‘ಕಪಿಲ್ ಶರ್ಮಾ’ ಶೋಗೆ ಬರಲ್ಲ ಎರಡನೇ ಸೀಸನ್? ನಿರ್ಮಾಪಕರಿಗೆ ಕಾಡಿದೆ ಭಯ

ಸೋನಿ ವಾಹಿನಿಯಲ್ಲಿ ‘ದಿ ಕಪಿಲ್ ಶರ್ಮಾ’ ಶೋ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಹೊಸ ಸೀಸನ್ ಆರಂಭ ಆಗಿತ್ತು. ಅದೂ ನೆಟ್​ಫ್ಲಿಕ್ಸ್​ನಲ್ಲಿ. ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ ಒಟ್ಟಾದ ಹೊರತಾಗಿಯೂ ಜನರು ಈ ಶೋನ ನೋಡಿಲ್ಲ. ವಾಟ್ಸಾಪ್​ನಲ್ಲಿ ಬಂದ ಮೆಸೇಜ್​ಗಳನ್ನು ಜೋಕ್ ರೂಪದಲ್ಲಿ ಹೇಳುವ ಕೆಲಸ ಆಗಿದೆ.

‘ಕಪಿಲ್ ಶರ್ಮಾ’ ಶೋಗೆ ಬರಲ್ಲ ಎರಡನೇ ಸೀಸನ್? ನಿರ್ಮಾಪಕರಿಗೆ ಕಾಡಿದೆ ಭಯ
‘ಕಪಿಲ್ ಶರ್ಮಾ’ ಶೋಗೆ ಬರಲ್ಲ ಎರಡನೇ ಸೀಸನ್? ನಿರ್ಮಾಪಕರಿಗೆ ಕಾಡಿದೆ ಭಯ
Edited By:

Updated on: Jun 27, 2024 | 10:15 AM

ಈ ಮೊದಲು ಪ್ರಸಾರ ಕಾಣುತ್ತಿದ್ದ ‘ಕಪಿಲ್ ಶರ್ಮಾ’ (Kapil Sharma) ಶೋಗಳು ನಗು ಉಕ್ಕಿಸುತ್ತಿದ್ದವು. ಅದರಲ್ಲೂ ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ ಒಟ್ಟಾಗಿ ಕಾಣಿಸಿಕೊಂಡರಂತೂ ಮುಗಿದೇ ಹೋಯಿತು. ಆದರೆ, ಈಗ ಕಾಲ ಬದಲಾಗಿದೆ. ಕಪಿಲ್ ಶರ್ಮಾ ನಡೆಸಿಕೊಡೋ ಶೋ ಮೊದಲಿನಷ್ಟು ಬೇಡಿಕೆ ಉಳಿಸಿಕೊಂಡಿಲ್ಲ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಫ್ಲಾಪ್ ಎನಿಸಿಕೊಂಡಿದೆ. ಸೀಸನ್ 1 ಫ್ಲಾಪ್ ಆಗಿರುವುದರಿಂದ ಇದಕ್ಕೆ ಎರಡನೇ ಸೀಸನ್ ಬರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ದಿ ಕಪಿಲ್ ಶರ್ಮಾ’ ಶೋ ಸೋನಿಯಲ್ಲಿ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಹೊಸ ಸೀಸನ್ ಆರಂಭ ಆಗಿತ್ತು. ಅದೂ ನೆಟ್​ಫ್ಲಿಕ್ಸ್​ನಲ್ಲಿ. ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ ಸೇರಿದ ಹೊರತಾಗಿಯೂ ಜನರು ಈ ಶೋನ ನೋಡಿಲ್ಲ. ವಾಟ್ಸಾಪ್​ನಲ್ಲಿ ಬಂದ ಮೆಸೇಜ್​ಗಳನ್ನು ಜೋಕ್ ರೂಪದಲ್ಲಿ ಹೇಳುವ ಕೆಲಸ ಆಗಿದೆ.

ಈ ಬಾರಿ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡ ಈ ಶೋನಲ್ಲಿ ವಿವಿಧ ರೀತಿಯ ಅತಿಥಿಗಳೇನೋ ಆಗಮಿಸಿದ್ದರು. ರಣಬೀರ್ ಕಪೂರ್, ಸಾನಿಯಾ ಮಿರ್ಜಾ, ಎಡ್ ಶೇರನ್ ಸೇರಿ ಅನೇಕರು ಇದರಲ್ಲಿ ಇದ್ದರು. ಕೀಕು ಶರ್ಮಾ, ಕೃಷ್ಣ ಅಭಿಷೇಕ್, ಸುನೀಲ್ ಗ್ರೋವರ್, ಅರ್ಚನಾ ಪುರಾನಾ ಸಿಂಗ್ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದ ಪಾತ್ರವರ್ಗದಲ್ಲಿ ಇದ್ದ ಹೊರತಾಗಿಯೂ ನಗು ಬಂದಿಲ್ಲ.

ಸದ್ಯ ಎರಡನೇ ಸೀಸನ್ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಮೊದಲ ಸೀಸನ್​ನೇ ಜನರು ಅಷ್ಟಾಗಿ ನೋಡಿಲ್ಲ. ಎಲ್ಲಿಯೂ ಕ್ಲಿಪ್​ಗಳು ವೈರಲ್ ಆಗಿಲ್ಲ. ಹೀಗಾಗಿ, ಇದರ ಎರಡನೇ ಸೀಸನ್ ಮಾಡಿ ಪ್ರಯೋಜನ ಏನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಶೋನಲ್ಲಿ ಬರುವ ಪಾತ್ರಗಳು ಸಖತ್ ವೀಕ್ ಆಗಿವೆ. ಆ ಬಗ್ಗೆ ನೆಟ್​ಫ್ಲಿಕ್ಸ್​ನವರು ಗಮನ ಹರಿಸಬೇಕಿದೆ.

ಇದನ್ನೂ ಓದಿ: ಕಪಿಲ್ ಶರ್ಮಾ ಜಾಗಕ್ಕೆ ಬೇರೆ ಕಾಮಿಡಿಯನ್​ನ ಕರೆತಂದ ಸೋನಿ? ಬರಲಿದೆ ಹೊಸ ಶೋ

ಇನ್ನು, ಈ ಶೋಗೆ ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ಬರುತ್ತಿದ್ದಾರೆ. ಇದಕ್ಕೆ ಕಾರಣ ಆಗಿರೋದು ನೆಟ್​ಫ್ಲಿಕ್ಸ್ ಜೊತೆಗಿನ ಒಪ್ಪಂದ. ಈ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡವರು ಮಾತ್ರ  ಶೋನಲ್ಲಿ ಭಾಗಿ ಆಗುತ್ತಿದ್ದಾರೆ. ಇದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಹೀಗಾಗಿ ಹೊಸ ಸೀಸನ್ ಮಾಡಬೇಕೆ ಅಥವಾ ಬೇಡವೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.