ಮತ್ತೆ ಮುಗ್ಗರಿಸಿದ ಹೊಸ ಧಾರಾವಾಹಿಗಳು; ಟಿಆರ್​​ಪಿ ರೇಸ್​ನಲ್ಲಿ ಮುಂದಿರೋರು ಯಾರು?

|

Updated on: Jun 14, 2024 | 10:53 AM

‘ಪುಟ್ಟಕ್ಕನ ಮಕ್ಕಳು’ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಮತ್ತೆ ಮುಗ್ಗರಿಸಿದ ಹೊಸ ಧಾರಾವಾಹಿಗಳು; ಟಿಆರ್​​ಪಿ ರೇಸ್​ನಲ್ಲಿ ಮುಂದಿರೋರು ಯಾರು?
ಮತ್ತೆ ಮುಗ್ಗರಿಸಿದ ಹೊಸ ಧಾರಾವಾಹಿಗಳು; ಟಿಆರ್​​ಪಿ ರೇಸ್​ನಲ್ಲಿ ಮುಂದಿರೋರು ಯಾರು?
Follow us on

ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳ ಎಂಟ್ರಿ ಆಗುತ್ತಲೇ ಇರುತ್ತವೆ. ಹಳೆಯ ಧಾರಾವಾಹಿಗಳ ಜೊತೆ ಇವು ಸ್ಪರ್ಧೆಗೆ ಇಳಿದಿವೆ. ಈಗ 23ನೇ ವಾರದ ಟಿಆರ್​​ಪಿ (Serial TRP) ಲಿಸ್ಟ್ ಸಿಕ್ಕಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಧಾರಾವಾಹಿಗಳು ಹೊಸ ಧಾರಾವಾಹಿಗಳನ್ನು ಹಿಂದಿಕ್ಕಿವೆ. ಎಂದಿನಂತೆ ಜೀ ಕನ್ನಡದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ.

‘ಪುಟ್ಟಕ್ಕನ ಮಕ್ಕಳು’ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಜೀ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆಗಿದೆ. ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಇವೆರಡೂ ಧಾರಾವಾಹಿಗಳು ಇತ್ತೀಚೆಗೆ ಪ್ರಸಾರ ಆರಂಭಿಸಿವೆ.

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ರಾಮ್ ಹಾಗೂ ಸೀತಾಳ ಎಂಗೇಜ್​ಮೆಂಟ್ ಆಗಿದೆ. ಇವರ ಮಧ್ಯೆ ಪ್ರೀತಿ ಮೂಡಿದೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಟಾಪ್​ ಐದರಲ್ಲಿ ಇರುವ ಎಲ್ಲಾ ಧಾರಾವಾಹಿಗಳು ಜೀ ಕನ್ನಡದವೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಭರ್ಜರಿ ಬೇಡಿಕೆ; ಟಿಆರ್​ಪಿಯಲ್ಲಿ ಸಖತ್ ಏರಿಕೆ

ಹೊಸ ಧಾರಾವಾಹಿ ‘ನಿನಗಾಗಿ’ ಟಿಆರ್​ಪಿ ಕಡಿಮೆ ಆಗಿದೆ. ಈ ಧಾರಾವಾಹಿ 22ನೇ ವಾರದಲ್ಲಿ ಆರನೇ ಸ್ಥಾನ ಪಡೆದಿತ್ತು. 23ನೇ ವಾರದ ಧಾರಾವಾಹಿಯಲ್ಲಿ ಒಂಭತ್ತನೇ ಸ್ಥಾನಕ್ಕೆ ಇಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.