ಕಡಿಮೆ ಟಿಆರ್​ಪಿ ಪಡೆದ ‘ಸಲಾರ್​’ ಸಿನಿಮಾ; ಪ್ರಭಾಸ್​ ಅಭಿಮಾನಿಗಳಿಗೆ ನಿರಾಸೆ

‘ಕೆಜಿಎಫ್​: ಚಾಪ್ಟರ್​ 1’ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳ ರೀತಿ ಉತ್ತಮ ಟಿಆರ್​ಪಿ ಪಡೆಯಲು ‘ಸಲಾರ್’ ಚಿತ್ರಕ್ಕೆ ಸಾಧ್ಯವಾಗಿಲ್ಲ. ತೆಲುಗಿನ ಕೆಲವು ಫ್ಲಾಪ್​ ಸಿನಿಮಾಗಳಿಗಿಂತಲೂ ಕಡಿಮೆ ಟಿಆರ್​ಪಿ ‘ಸಲಾರ್​’ ಚಿತ್ರಕ್ಕೆ ಬಂದಿದೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪ್ರಭಾಸ್​ ನಟನೆಯ ಸಿನಿಮಾಗೆ ಇಷ್ಟು ನೀರಸ ಪ್ರತಿಕ್ರಿಯೆ ಬರಲು ಕಾರಣ ಏನು ಎಂದು ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ.

ಕಡಿಮೆ ಟಿಆರ್​ಪಿ ಪಡೆದ ‘ಸಲಾರ್​’ ಸಿನಿಮಾ; ಪ್ರಭಾಸ್​ ಅಭಿಮಾನಿಗಳಿಗೆ ನಿರಾಸೆ
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: May 03, 2024 | 9:12 PM

ನಟ ಪ್ರಭಾಸ್​ ಅವರು ‘ಸಲಾರ್​’ (Salaar) ಸಿನಿಮಾದ ಮೂಲಕ ಗೆಲುವಿನ ಟ್ರ್ಯಾಕ್​ಗೆ ಮರಳಿದರು. ಈ ಸಿನಿಮಾದ ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. 2023ರ ಡಿಸೆಂಬರ್​ 22ರಂದು ಬಿಡುಗಡೆ ಆದ ಈ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಮಾಯಿ ಆಗಿತ್ತು. ಬಳಿಕ ಒಟಿಟಿಗೆ ಕಾಲಿಟ್ಟಿತು. ಇತ್ತೀಚೆಗೆ ‘ಸಲಾರ್​’ ಸಿನಿಮಾ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಯಿತು. ಪ್ರಶಾಂತ್​ ನೀಲ್​ ನಿರ್ದೇಶನದ ಈ ಚಿತ್ರಕ್ಕೆ ಕಿರುತೆರೆಯಲ್ಲಿ ಕಳಪೆ ಟಿಆರ್​ಪಿ (Salaar TRP) ಸಿಕ್ಕಿದೆ. ಇದರಿಂದ ಪ್ರಭಾಸ್​ (Prabhas) ಅಭಿಮಾನಿಗಳಿಗೆ ನಿರಾಸೆ ಆಗಿದೆ.

‘ಸ್ಟಾರ್​ ಮಾ’ ವಾಹಿನಿಯಲ್ಲಿ ‘ಸಲಾರ್​’ ಸಿನಿಮಾದ ಟೆಲಿವಿಷನ್​ ಪ್ರೀಮಿಯರ್​ ಆಯಿತು. ಭಾರಿ ಟಿಆರ್​ಪಿ ಬರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಟಿಆರ್​ಪಿ ಬಂದಿಲ್ಲ. ಟಿವಿಯಲ್ಲಿ ಮೊದಲ ಬಾರಿ ಪ್ರಸಾರ ಆದಾಗ ‘ಸಲಾರ್’ ಗಳಿಸಿದ್ದು ಕೇವಲ 6.52 ಟಿಆರ್​ಪಿ ಮಾತ್ರ! ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಇದು ತುಂಬ ಕಡಿಮೆ.

ಬಾಕ್ಸ್​ ಆಫೀಸ್​ನಲ್ಲಿ ಫ್ಲಾಪ್​ ಆದ ‘ಆದಿಕೇಶವ’ ಸಿನಿಮಾಗೆ 10.47 ಟಿಆರ್​ಪಿ ಸಿಕ್ಕಿತ್ತು. ‘ನಾ ಸಾಮಿ ರಂಗ’, ‘ಸ್ಕಂದ’ ಚಿತ್ರಗಳಿಗೆ 8 ಟಿಆರ್​ಪಿ ಬಂದಿತ್ತು. ಅವುಗಳಿಗೆ ಹೋಲಿಸಿದರೆ ‘ಸಲಾರ್​’ ಸಿನಿಮಾಗೆ ಪ್ರೇಕ್ಷಕರಿಂದ ವ್ಯಕ್ತವಾದ ಪ್ರತಿಕ್ರಿಯೆ ತುಂಬ ನೀರಸವಾಗಿದೆ. ಯಾಕೆ ಈ ರೀತಿ ಆಯ್ತು ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಐಪಿಎಲ್​ ಪಂದ್ಯಗಳು ನಡೆಯುತ್ತಿರುವುದರಿಂದ, ಅದಕ್ಕೆ ಪೈಪೋಟಿ ನೀಡಲಾಗದೇ ‘ಸಲಾರ್​’ ಸಿನಿಮಾಗೆ ಕಡಿಮೆ ಟಿಆರ್​ಪಿ ಬಂದಿರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಯಾವಾಗ ಶುರು ಆಗಲಿದೆ ‘ಸಲಾರ್​ 2’ ಶೂಟಿಂಗ್​? ಪ್ರಭಾಸ್​ ಫ್ಯಾನ್ಸ್​ಗೆ ಇಲ್ಲಿದೆ ಸಿಹಿ ಸುದ್ದಿ

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರಕ್ಕೆ ಬರೋಬ್ಬರಿ 11.90 ಟಿಆರ್​ಪಿ ಬಂದಿತ್ತು. ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾ 9.15 ಟಿಆರ್​ಪಿ ಪಡೆದುಕೊಂಡಿತ್ತು. ಆದರೆ ಟಿವಿಯಲ್ಲಿ ‘ಸಲಾರ್​’ ಚಿತ್ರಕ್ಕೆ ಅಷ್ಟು ಕ್ರೇಜ್​ ಕಾಣಿಸಿಲ್ಲ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​ ಮುಂತಾದವರು ಅಭಿನಯಿಸಿದ್ದಾರೆ. ಇದರ ಸೀಕ್ವೆಲ್​ ಕೂಡ ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ‘ಸಲಾರ್​ 2’ ಶೂಟಿಂಗ್​ ಆರಂಭ ಆಗಲಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಸೀಕ್ವೆಲ್​ ಕೆಲಸಗಳಲ್ಲಿ ಪ್ರಶಾಂತ್​ ನೀಲ್​ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ