ಸೌಮ್ಯತೆಯೇ ಮುಳುವಾಯಿತು; ಬಿಗ್ ಬಾಸ್ ಮನೆಯಿಂದ ಧರ್ಮ ಹೊರ ಹೋಗಲು ಕಾರಣವಾದ ಅಂಶಗಳಿವು

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದರು. ಅನುಷಾ ಹಾಗೂ ಧರ್ಮ ಕ್ಲೋಸ್ ಆಗಿ ಇದ್ದರು. ಇವರು ಒಂದೇ ವಾರ ಎಲಿಮಿನೇಟ್ ಆಗುತ್ತಾರೇನೋ ಎನ್ನುವ ಅನುಮಾನ ಮೂಡಿತ್ತು. ಈ ಮೊದಲು ಅನುಷಾ ಅವರು ಎಲಿಮಿನೇಟ್ ಆಗಿದ್ದರು. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.

ಸೌಮ್ಯತೆಯೇ ಮುಳುವಾಯಿತು; ಬಿಗ್ ಬಾಸ್ ಮನೆಯಿಂದ ಧರ್ಮ ಹೊರ ಹೋಗಲು ಕಾರಣವಾದ ಅಂಶಗಳಿವು
ಧರ್ಮ

Updated on: Nov 25, 2024 | 7:32 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಹಲವು ದಿನಗಳ ಕಾಲ ಉತ್ತಮವಾಗಿ ಆಟ ಆಡಿದ ಅವರು ಕೊನೆಗೂ ಔಟ್ ಆಗಿದ್ದಾರೆ. ಈ ಮೊದಲು ಅವರ ಗೆಳತಿ ಅನುಷಾ ರೈ ಅವರು ಎಲಿಮಿನೇಟ್ ಆಗಿದ್ದರು. ಇದಾದ ಬೆನ್ನಲ್ಲೇ ಧರ್ಮ ಕೂಡ ಮನೆಯಿಂದ ಹೊರ ಹೋಗಿದ್ದಾರೆ. ಅವರು ಸೌಮ್ಯವಾಗಿ ನಡೆದುಕೊಳ್ಳುತ್ತಿದ್ದುದೇ ಮುಳುವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದರು. ಅನುಷಾ ಹಾಗೂ ಧರ್ಮ ಕ್ಲೋಸ್ ಆಗಿ ಇದ್ದರು. ಇವರು ಒಂದೇ ವಾರ ಎಲಿಮಿನೇಟ್ ಆಗುತ್ತಾರೇನೋ ಎನ್ನುವ ಅನುಮಾನ ಮೂಡಿತ್ತು. ಅನುಷಾ ಎಲಿಮಿನೇಟ್ ಆಗುವಾಗ ಕೊನೆಯಲ್ಲಿ ಇದ್ದಿದ್ದು ಧರ್ಮ ಅವರೇ ಆಗಿತ್ತು. ಆ ವಾರ ಅವರು ಉಳಿದುಕೊಂಡಿದ್ದರು. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.

ದೊಡ್ಮನೆಯಲ್ಲಿ ಇರಬೇಕು ಎಂದರೆ ರಫ್ ಆ್ಯಂಡ್ ಟಫ್ ಆಗಿರಬೇಕು. ಆದರೆ, ಧರ್ಮ ಅವರಲ್ಲಿ ಆ ಯಾವ ಅಂಶವೂ ಇರಲಿಲ್ಲ. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಎಂಥದ್ದೇ ಪರಿಸ್ಥಿತಿ ಬಂದರೂ ಅವರು ಕಿತ್ತಾಟಕ್ಕೆ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇದೆಲ್ಲವೂ ಅವರ ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ. ಇದು ಅವರಿಗೆ ಮುಳುವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್​ ಶೋನಿಂದ ಎಲಿಮಿನೇಟ್​ ಆದ ನಟ ಧರ್ಮ ಕೀರ್ತಿರಾಜ್

ಅವರಿಗಿಂತ ಕೊನೆಗೆ ವೈಲ್ಡ್ ಕಾರ್ಡ್​ನಲ್ಲಿ ಬಂದ ಹನುಮಂತ, ರಜತ್, ಶೋಭಾ ಶೆಟ್ಟಿ ಸಾಕಷ್ಟು ಗಮನ ಸೆಳೆಯುತ್ತಿದ್ದರು. ಆದರೆ, ಧರ್ಮ ಎಲ್ಲಿಯೂ ಹೈಲೈಟ್ ಆಗುತ್ತಾ ಇರಲಿಲ್ಲ. ಈ ಮೊದಲು ಲಾಯರ್ ಜಗದೀಶ್ ವಿರುದ್ಧ ಇಡೀ ಮನೆ ತಿರುಗಿ ಬಿದ್ದಾಗಲೂ ಧರ್ಮ ಅವರು ಫೈಟ್​ಗೆ ಹೋಗಿರಲಿಲ್ಲ. ಇದು ಅವರ ಸೌಮ್ಯತೆಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆ ಈ ಸೌಮ್ಯತೆಯ ಕಾರಣದಿಂದಲೇ ಅವರು ಎಲಿಮಿನೇಟ್ ಆಗಬೇಕಾದ ಪರಿಸ್ಥಿತಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us