ಕಿರುತೆರೆ ಲೋಕದಲ್ಲಿ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಅದ್ದೂರಿಯಾಗಿ ಸೀರಿಯಲ್ ಮಾಡಿ ಎಲ್ಲರ ಗಮನ ಸೆಳೆಯಲು ಎಲ್ಲಾ ವಾಹಿನಿಗಳು ಪ್ರಯತ್ನಿಸುತ್ತಿವೆ. ವಿವಿಧ ರೀತಿಯ ಕಥೆಯ ಮೂಲಕ ವೀಕ್ಷಕರ ಎದುರು ಬರಲಾಗುತ್ತಿದೆ. ಅತ್ತೆ-ಸೊಸೆ ಕಥೆ, ತಾಯಿ ಮಕ್ಕಳ ಕಥೆ, ವಯಸ್ಸಿನ ಅಂತರ ಇದ್ದು ಮದುವೆ ಆಗಲು ಕಷ್ಟಪಡುತ್ತಿರುವ ಪುರುಷ-ಮಹಿಳೆಯ ಕಥೆ ಹೀಗೆ ಬಣ್ಣಬಣ್ಣದ ಕಥೆಗಳನ್ನು ಇಟ್ಟುಕೊಂಡು ಸೀರಿಯಲ್ ಮಾಡಲಾಗುತ್ತಿದೆ. ಈಗ ಜುಲೈ 23-29ರವರೆಗಿನ ಟಿಆರ್ಪಿ ರೇಟಿಂಗ್ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ (Amruthadhare Serial) ಟಿಆರ್ಪಿಯಲ್ಲಿ ಭಾರೀ ಏರಿಕೆ ಆಗಿದೆ.
ಉಮಾಶ್ರೀ ಮೊದಲಾದವರು ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್ಪಿಯಲ್ಲಿ ಭಾರೀ ಏರಿಕೆ ಕಂಡಿದೆ. ಕಳೆದ ಕೆಲ ವಾರದಿಂದ ಈ ಧಾರಾವಾಹಿ ಟಿಆರ್ಪಿ ಡಬಲ್ ಡಿಜಿಟ್ ತಲುಪಿದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿರುವುದರಿಂದ ಇಷ್ಟು ದೊಡ್ಡ ಮಟ್ಟದ ಟಿಆರ್ಪಿ ಸಿಗುತ್ತಿದೆ.
‘ಗಟ್ಟಿಮೇಳ’ ಧಾರಾವಾಹಿ ಈಗಾಗಲೇ ಸಾವಿರಾರು ಎಪಿಸೋಡ್ ಪೂರ್ಣಗೊಳಿಸಿದೆ. ಈ ಧಾರಾವಾಹಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಕಳೆದ ವಾರಕ್ಕಿಂತ ಈ ವಾರ ಧಾರಾವಾಹಿಯ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ.
ರಾಜೇಶ್ ನಟರಂಗ, ಛಾಯಾ ಸಿಂಗ್ ಅಭಿನಯದ ‘ಅಮೃತಧಾರೆ’ ಧಾರಾವಾಹಿ ಕೂಡ ಪ್ರಮುಖ ಘಟ್ಟ ತಲುಪಿದೆ. ಇಬ್ಬರ ಮಧ್ಯೆ ಈಗತಾನೇ ಪ್ರೀತಿ ಮೂಡುವ ಹಂತದಲ್ಲಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಪ್ರಬುದ್ಧ ನಟನೆಯ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ಮೊದಲ ವಾರಕ್ಕಿಂತ ಈ ಧಾರಾವಾಹಿಯ ಟಿಆರ್ಪಿ ಹೆಚ್ಚಿದೆ.
ಟಿಆರ್ಪಿ ರೇಸ್ನಲ್ಲಿ ಮೂರನೇ ಸ್ಥಾನದಲ್ಲಿ ಎರಡು ಧಾರಾವಾಹಿಗಳು ಇವೆ. ‘ಶ್ರೀರಸ್ತು ಶುಭಮಸ್ತು’ ಹಾಗೂ ‘ನಮ್ಮ ಲಚ್ಚಿ’ ಧಾರಾವಾಹಿಗಳು ಇವೆ. ಎರಡೂ ಧಾರಾವಾಹಿಗೆ ಒಂದೇ ರೀತಿಯ ಟಿಆರ್ಪಿ ಸಿಕ್ಕಿದೆ.
ಇದನ್ನೂ ಓದಿ: ‘ಸೀತಾ ರಾಮ’ ಟೈಟಲ್ ಗೀತೆಯಲ್ಲಿ ಗಮನ ಸೆಳೆದ ವೈಷ್ಣವಿ; ಧಾರಾವಾಹಿ ಕಥೆಯ ಬಗ್ಗೆ ಮೂಡಿದೆ ಕುತೂಹಲ
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ವಾರ ಈ ಧಾರಾವಾಹಿ ಆರನೇ ಸ್ಥಾನದಲ್ಲಿ ಇತ್ತು. ಈ ವಾರ ಈ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.
ಆರನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಏಳನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ ಧಾರಾವಾಹಿ ಇದೆ. ಈ ಧಾರಾವಾಹಿಗೆ ದಿನ ಕಳೆದಂತೆ ಟಿಆರ್ಪಿ ಕಡಿಮೆ ಆಗುತ್ತಿದೆ. ಇದು ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Thu, 6 July 23