‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಭರ್ಜರಿ ಬೇಡಿಕೆ; ಟಿಆರ್ಪಿಯಲ್ಲಿ ಸಖತ್ ಏರಿಕೆ
ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಕೂಡು ಕುಟುಂಬದ ಕಥೆಯನ್ನು ಹೇಳಲಾಗುತ್ತಿದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ನಂಬರ್ 1 ಸ್ಥಾನದಲ್ಲಿ ಇತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿ ಹೆಚ್ಚಿರುವುದರಿಂದ ‘ಲಕ್ಷ್ಮಿ ನಿವಾಸ’ಕ್ಕೆ ಎರಡನೇ ಸ್ಥಾನ ಸಿಕ್ಕಿದೆ.
ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu) ಪ್ರಮುಖ ಘಟ್ಟ ತಲುಪಿದೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ. ಈ ಧಾರಾವಾಹಿ ಕಳೆದ ಮೂರು ವಾರಗಳಿಂದ ನಂಬರ್ 1 ಸ್ಥಾನದಲ್ಲಿ ಮುಂದುವರಿಯುತ್ತಿದೆ. 18ನೇ ವಾರದ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಉಳಿದಂತೆ ಯಾವ ಯಾವ ಧಾರಾವಾಹಿಗಳು ಮೊದಲ ಸ್ಥಾನದಲ್ಲಿ ಇವೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈಗ ಪ್ರಮುಖ ಘಟ್ಟ ತಲುಪಿದೆ. ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಜನರಿಂದ ಧಾರಾವಾಹಿ ಮೆಚ್ಚುಗೆ ಪಡೆಯುತ್ತಿದೆ. ಟಿಆರ್ಪಿ ಕೂಡ ಹೆಚ್ಚಿದೆ.
ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಕೂಡು ಕುಟುಂಬದ ಕಥೆಯನ್ನು ಹೇಳಲಾಗುತ್ತಿದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ನಂಬರ್ 1 ಸ್ಥಾನದಲ್ಲಿ ಇತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿ ಹೆಚ್ಚಿರುವುದರಿಂದ ‘ಲಕ್ಷ್ಮಿ ನಿವಾಸ’ಕ್ಕೆ ಎರಡನೇ ಸ್ಥಾನ ಸಿಕ್ಕಿದೆ.
ಇದನ್ನೂ ಓದಿ: ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಟಿವಿಗೂ ಮೊದಲೇ ವೀಕ್ಷಿಸಬಹುದು; ಹೇಗೆ?
ಮೂರನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಇವೆ. ‘ಸೀತಾ ರಾಮ’ ಹಾಗೂ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಎರಡೂ ಧಾರಾವಾಹಿಗಳಿಗೆ ಸಮಾನ ಬೇಡಿಕೆ ಸೃಷ್ಟಿ ಆಗಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ‘ರಾಮಾಚಾರಿ’ ಧಾರಾವಾಹಿ ಇದೆ. ಟಾಪ್ 5ರಲ್ಲಿ ಇರೋ ಕಲರ್ಸ್ ಕನ್ನಡದ ಏಕೈಕ ಧಾರಾವಾಹಿ ಇದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.