ಕನ್ನಡತಿ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಪ್ರೀತಿಯನ್ನು ವ್ಯಕ್ತಪಡಿಸದೇ ಸುಮ್ಮನೆ ಇದ್ದ ಹರ್ಷ, ಭುವಿ ಜನ್ಮದಿನಕ್ಕಾಗಿ ಕಾದಿದ್ದ. ಆ ದಿನ ಈಗ ಬಂದೇ ಬಿಟ್ಟಿದೆ. ಭುವಿಗೆ ಪ್ರಪೋಸ್ ಮಾಡೋಕೆ ಹರ್ಷ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಈ ವಿಶೇಷ ಕ್ಷಣಕ್ಕೆ ಯಾವುದಾದರೂ ವಿಘ್ನ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್ ಮಾಡಬೇಕು ಎಂದು ನಿರ್ಧರಿಸಿದ್ದ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದಾನೆ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್ಪ್ರೈಸ್ ಕಾದಿತ್ತು. ಭುವಿ ಕಣ್ಮುಚ್ಚಿ ಬಿಂದು ಮನೆ ಒಳಗೆ ಕರೆತಂದಳು. ಒಳಗೆ ಮಾಡಲಾಗಿದ್ದ ಅಲಂಕಾರ ನೋಡಿ ಭುವನೇಶ್ವರಿಗೆ ನಿಜಕ್ಕೂ ಅಚ್ಚರಿ ಹಾಗೂ ಶಾಕ್ ಎರಡೂ ಆಗಿತ್ತು.
ಬರ್ತ್ಡೇ ಸೆಲಬ್ರೇಷನ್ ನಂತರದಲ್ಲಿ ಹರ್ಷ ಪ್ರಪೋಸ್ ಮಾಡೋಕೆ ವಿಶೇಷ ಅರೇಂಜ್ಮೆಂಟ್ಗಳನ್ನು ಮಾಡಿದ್ದಾನೆ. ಕಾಂಟ್ರ್ಯಾಕ್ಟ್ ನೀಡಿ ಪ್ರಪೋಸ್ ಮಾಡೋಕೆ ವ್ಯವಸ್ಥೆ ಮಾಡಿಸಿದ್ದಾನೆ. ಚಿನ್ನದ ಉಂಗುರ ಕೂಡ ಮಾಡಿಸಿದ್ದಾನೆ. ಇದು ಭುವಿಗೆ ಇನ್ನೂ ತಿಳಿದಿಲ್ಲ.
ಭುವಿ ಪ್ರಪೋಸ್ ಒಪ್ಪಿಕೊಳ್ಳುತ್ತಾರಾ?
ಹರ್ಷ ಮಾಡಿದ ಪ್ರಪೋಸ್ ಭುವಿ ಒಪ್ಪಿಕೊಳ್ಳುತ್ತಾಳಾ ಅನ್ನೋದು ಸದ್ಯದ ಕುತೂಹಲ. ಅವಳ ಕ್ಲೋಸ್ ಫ್ರೆಂಡ್ ವರುಧಿನಿಗೆ ಹರ್ಷ ಮೇಲೆ ಪ್ರೀತಿ ಇದೆ. ಆ ಪ್ರೀತಿಯನ್ನು ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾಳೆ ವರುಧಿನಿ. ಇದು ಭುವಿಗೂ ಗೊತ್ತಾಗಿದೆ. ಒಂದೊಮ್ಮೆ ಹರ್ಷ ಪ್ರೀತಿ ಒಪ್ಪಿಕೊಂಡರೆ ವರುಧಿನಿಗೆ ಬೇಸರ ಆಗುತ್ತದೆ ಎಂದು ಭುವಿಗೆ ಅನಿಸಬಹುದು. ಹೀಗಾಗಿ, ಅವಳು ಹರ್ಷನ ಪ್ರೀತಿಯನ್ನು ತಿರಸ್ಕರಿಸಬಹುದು. ಹರ್ಷನನ್ನು ಕಂಡರೆ ಭುವಿಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಈ ಪ್ರೀತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಅವಳು ಬೀಳಬಹುದು.
ಇದನ್ನೂ ಓದಿ: ಅದ್ದೂರಿಯಾಗಿ ಭುವಿಗೆ ಪ್ರಪೋಸ್ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್ ಯಾರು?
Published On - 7:02 pm, Wed, 6 October 21