‘ಬಕ್ರಾ ಆಗ್ಬೇಡಿ’; ಹುಡುಗಿಯರ ಹಿಂದೆ ಬಿದ್ದ ಯಶಸ್​​ಗೆ ಸುದೀಪ್ ಕಿವಿಮಾತು

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ನಡುವೆ ದಿಢೀರನೆ ಹೊಸ ಪ್ರೇಮ ಕಥೆ ಚಿಗುರೊಡೆಯುತ್ತಿದೆ. ಪರಸ್ಪರ ಹೆಸರು ಬದಲಾಯಿಸಿಕೊಂಡು ಕರೆಯುತ್ತಿರುವ ಇವರ ಬಾಂಧವ್ಯ ಕೃತಕ ಎಂಬ ಮಾತು ಕೇಳಿಬರುತ್ತಿದೆ. ನಾಮಿನೇಷನ್‌ನಿಂದ ಬಚಾವ್ ಆಗಲು ಹಾಗೂ ಸ್ಕ್ರೀನ್ ಸ್ಪೇಸ್‌ಗಾಗಿ ಇಬ್ಬರೂ ಸೇರಿ ಈ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆಯೇ ಎಂಬ ಅನುಮಾನ ಮೂಡಿದೆ.

‘ಬಕ್ರಾ ಆಗ್ಬೇಡಿ’; ಹುಡುಗಿಯರ ಹಿಂದೆ ಬಿದ್ದ ಯಶಸ್​​ಗೆ ಸುದೀಪ್ ಕಿವಿಮಾತು
ಯಶಸ್-ಸುದೀಪ್
Image Credit source: Colors Kannada
Edited By:

Updated on: Oct 03, 2026 | 9:50 PM

ಮುಖ್ಯಾಂಶಗಳು

  • ಹೆಸರು ಬದಲಿಸಿ ಕರೆದ ಸ್ಪರ್ಧಿಗಳು
  • ಪ್ರೀತಿಯೋ ಅಥವಾ ಮಾಸ್ಟರ್ ಪ್ಲಾನೋ?
  • ‘ನಾವು ಬರಿ ಫ್ರೆಂಡ್ಸ್’ ಎಂದ ಸೌಂದರ್ಯಾ

‘ಬಿಗ್ ಬಾಸ್ ಕನ್ನಡ’ ಶೋ ಎಂದರೆ ಅಲ್ಲಿ ಡ್ರಾಮಾ, ಜಗಳ ಮಾತ್ರವಲ್ಲದೆ ಪ್ರೇಮ ಕಥೆಗಳಿಗೂ ಕೊರತೆ ಇರುವುದಿಲ್ಲ. ಪ್ರತಿ ಸೀಸನ್‌ನಲ್ಲೂ ಒಂದಲ್ಲ ಒಂದು ಲವ್ ಟ್ರ್ಯಾಕ್ ಹುಟ್ಟಿಕೊಳ್ಳುವುದು ಸಹಜ. ಆದರೆ, ಈಗ ನಡೆಯುತ್ತಿರುವ ಪ್ರಸ್ತುತ ಸೀಸನ್‌ನಲ್ಲಿ ಸೃಷ್ಟಿಯಾಗುತ್ತಿರುವ ಪ್ರೇಮ ಕಥೆಯೊಂದು ‘ಕೃತಕ’ ಎಂಬ ಮಾತುಗಳು ಬಿಗ್ ಬಾಸ್ ವೀಕ್ಷಕರಿಂದ ಕೇಳಿಬರುತ್ತಿವೆ. ಹುಡುಗಿಯರ ಹಿಂದೆ ಬಿದ್ದ ಯಶಸ್​​ಗೆ ಸುದೀಪ್ ಕಿವಿಮಾತು ಹೇಳಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ಯಶಸ್ ನಡುವಿನ ಬಾಂಧವ್ಯ ಹಠಾತ್ ಬದಲಾಗಿದ್ದು, ಇವರಿಬ್ಬರ ಮಧ್ಯೆ ಹೊಸ ಪ್ರೇಮ ಕಥೆ ಚಿಗುರೊಡೆಯುತ್ತಿದೆ. ಆದರೆ, ಇದು ನಿಜವಾದ ಪ್ರೀತಿಯೇ ಅಥವಾ ಶೋನಲ್ಲಿ ಹೆಚ್ಚು ದಿನ ಉಳಿದುಕೊಳ್ಳಲು ಮಾಡಿಕೊಂಡಿರುವ ಮಾಸ್ಟರ್ ಪ್ಲಾನ್ ಎನ್ನುವ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಹೆಸರು ಬದಲಿಸಿ ಕರೆದ ಸ್ಪರ್ಧಿಗಳು!

ಇತ್ತೀಚಿನ ಸಂಚಿಕೆಯಲ್ಲಿ ಇವರಿಬ್ಬರ ನಡುವೆ ನಡೆದ ಸಣ್ಣ ತಮಾಷೆ ಹಾಗೂ ಸಂಭಾಷಣೆಗಳು ಅನುಮಾನಕ್ಕೆ ಕಾರಣವಾಗಿವೆ. ಯಶಸ್ ಗೌಡ ಅವರು ಸೌಂದರ್ಯಾ ಅವರನ್ನು ತಮಾಷೆಯಾಗಿ ‘ಸೌಂದರ್ಯಾ ಗೌಡ’ ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸೌಂದರ್ಯಾ ಶೆಟ್ಟಿ ಅವರು ಯಶಸ್ ಅವರನ್ನು ‘ಯಶಸ್ ಶೆಟ್ಟಿ’ ಎಂದು ಸಂಬೋಧಿಸಿದ್ದಾರೆ. ಇಬ್ಬರೂ ಪರಸ್ಪರರ ಸರ್‌ನೇಮ್ ಬದಲಾಯಿಸಿ ಕರೆದುಕೊಂಡಿರುವುದು ಮನೆಯವರ ಹಾಗೂ ವೀಕ್ಷಕರ ಗಮನ ಸೆಳೆದಿದೆ.

‘ಫ್ರೆಂಡ್‌ಶಿಪ್’ ಎಂದ ಸೌಂದರ್ಯಾ, ಗೊಂದಲದಲ್ಲಿ ವೀಕ್ಷಕರು

ಒಂದೆಡೆ ಇವರಿಬ್ಬರ ನಡುವಿನ ಕನೆಕ್ಷನ್ ಪ್ರೇಮ ಕಥೆಯಂತೆ ಬಿಂಬಿತವಾಗುತ್ತಿದ್ದರೆ, ಇನ್ನೊಂದೆಡೆ ಸೌಂದರ್ಯಾ ಅವರು ಯಶಸ್ ತಮ್ಮ ‘ಒಳ್ಳೆಯ ಗೆಳೆಯ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ದಿಢೀರನೆ ಸೃಷ್ಟಿಯಾಗಿರುವ ಈ ಆಪ್ತತೆ ಮತ್ತು ಬಾಂಧವ್ಯದ ಹಿಂದೆ ದೊಡ್ಡ ಗೇಮ್ ಪ್ಲಾನ್ ಇದೆ ಎನ್ನಲಾಗುತ್ತಿದೆ.

ಮೈಲೇಜ್‌ಗಾಗಿ ಹೆಣೆದ ತಂತ್ರವೇ?

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್‌ನಿಂದ ಬಚಾವ್ ಆಗಲು, ಸ್ಕ್ರೀನ್ ಸ್ಪೇಸ್ ಗಿಟ್ಟಿಸಿಕೊಳ್ಳಲು ಹಾಗೂ ಸಾರ್ವಜನಿಕ ಗಮನ ಸೆಳೆದು ‘ಮೈಲೇಜ್’ ಪಡೆಯಲು ಈ ರೀತಿಯ ಕೃತಕ ಲವ್ ಸ್ಟೋರಿ ಸೃಷ್ಟಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಶೋನಲ್ಲಿ ಹೆಚ್ಚು ವಾರಗಳು ಮುಂದುವರಿಯುವ ಉದ್ದೇಶದಿಂದಲೇ ಇಬ್ಬರೂ ಸೇರಿ ಈ ತಂತ್ರ ರೂಪಿಸಿದ್ದಾರೆ ಎಂದು ಬಿಗ್ ಬಾಸ್ ಪ್ರೇಕ್ಷಕರು ಮತ್ತು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಈ ‘ಆರ್ಟಿಫೀಷಿಯಲ್’ ಕಥೆ ನಿಜವಾದ ಪ್ರೀತಿಯಾಗಿ ಬದಲಾಗುತ್ತದೆಯೋ ಅಥವಾ ನಾಮಿನೇಷನ್ ತಂತ್ರವಾಗಿ ಮುಕ್ತಾಯವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

‘ಬಕ್ರಾ ಆಗ್ಬೇಡಿ’ ಎಂದು ಸುದೀಪ್

ಸುದೀಪ್ ಅವರು ಯಶಸ್​​ಗೆ ಕಿವಿಮಾತು ಹೇಳಿದ್ದಾರೆ. ‘ನೀವು ಬಕ್ರಾ ಆಗಬೇಡಿ, ಆಗ್ತಾ ಇದೀರಾ’ ಎಂದು ಕಿವಿಮಾತು ಹೇಳಿದ್ದಾರೆ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us