ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1' ಯಶಸ್ವಿಯಾಗಿ 14 ವಾರಗಳನ್ನು ಪೂರೈಸಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಜುಲೈ 11 ಮತ್ತು 12ರಂದು ರಾತ್ರಿ 9 ಗಂಟೆಗೆ ಈ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಅಂತಿಮ ಸುತ್ತಿನಲ್ಲಿರುವ 10 ಸೆಲೆಬ್ರಿಟಿ ಜೋಡಿಗಳಲ್ಲಿ ಯಾರು ಚಾಂಪಿಯನ್ ಪಟ್ಟ ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ
ಜೋಡಿ ನಂಬರ್ 1
Edited By:

Updated on: Jul 11, 2026 | 7:46 AM

ಮುಖ್ಯಾಂಶಗಳು

  • 10 ಜೋಡಿಗಳು, 1 ಚಾಂಪಿಯನ್ ಪಟ್ಟ
  • ಯಾರ ಮುಡಿಗೆ ಸಿಗಲಿದೆ ವಿಜಯಲಕ್ಷ್ಮಿ?
  • ದಾಂಪತ್ಯದ ಸವಾಲುಗಳನ್ನ ಗೆದ್ದು ಫಿನಾಲೆ ತಲುಪಿದ ಸೆಲೆಬ್ರಿಟಿಗಳು

ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ. 1’ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ 14 ವಾರಗಳಿಂದ (105 ದಿನಗಳು) ವಿನೂತನ ಟಾಸ್ಕ್‌ಗಳು ಮತ್ತು ಕೌಟುಂಬಿಕ ಹಿನ್ನೆಲೆಯೊಂದಿಗೆ ವೀಕ್ಷಕರನ್ನು ರಂಜಿಸಿದ್ದ ಈ ಕಾರ್ಯಕ್ರಮ, ಇದೀಗ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಇಂದು (ಜುಲೈ 11) ಮತ್ತು ನಾಳೆ (ಜುಲೈ 12) ರಾತ್ರಿ 9 ಗಂಟೆಗೆ ಈ ಶೋನ ಮಹಾ ಸಂಚಿಕೆ ಪ್ರಸಾರವಾಗಲಿದೆ.

ಅಂತಿಮ ಸುತ್ತಿನಲ್ಲಿರುವ 10 ಸೆಲೆಬ್ರಿಟಿ ಜೋಡಿಗಳು

ವಿವಿಧ ವಯೋಮಾನದ ಹಾಗೂ ದಾಂಪತ್ಯ ಜೀವನದ ಬೇರೆ ಬೇರೆ ಹಂತಗಳಲ್ಲಿರುವ (3 ತಿಂಗಳಿನಿಂದ ಹಿಡಿದು 30 ವರ್ಷಗಳ ದಾಂಪತ್ಯದವರೆಗೆ) ಒಟ್ಟು 10 ಸೆಲೆಬ್ರಿಟಿ ಜೋಡಿಗಳು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿವೆ

ಅಭಿಲಾಷ್ ಮತ್ತು ಅಪೂರ್ವ, ಕೋಟೆ ಪ್ರಭಾಕರ್ ಮತ್ತು ಮಾಲತಿ, ಗೀತಾ ಭಾರತಿ ಭಟ್ ಮತ್ತು ರಾಜಾರಾಮ್ ಭಟ್, ರಜಿನಿ ಮತ್ತು ಅರುಣ್, ರುದ್ರ ಮಾಸ್ಟರ್ ಮತ್ತು ನಿರೀಕ್ಷಾ, ಮಿಮಿಕ್ರಿ ಗೋಪಿ ಮತ್ತು ಉಷಾರಾಣಿ, ಧನರಾಜ್ ಮತ್ತು ಪ್ರಜ್ಞಾ, ಜಗಪ್ಪ ಮತ್ತು ಸುಶ್ಮಿತಾ, ಬಾಳು ಬೆಳಗುಂದಿ ಮತ್ತು ಮಾಲಾಶ್ರೀ, ನಯನ ಮತ್ತು ಸುಹಾಸ್ ಪೈಕಿ ಯಾರಿಗೆ ಗೆಲುವು ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.

ತೀರ್ಪುಗಾರರು ಮತ್ತು ನಿರೂಪಕರು

ತೀರ್ಪುಗಾರರ ಬಳಗ: ಚಿತ್ರರಂಗದ ಪ್ರಮುಖರಾದ ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ರಾಜೇಶ್ ನಟರಂಗ ಮತ್ತು ಛಾಯಾಸಿಂಗ್ ಅವರು ಕಾರ್ಯಕ್ರಮದ ಜಡ್ಜ್ ಆಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇಡೀ ಸೀಸನ್‌ನಾದ್ಯಂತ ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ಅವರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

Published On - 7:45 am, Sat, 11 July 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us