
‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ನರ್ ಕಾರ್ತಿಕ್ ಮಹೇಶ್ ಅವರು ದೊಡ್ಡ ಮಟ್ಟದ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರು ‘ರಾಮರಸ’ ಹೆಸರಿನ ಸಿನಿಮಾ ಕೂಡ ಸಹಿ ಮಾಡಿದ್ದು, ಶೂಟ್ ನಡೆಯುತ್ತಿದೆ. ಈಗ ಅವರು ರಿಯಾಲಿಟಿ ಶೋ ಒಂದಕ್ಕೆ ಹೋಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿರೋ ರಿಯಾಲಿಟಿ ಶೋನ ನೇತೃತ್ವವನ್ನು ಕಾರ್ತಿಕ್ ವಹಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಅವುಗಳ ಸಾಲಿಗೆ ಈಗ ಹೊಸ ಶೋ ಸೇರ್ಪಡೆ ಆಗಿದೆ. ಅದುವೇ ‘ಸುವರ್ಣ ಸೆಲೆಬ್ರಿಟಿ ಲೀಗ್’. ಸೆಪ್ಟೆಂಬರ್ 15ರಿಂದ ರಾತ್ರಿ 7 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಮತ್ತೊಂದು ವಿಶೇಷ ಎಂದರೆ ಕಿರುತೆರೆ ಕಲಾವಿದರ ಜೊತೆಗೆ ಕೆಲವು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಬರುತ್ತಿದ್ದಾರೆ.
ಹೌದು, ವಿನಯ್ ಗೌಡ, ತನಿಷಾ ಕುಪ್ಪಂಡ, ನಮ್ರತಾ ಗೌಡ, ರಕ್ಷಕ್ ಬುಲೆಟ್, ಪ್ರಿಯಾಂಕಾ ಈ ಶೋನಲ್ಲಿ ಇರಲಿದ್ದಾರೆ. ‘ಎದುರಾಳಿಗಳ ಹುಟ್ಟಡಗಿಸೋದಕ್ಕೆ ಆನೆ ಬರ್ತಿದೆ, ಹುಶಾರು’ ಎನ್ನುತ್ತಾರೆ ವಿನಯ್ ಗೌಡ. ‘ಜಗತ್ತಿನಲ್ಲಿ ಮೂರು ತರಹದ ಜನರು ಇರುತ್ತಾರೆ. ಒಬ್ಬರು ರೂಲ್ಸ್ನ ಬ್ರೇಕ್ ಮಾಡೋರು, ಒಬ್ಬರು ಫಾಲೋ ಮಾಡೋರು. ಮೂರನೆಯವನು ನಾನು ರೂಲ್ಸ್ನ ಸೆಟ್ ಮಾಡುವವನು’ ಎಂದಿದ್ದಾರೆ ಕಾರ್ತಿಕ್.
ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?
ಈ ರಿಯಾಲಿಟಿ ಶೋನಲ್ಲಿ ಎರಡು ಟೀಂ ಇದೆ. ಎರಡು ಟೀಂಗಳಿಗೆ ನಾನಾ ರೀತಿಯ ಟಾಸ್ಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಸಿದ್ಧತೆ ನಡೆಯುತ್ತಿದೆ. ಹೊಸ ರಿಯಾಲಿಟಿ ಶೋಗಾಗಿ ಬಿಗ್ ಬಾಸ್ ಮನೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಕಲರ್ಸ್ ಕನ್ನಡದಲ್ಲಿ ಪ್ರೋಮೋ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.