ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್​ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?

ಐದು ಜನರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ರೀತಿ ನಾಮಿನೇಟ್ ಆದವರ ಒಟ್ಟೂ ಮೊತ್ತ 25 ಲಕ್ಷ ರೂಪಾಯಿ ಆಗಿತ್ತು. ಪ್ರೈಜ್ ಅಮೌಂಟ್​ನಲ್ಲಿ ಈ ಹಣವನ್ನು ಕತ್ತರಿಸಲಾಯಿತು.

ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್​ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?
ಬಿಗ್ ಬಾಸ್ ಸ್ಪರ್ಧಿಗಳು

Updated on: Jan 05, 2024 | 8:01 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ನಲ್ಲಿ (BBK 10) ಸಾಕಷ್ಟು ಟ್ವಿಸ್ಟ್ ನೀಡಲಾಗುತ್ತಿದೆ. ಪ್ರತಿ ಬಾರಿ 50 ಲಕ್ಷ ರೂಪಾಯಿ ಹಣ ವಿಜೇತರಿಗೆ ಸಿಗುತ್ತಿತ್ತು. ಆದರೆ, ಈ ಬಾರಿ ಟ್ವಿಸ್ಟ್ ನೀಡಲಾಗಿದೆ. ಈ ವಾರ ನಡೆದ ಟಾಸ್ಕ್​ಗಳು ವಿಜೇತರಿಗೆ ಸಿಗುವ ಹಣ ಎಷ್ಟು ಎಂಬುದನ್ನು ನಿರ್ಧರಿಸಿದೆ. ಮಾಡಿದ ಹಲವು ತಪ್ಪಿನಿಂದ ಸ್ಪರ್ಧಿಗಳು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ವಿಜೇತರಿಗೆ ಸಿಗುತ್ತಿರುವುದು ಎಷ್ಟು ಲಕ್ಷ ರೂಪಾಯಿ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್​’ನಲ್ಲಿ ಈ ಬಾರಿ ಟ್ವಿಸ್ಟ್ ನೀಡಲಾಯಿತು. 25 ಸಾವಿರದಿಂದ ಆರಂಭ ಆಗಿ 20 ಲಕ್ಷ ಪಾಯಿಂಟ್ಸ್​ನ ಬೋರ್ಡ್​ನ ಬಿಗ್ ಬಾಸ್ ನೀಡಿದರು. ಇದನ್ನು ಸ್ಪರ್ಧಿಗಳು ತಮಗೆ ಸೂಕ್ತ ಎನಿಸಿದ್ದನ್ನು ಧರಿಸಬೇಕಿತ್ತು. ಇದಕ್ಕೆ ವೋಟಿಂಗ್ ಮಾಡಲಾಯಿತು. ಆ ಬಳಿಕ ಬಿಗ್ ಬಾಸ್ ಟ್ವಿಸ್ಟ್ ನೀಡಿದರು. ಬೋರ್ಡ್ ಧರಿಸಿದರವರು ನಾಮಿನೇಟ್ ಆದರೆ ಅವರು ಧರಿಸಿದ ಬೋರ್ಡ್​ನ ಮೊತ್ತವನ್ನು ಪ್ರೈಜ್ ಅಮೌಂಟ್​ನಲ್ಲಿ ಕಡಿತಗೊಳಿಸುವುದಾಗಿ ಬಿಗ್ ಬಾಸ್ ಘೋಷಿಸಿದರು.

ಐದು ಜನರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ರೀತಿ ನಾಮಿನೇಟ್ ಆದವರ ಒಟ್ಟೂ ಮೊತ್ತ 25 ಲಕ್ಷ ರೂಪಾಯಿ ಆಗಿತ್ತು. ಪ್ರೈಜ್ ಅಮೌಂಟ್​ನಲ್ಲಿ ಈ ಹಣವನ್ನು ಕತ್ತರಿಸಲಾಯಿತು. ಇದನ್ನು ಮರಳಿ ಪಡೆಯಲು ಬಿಗ್ ಬಾಸ್ ಒಂದಷ್ಟು ಟಾಸ್ಕ್ ನೀಡಿದರು. ಈ ಟಾಸ್ಕ್​ನಲ್ಲಿ ಸ್ಪರ್ಧಿಗಳು ಗೆದ್ದಿದ್ದು ಕೇವಲ 15 ಲಕ್ಷ ರೂಪಾಯಿ ಮಾತ್ರ. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಮಾಡಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪ್ರತಾಪ್?

‘ಟಾಸ್ಕ್ ಆಡಿ ಮನೆ 15 ಲಕ್ಷ ರೂಪಾಯಿ ಗೆಲ್ಲಲು ಮಾತ್ರ ಸಾಧ್ಯವಾಗಿದೆ. ಇನ್ನು, 10 ಲಕ್ಷವನ್ನು ಮನೆ ಕಳೆದುಕೊಂಡಿದೆ. ಹೀಗಾಗಿ, ವಿನ್ನರ್​ಗೆ ಸಿಗೋದು 40 ಲಕ್ಷ ರೂಪಾಯಿ ಮಾತ್ರ’ ಎಂದರು ಬಿಗ್ ಬಾಸ್. ಆ ಬಳಿಕ ಬಿಗ್ ಬಾಸ್ ಹೆಚ್ಚುವರಿಯಾಗಿ 5 ಲಕ್ಷ ಸೇರ್ಪಡೆ ಮಾಡಿದರು. ಈ ಮೂಲಕ ಪ್ರೈಜ್ ಮೊತ್ತ 45 ಲಕ್ಷ ರೂಪಾಯಿ ಆಯಿತು. ಇದರ ಜೊತೆ ಮಾರುತಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Fri, 5 January 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us