AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪಿಲ್ ಶರ್ಮಾ ಜಾಗಕ್ಕೆ ಬೇರೆ ಕಾಮಿಡಿಯನ್​ನ ಕರೆತಂದ ಸೋನಿ? ಬರಲಿದೆ ಹೊಸ ಶೋ

ಜಾಕಿರ್ ಖಾನ್ ಅವರ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಅವರು ಹಲವು ಕಾಮಿಡಿ ಶೋ ನಡೆಸಿಕೊಟ್ಟಿದ್ದಾರೆ. ಸ್ಟ್ಯಾಂಡ್​ಅಪ್ ಕಾಮಿಡಿ ಮಾಡಿದ್ದಾರೆ. ಅವರ ಕಾಮಿಡಿ ಪಂಚ್ ಟೈಮಿಂಗ್ ಉತ್ತಮವಾಗಿದೆ. ಅವರು ಭರ್ಜರಿಯಾಗಿ ರೋಸ್ಟ್ ಕೂಡ ಮಾಡುತ್ತಾರೆ. ಇದನ್ನು ಬಳಸಿಕೊಳ್ಳಲು ಸೋನಿ ಟಿವಿ ಮುಂದಾಗಿದೆ ಎಂದು ವರದಿ ಆಗಿದೆ.

ಕಪಿಲ್ ಶರ್ಮಾ ಜಾಗಕ್ಕೆ ಬೇರೆ ಕಾಮಿಡಿಯನ್​ನ ಕರೆತಂದ ಸೋನಿ? ಬರಲಿದೆ ಹೊಸ ಶೋ
ಕಪಿಲ್-ಜಾಕಿರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 17, 2024 | 11:03 AM

Share

ಕಪಿಲ್ ಶರ್ಮಾ (Kapil Sharma) ಅವರು ಸೋನಿ ಟಿವಿಯಲ್ಲಿ ‘ದಿ ಕಪಿಲ್ ಶರ್ಮಾ ಶೋ’ ನಡೆಸಿಕೊಡುತ್ತಿದ್ದರು. ಈ ಶೋ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆಯಿತು. ಆದರೆ, ಈಗ ಕಪಿಲ್ ಶರ್ಮಾ ಅವರು ಸೋನಿ ಟಿವಿಯಿಂದ ಹೊರ ನಡೆದಿದ್ದಾರೆ. ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ’ ಶೋನ ನಡೆಸಿಕೊಡುತ್ತಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಸೋನಿ ಟಿವಿಯಲ್ಲಿ ಕಪಿಲ್ ಶರ್ಮಾ ಜಾಗಕ್ಕೆ ಖ್ಯಾತ ಕಾಮಿಡಿಯನ್ ಜಾಕಿರ್ ಖಾನ್ ಅವರ ಆಗಮನ ಆಗಲಿದೆ ಎಂದು ವರದಿ ಆಗಿದೆ.

ಜಾಕಿರ್ ಖಾನ್ ಅವರ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಅವರು ಹಲವು ಕಾಮಿಡಿ ಶೋ ನಡೆಸಿಕೊಟ್ಟಿದ್ದಾರೆ. ಸ್ಟ್ಯಾಂಡ್​ಅಪ್ ಕಾಮಿಡಿ ಮಾಡಿದ್ದಾರೆ. ಅವರ ಕಾಮಿಡಿ ಪಂಚ್ ಟೈಮಿಂಗ್ ಉತ್ತಮವಾಗಿದೆ. ಅವರು ಭರ್ಜರಿಯಾಗಿ ರೋಸ್ಟ್ ಕೂಡ ಮಾಡುತ್ತಾರೆ. ಇದನ್ನು ಬಳಸಿಕೊಳ್ಳಲು ಸೋನಿ ಟಿವಿ ಮುಂದಾಗಿದೆ ಎಂದು ವರದಿ ಆಗಿದೆ. ಜಾಕಿರ್​ನ ಇಟ್ಟುಕೊಂಡು ಹೊಸ ಶೋ ಆರಂಭಿಸಲು ಸೋನಿ ಟಿವಿ ನಿರ್ಧರಿಸಿದೆಯಂತೆ.

ಜಾಕಿರ್ ಖಾನ್​ಗೆ ಇರೋ ಅಭಿಮಾನಿ ಬಳಗ ದೊಡ್ಡದು. ಅವರಿಗೆ ಎಲ್ಲಾ ವರ್ಗಾದ ಅಭಿಮಾನಿಗಳೂ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್​ ಫಾಲೋಯಿಂಗ್ ಇದೆ. ಹೀಗಾಗಿ ‘ಕಪಿಲ್ ಶರ್ಮಾ’ ಶೋ ರೀತಿಯೇ ಹೊಸ ಶೋ ನಡೆಸಿಕೊಡಲಿದ್ದಾರೆ. ಆಗಸ್ಟ್​​ನಿಂದ ಶೋ ಆರಂಭ ಆಗಲಿದೆಯಂತೆ.

ಜಾಕಿರ್ ಶೋನಲ್ಲಿ ಶಾಯರಿ ಹಾಗೂ ಕಾಮಿಡಿ ಎರಡೂ ಇರಲಿದೆ. ಇದು ಜಾಕಿರ್ ಅವರ ಸ್ಟೈಲ್ ಕೂಡ ಹೌದು. ಕಪಿಲ್ ಅವರು ಹೊರ ನಡೆದರು ಎನ್ನುವ ಕಾರಣಕ್ಕೆ ಸೋನಿ ಟಿವಿ ಬೇರೆ ರೀತಿಯಲ್ಲಿ ಆಲೋಚಿಸುತ್ತಿದೆ. ಎಂದಿನಂತೆ ಬಾಲಿವುಡ್​ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: ಹೆಚ್ಚು ಜನರ ತಲುಪಲು ವಿಫಲವಾಯಿತು ಹೊಸ ಕಪಿಲ್ ಶರ್ಮಾ ಶೋ; ಕಾರಣಗಳೇನು?

ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ದೊಡ್ಡ ಮಟ್ಟದ ಜನಪ್ರಿಯತೆ ಪಡೆಯಲು ವಿಫಲವಾಗಿದೆ. ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ ಕಾಂಬಿನೇಷನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ವಿಫಲವಾಗಿದೆ. ಒಟಿಟಿಯಲ್ಲಿ ಕಪಿಲ್ ಶರ್ಮಾ ಅವರನ್ನು ಜನರು ಹೆಚ್ಚು ಒಪ್ಪಿಕೊಂಡಿಲ್ಲ. ಈ ಸಂದರ್ಭದಲ್ಲಿ ಸೋನಿ ಟಿವಿ ಹೊಸ ಶೋ ಜೊತೆ ಬಂದರೆ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:15 am, Fri, 17 May 24