳೆದ ಒಂದು ವಾರದಿಂದಲೂ ಸೀಕ್ರೆಟ್ ರೂಮಿನಲ್ಲಿದ್ದ ತಾಂಡವ್ ಈಗ ಮನೆಗೆ ಮರಳಿದ್ದಾರೆ. ಆದರೆ ಮನೆಗೆ ಮರಳುತ್ತಿದ್ದಂತೆ ಅವರಿಗೆ ಕಠಿಣವಾದ ಟಾಸ್ಕ್ ಎದುರಾಗಿದೆ. ಅದರಿಂದಾಗಿ ಮನೆಯ ಧಿಕ್ಕಾರವೂ ಸಹ ಧಕ್ಕಿದೆ.

ತಾಂಡವ್ ಅವರು ಮನೆಗೆ ಬರುತ್ತಿದ್ದಂತೆ ‘ನನ್ನಿಂದ ಇನ್ನು ಮುಂದೆ ಒಳ್ಳೆತನ ನಿರೀಕ್ಷಿಸಬೇಡಿ’ ಎಂದರು. ಅದಾದ ಸ್ವಲ್ಪವೇ ಹೊತ್ತಿನ ಬಳಿಕ ಬಿಗ್​​ಬಾಸ್, ತಾಂಡವ್​​​ಗೆ ಟಾಸ್ಕ್ ಒಂದನ್ನು ನೀಡಿದರು. ಕೆಲವು ಫಲಕಗಳನ್ನು ನೀಡಿ ಅವುಗಳ ಮೇಲನ ಬರೆಹ ಯಾರಿಗೆ ಹೊಂದುತ್ತದೆಯೋ ಅವರ ಕೊರಳಿಗೆ ತೊಡಿಸಿ ಎಂದರು. ‘ಹೊಟ್ಟೆ ಕಿಚ್ಚಿನವರು’, ‘ಮುಖವಾಡ ಧರಿಸಿರುವವರು’, ‘ಗೆಳೆತನನ್ನು ಲಾಭಕ್ಕೆ ಬಳಸಿಕೊಳ್ಳುವವರು’, ‘ಬೇರೆಯವರ ನೆರಳಿನಲ್ಲಿ ಇರುವವರು’ ಹೀಗೆ ಹಲವು ಬರೆಹಗಳು ಅದರಲ್ಲಿದ್ದವು. ಸೌಂದರ್ಯಾ, ಜಗ್ಗ, ಕಿರಣ್ ಮತ್ತು ಆಸಿಯಾಗೆ ಆ ಫಲಗಳನ್ನು ತಾಂಡವ್ ನೀಡಿದರು. ಯಾರಿಗೂ ಸಹ ತಾಂಡವ್ ನೀಡಿದ ಫಲಕ ಇಷ್ಟವಾಗಲಿಲ್ಲ.

ಆಸಿಯಾ ಅಂತೂ ಜಗಳವನ್ನೇ ಮಾಡಿದರು. ಸೌಂದರ್ಯ ಸಹ ಈ ಬಗ್ಗೆ ತಾಂಡವ್ ಅನ್ನು ಪ್ರಶ್ನೆ ಮಾಡಿದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಸೌಂದರ್ಯಾ, ಜಗ್ಗ ಮತ್ತು ಕಿರಣ್ ಶಾಸ್ತ್ರಿ ಒಂದೆಡೆ ಕುಳಿತುಕೊಂಡು ಆ ಫಲಕಗಳನ್ನು ಧರಿಸಿ, ಅವನ್ನು ಕ್ಯಾಮೆರಾ ಕಡೆಗೆ ತೋರಿಸುತ್ತಾ ‘ತಾಂಡವ್​​ಗೆ ಧಿಕ್ಕಾರ’ ಎಂದು ಕೂಗಿದರು. ಆದರೆ ಅವರು ತಮಾಷೆಯಿಂದ ಧಿಕ್ಕಾರ ಕೂಗಿದರೇ ಹೊರತು ದ್ವೇಷದಿಂದ, ಕೋಪದಿಂದ ಅಲ್ಲ.

ಇದನ್ನೂ ಓದಿ:‘ಜನರ ವೋಟ್ ವಿರುದ್ಧ ಹೋಗಲ್ಲ’; ತಾಂಡವ್ ರಾಮ್ ಉಳಿಸಿ ಸುದೀಪ್ ಮಾತು

ಇನ್ನು ಆಸಿಯಾ ಅಂತೂ ತಾಂಡವ್ ತಮಗೆ ‘ಲಾಭಕ್ಕಾಗಿ ಸ್ನೇಹ ಮಾಡುವವರು’ ಫಲಕ ಕೊಟ್ಟಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ಮೊದಲಿಗೆ ನೇರವಾಗಿ ತಾಂಡವ್ ಬಳಿಯೇ ಆ ಬಗ್ಗೆ ಪ್ರಶ್ನೆ ಮಾಡಿದ ಆಸಿಯಾ, ಆ ಬಳಿಕ ಕಾವ್ಯಾ ಮತ್ತು ಸಂಗೀತಾ ಬಳಿ ಆ ಬಗ್ಗೆ ಹೇಳಿಕೊಂಡು ನೊಂದುಕೊಂಡರು. ‘ತಾಂಡವ್ ಹೋದಾಗ ಬೇಸರ ಪಟ್ಟವಳು ನಾನು, ಅವರು ವಾಪಸ್ ಆದಾಗ ಖುಷಿ ಪಟ್ಟೆ ಆದರೆ ನನಗೇ ಹೀಗೆ ಮಾಡಿದರು ಎಂದ ಆಸಿಯಾ, ಕಳೆದ ವಾರ ತಾಂಡವ್ ಕೊಟ್ಟಿದ್ದ ಚಾಕಲೇಟ್ ಅನ್ನು ಅವರಿಗೆ ಮರಳಿಸಿದರು. ಒಟ್ಟಾರೆ, ತಾಂಡವ್ ಕೊಟ್ಟ ಫಲಕಗಳಿಂದ ಅವರ ಸ್ನೇಹಿತರೇ ಅವರ ಮೇಲೆ ಮುನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us