ಕೇವಲ 24 ಗಂಟೆಯಲ್ಲಿ ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ನಟಿ

Bigg Boss: ಬಿಗ್​ಬಾಸ್​ನಲ್ಲಿ ಸಾಮಾನ್ಯವಾಗಿ ಪ್ರತಿ ವಾರ ಒಬ್ಬರು ಹೊರಗೆ ಹೋಗುತ್ತಾರೆ. ಆದರೆ ಬಿಗ್​ಬಾಸ್​ ಪ್ರಾರಂಭವಾದ ಒಂದೇ ದಿನದಲ್ಲಿ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ.

ಕೇವಲ 24 ಗಂಟೆಯಲ್ಲಿ ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ನಟಿ

Updated on: Oct 08, 2024 | 12:22 PM

ಬಿಗ್​ಬಾಸ್ ಸೀಸನ್ ಶುರುವಾಗಿದೆ. ಮರಾಠಿ, ಕನ್ನಡ, ತೆಲುಗು, ಹಿಂದಿ, ತಮಿಳು ಎಲ್ಲ ಭಾಷೆಗಳಲ್ಲಿ ಬಿಗ್​ಬಾಸ್ ಪ್ರಾರಂಭವಾಗಿದೆ. ಅಕ್ಟೋಬರ್ 6 ರಂದು ಬಿಗ್​ಬಾಸ್ ತಮಿಳಿನ ಹೊಸ ಸೀಸನ್ ಪ್ರಾರಂಭವಾಗಿತ್ತು. ಇಷ್ಟು ವರ್ಷ ಕಮಲ್ ಹಾಸನ್ ಈ ಶೋ ನಡೆಸಿಕೊಟ್ಟಿದ್ದರು, ಆದರೆ ಮೊದಲ ಬಾರಿಗೆ ವಿಜಯ್ ಸೇತುಪತಿ ಸಾರಥ್ಯ ವಹಿಸಿಕೊಂಡಿದ್ದರು. ಶೋನಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿತ್ತು. ಅಕ್ಟೋಬರ್ 06 ರಂದು ಬಿಗ್​ಬಾಸ್​ 8 ರ ಪ್ರಾರಂಭ ಆಗಿತ್ತು. ಅದಾದ ಕೇವಲ ಒಂದೇ ದಿನದಲ್ಲಿ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗಿದೆ. ಅದೂ ಭಾರಿ ನಿರೀಕ್ಷೆ ಇದ್ದ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗಿದ್ದಾರೆ.

ಮೊದಲ ದಿನ ಬರೋಬ್ಬರಿ 18 ಮಂದಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಹೋಗುವಾಗ ಎಲ್ಲರಿಗೂ ಒಂದೊಂದು ಟ್ರೋಫಿಯನ್ನು ವಿಜಯ್ ಸೇತುಪತಿ ಕೊಟ್ಟು ಕಳಿಸಿದ್ದರು. ಮೊದಲ ದಿನವೇ ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ನೀಡಲಾಯ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎನ್ನಲಾಗಿತ್ತು.

ಇದನ್ನೂ ಓದಿ:ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?

ತಮಿಳಿನ ಸೂಪರ್ ಹಿಟ್ ಸಿನಿಮಾ ‘ಮಹಾರಾಜ’ನಲ್ಲಿ ವಿಜಯ್ ಸೇತುಪತಿ ಅವರ ಮಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನಟಿ ಸಚಾನಾ ನಮಿದಾಸ್ ಸಹ ಬಿಗ್​ಬಾಸ್​ಗೆ ಹೋಗಿದ್ದರು. ಸ್ಪರ್ಧಿಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಇವರಾಗಿದ್ದು, ಇವರ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಸಚಾನಾ ಈ ಬಾರಿ ಕಪ್ ಗೆಲ್ಲುತ್ತಾರೆ ಎಂದೇ ಭರವಸೆ ಇಡಲಾಗಿತ್ತು. ಆದರೆ ಮೊದಲ ದಿನವೇ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿ ಸಚಾನಾ ಬಿಗ್​ಬಾಸ್ ಮನೆಗೆ ಹೋದ ಒಂದೇ ದಿನಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ.

ಬಿಗ್​ಬಾಸ್ ಮನೆಗೆ ಹೋದ ಕೇವಲ ದಿನಕ್ಕೆ ಸಚನಾ ನಮಿದಾಸ್ ಭಾರವಾದ ಹೃದಯ ಹೊತ್ತು ಮನೆಯಿಂದ ಹೊರಗೆ ಬಂದಿದ್ದಾರೆ. ವಿಜಯ್ ಸೇತುಪತಿ ಅವರಿಗೆ ನೀಡಿದ್ದ ಮೂರ್ತಿಯನ್ನು ಅಲ್ಲಿಯೇ ಒಡೆದು ಹಾಕಿ, ಕಣ್ಣೀರು ಹಾಕುತ್ತಾ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಕೇವಲ ಒಂದೇ ದಿನಕ್ಕೆ ಒಬ್ಬ ಆಟಗಾರರನ್ನು ಹೊರಗೆ ಹಾಕಿರುವುದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುಷಃ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸಚಾನಾ ಒಳಗೆ ಬರಬಹುದು ಎಂಬ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us