ಸಸ್ಯಹಾರಿ ಚೈತ್ರಾ ಕುಂದಾಪುರಗೆ ಮೋಸದಿಂದ ಮಾಂಸಾಹಾರ ತಿನ್ನಿಸಿದರೆ ಸಹ ಸ್ಪರ್ಧಿಗಳು?

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ, ಧನರಾಜ್ ಇನ್ನೂ ಕೆಲವು ಸಸ್ಯಹಾರಿಗಳು ಇದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಮಾತನಾಡಿದ ಸುದೀಪ್, ಚೈತ್ರಾ ಅವರನ್ನು ಉದ್ದೇಶಿಸಿ, ನಿಮ್ಮ ಸಹಸ್ಪರ್ಧಿಗಳು ನಿಮಗೆ ನಾನ್ ವೆಜ್ ತಿನ್ನಿಸಿದ್ದಾರೆ ಎಂದಿದ್ದಾರೆ. ಸುದೀಪ್ ಮಾತು ಕೇಳಿ ಚೈತ್ರಾ ಶಾಕ್ ಆಗಿದ್ದಾರೆ. ಅಂದಹಾಗೆ ನಿಜಕ್ಕೂ ಚೈತ್ರಾಗೆ ಮಾಂಸಾಹಾರ ತಿನ್ನಿಸಲಾಗಿದೆಯೇ? ನಡೆದಿದ್ದೇನು?

ಸಸ್ಯಹಾರಿ ಚೈತ್ರಾ ಕುಂದಾಪುರಗೆ ಮೋಸದಿಂದ ಮಾಂಸಾಹಾರ ತಿನ್ನಿಸಿದರೆ ಸಹ ಸ್ಪರ್ಧಿಗಳು?
Chaithra Kundapura

Updated on: Dec 29, 2024 | 9:10 AM

ಬಿಗ್​ಬಾಸ್ ಮನೆಯಲ್ಲಿ ಊಟದ ಸಮಸ್ಯೆ ಇದ್ದಿದ್ದೆ. ಬಿಗ್​ಬಾಸ್ ಸ್ಪರ್ಧಿಗಳು ಅವರೇ ಅಡುಗೆ ಮಾಡಿಕೊಂಡು ತಿನ್ನಬೇಕಿರುತ್ತದೆ. ಕೆಲವರಿಗೆ ಅಡುಗೆ ಮಾಡಲು ಬರುತ್ತದೆ, ಕೆಲವರಿಗೆ ಬರುವುದಿಲ್ಲ ಹಾಗಾಗಿ ಸ್ಪರ್ಧಿಗಳಿಗೆ ಯಾವಾಗಲೂ ಒಳ್ಳೆಯ ಊಟ ಸಿಗುತ್ತದೆ ಎಂಬುದು ಗ್ಯಾರೆಂಟಿ ಇಲ್ಲ. ಅದರಲ್ಲಿ ಸಸ್ಯಹಾರಿಗಳಿಗಂತೂ ಬಹಳ ಸಮಸ್ಯೆ. ಲಕ್ಷುರಿ ಬಜೆಟ್​ನಲ್ಲಿ ಸ್ಪರ್ಧಿಗಳು ಮೊದಲು ನಾನ್​ವೆಜ್ ಆರ್ಡರ್ ಮಾಡಿಬಿಡುತ್ತಾರೆ, ಪನ್ನೀರು ಕೊನೆಯ ಆಯ್ಕೆ ಆಗಿರುತ್ತದೆ. ಮಾಂಸಹಾರಿಗಳು, ಸಸ್ಯಹಾರಿಗಳು ಇಬ್ಬರೂ ಇದ್ದು, ಒಂದೇ ಒಲೆಯಲ್ಲಿ ಎರಡೂ ಅಡುಗೆ ಆಗುತ್ತಿರುವಾಗ ಮಿಕ್ಸ್ ಆಗಿಬಿಡುತ್ತದೆಯೇ ಎಂಬ ಭಯ ಸಹಜವಾಗಿಯೇ ಸಸ್ಯಹಾರಿಗಳಿಗೆ ಇದ್ದೇ ಇರುತ್ತದೆ.

ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಲಾಗಿದೆ. ಮನೆಯ ಸ್ಪರ್ಧಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಅತಿಥಿಗಳಾಗಿ ಮತ್ತು ಸಿಬ್ಬಂದಿಗಳಾಗಿ ಮಾಡಲಾಗಿತ್ತು. ಸಿಬ್ಬಂದಿ ಆಗಿದ್ದವರು ಅತಿಥಿಗಳಿಗೆ ಕೇಳಿದ ಅಡುಗೆ ಮಾಡಿ ಕೊಡಬೇಕಿತ್ತು. ಶನಿವಾರ ಎಪಿಸೋಡ್​ಗೆ ಬಂದಿದ್ದ ಸುದೀಪ್, ಭವ್ಯಾ ತಂಡದವರು ಸಿಬ್ಬಂದಿ ಆಗಿದ್ದಾಗ ಅತಿಥಿಗಳಿಗೆ ಮಾಡಿಕೊಟ್ಟ ಊಟವನ್ನು ಮೊದಲು ಅವರು ತಿಂದು ಆ ನಂತರವೇ ಅತಿಥಿಗಳಿಗೆ ಕೊಟ್ಟರು, ಭಾರಿ ಆತುರದಲ್ಲಿ ತಿಂಡಿಗಳನ್ನು ತಿಂದರು, ಆ ವೇಳೆ ಧನರಾಜ್, ಮಿಸ್ ಆಗಿ ಮಾಂಸಾಹಾರ ತಿಂದು ಬಿಟ್ಟರು ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಈ ಬಾರಿ ಯಾರಿಗೆ ಸಿಕ್ತು ಕಿಚ್ಚನ ಚಪ್ಪಾಳೆ?

ಅದನ್ನು ಧನರಾಜ್ ಸಹ ಒಪ್ಪಿಕೊಂಡರು. ಚಿಕನ್ ಪಾಪ್​ಕಾರ್ನ್​ ಅನ್ನು ತಪ್ಪಿ ಬಾಯಿಗೆ ಹಾಕಿಕೊಂಡೆ ನಂತರ ಹಾಗೆಯೇ ಅದನ್ನು ಉಗಿದು ಬಿಟ್ಟೆ ಎಂದರು. ಆಗ ಚೈತ್ರಾ, ಪರವಾಗಿಲ್ಲ ಸರ್, ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇರುತ್ತದೆ ಎಂದರು. ಆಗ ಸುದೀಪ್ ಹಾಗಿದ್ದರೆ ನಿಮಗೂ ಕ್ಷಮೆ ಇರುತ್ತದೆ ಬಿಡಿ ಎಂದರು. ಚೈತ್ರಾ ಶಾಕ್ ಆದರು. ಇಲ್ಲ ಸಾರ್ ನಾನು ನಾನ್​ವೆಜ್ ತಿಂದಿಲ್ಲ, ಕ್ಯಾಪ್ಸಿಕಮ್ ಮೋಮೋಸ್ ತಿಂದೆ ಅಷ್ಟೆ ಎಂದರು. ನಿಮ್ಮ ಗೆಳೆಯರು ನಿಮಗೆ ನಾನ್​ ವೆಜ್ ತಿನ್ನಿಸಿಲ್ಲ ಎಂಬ ಭರವಸೆ ನಿಮಗೆ ಇದೆಯೇ? ಎಂದು ಸುದೀಪ್ ಕೇಳಿದರು. ಸುದೀಪ್​ರ ಪ್ರಶ್ನೆಗೆ ಆಘಾತಕ್ಕೆ ಒಳಗಾದರು ಚೈತ್ರಾ.

‘ನನಗೆ ನಾನ್​ ವೆಜ್ ತಿನ್ನಿಸಿದ್ದೀರಾ? ನಿಮಗೆ ಒಳ್ಳೆಯದಾಗುತ್ತಾ?’ ಎಂದು ಭವ್ಯಾ ತಂಡದ ವಿರುದ್ಧ ಚೈತ್ರಾ ಗುಡುಗಿದರು. ಆದರೂ ಸುದೀಪ್ ಬಳಿ ಇಲ್ಲ ಸಾರ್ ನಾನು ನಾನ್​ ವೆಜ್ ತಿಂದಿಲ್ಲ ಎಂದೇ ವಾದಿಸಿದರು. ಆಗ ಸುದೀಪ್ ನಗುತ್ತಾ, ದೋಸೆ ತಿಂದಿರಿ, ಅದರ ಜೊತೆ ಏನು ತಿಂದಿರಿ ಎಂದರು. ಆಗ ಚೈತ್ರಾ ದೋಸೆ ಜೊತೆ ಪಲ್ಯ ತಿಂದೆ ಎಂದರು. ಅದು ಆಲೂಗಡ್ಡೆ ಪಲ್ಯೆ ಅದರಲ್ಲಿ ಏನೂ ಬೆರೆತಿರಲಿಲ್ಲ ಎಂದರು. ಆಗ ಸುದೀಪ್, ಆಲೂಗಡ್ಡೆ ಪಲ್ಯೆ ಮಾಡಲು ಆಲೂಗಡ್ಡೆಯನ್ನು ಬೇಯಿಸಿದರಲ್ಲ, ಆಲೂಗಡ್ಡೆ ಬೇಯಿಸಲು ಬಳಸಿದ್ದು, ಚಿಕನ್ ಬೇಯಿಸಿದ ನೀರನ್ನು ಎಂದರು. ಅದೇ ಕಾರಣಕ್ಕೆ ನಿಮಗೆ ಆಲೂಗಡ್ಡೆ ಪಲ್ಯೆ ಉಪ್ಪು ಹೆಚ್ಚಾಗಿದೆ ಅನಿಸಿದ್ದು’ ಎಂದರು ಸುದೀಪ್. ಆದರೆ ಈ ವಿಷಯವನ್ನು ಸುದೀಪ್ ತಮಾಷೆಯಾಗಿ ಹೇಳಿದರು. ನಿಜವಾಗಿಯೂ ಚಿಕನ್ ಬೇಯಿಸಿದ ನೀರಲ್ಲೇ ಆಲೂಗಡ್ಡೆ ಬೇಯಿಸಿದರಾ ಎಂಬುದರ ಬಗ್ಗೆ ಸ್ಪಷ್ಟನೆ ಸಿಗಲಿಲ್ಲ. ಎಲ್ಲರೂ ನಕ್ಕು ಆ ವಿಷಯವನ್ನು ಅಲ್ಲಿಗೆ ಕೈಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us