AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್​ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ‘ಬಿಗ್ ಬಾಸ್’ ಕಡೆಯಿಂದ ಕಾರು ಸಿಗಬೇಕಿತ್ತು. ಆದರೆ, ಅದು ವಿಳಂಬ ಆಗಿತ್ತು. ಈಗ ಕೊನೆಗೂ ಅವರಿಗೆ ಕಾರು ದೊರೆತಿದೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್​ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?
ಕಾರ್ತಿಕ್ ಮಹೇಶ್
ರಾಜೇಶ್ ದುಗ್ಗುಮನೆ
|

Updated on: Aug 30, 2024 | 6:59 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ ಜನವರಿ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಂಡಿತ್ತು. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್​ಗೆ ಮಾರುತಿ ಸುಜುಕಿ ಬ್ರೇಜಾ ಕಾರನ್ನು ನೀಡೋದಾಗಿ ಭರವಸೆ ನೀಡಲಾಗಿತ್ತು. ಆದರೆ, ಪ್ರತಿ ಬಾರಿ ಅವರನ್ನು ಕೇಳಿದಾಗ ಕಾರು ಸಿಕ್ಕಿಲ್ಲ ಎಂದೇ ಹೇಳುತ್ತಿದ್ದರು. ಕೊನೆಗೂ ಅವರಿಗೆ ಕಾರು ಸಿಕ್ಕಿದೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

‘ಅಂತೂ ಇಂತೂ ಬಂತು ಬಿಗ್​ ಬಾಸ್ ಕಾರು’ ಎಂದು ಕಾರ್ತಿಕ್ ಮಹೇಶ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರಿಗೆ ಕಾರು ಹಸ್ತಾಂತರ ಮಾಡುತ್ತಿರುವುದು, ಅವರು ಕಾರು ಓಡಿಸುತ್ತಿರುವ ದೃಶ್ಯ ಇದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ಅವರಿಗೆ ಶುಭಕೋರಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಅವರಿಗೆ ವಿಶ್ ಮಾಡಿದ್ದಾರೆ.

ಬಿಗ್ ಬಾಸ್ ಪೂರ್ಣಗೊಂಡ ತಕ್ಷಣ ಕಾರು ಸಿಗುತ್ತದೆ ಅನ್ನೋದು ಅನೇಕರ ಆಲೋಚನೆ ಆಗಿತ್ತು. ಆದರೆ, ಇನ್ನೂ ಕಾರು ಸಿಕ್ಕಿಲ್ಲ ಎಂದು ಕಾರ್ತಿಕ್ ಮಹೇಶ್ ಹೇಳುತ್ತಿದ್ದರು. ಕೇಳಿದರೆ, ‘ಪ್ರಕ್ರಿಯೆ ತುಂಬಾನೇ ದೀರ್ಘವಾಗಿದೆ. ಹೀಗಾಗಿ ಕಾರು ಇನ್ನೂ ದೊರೆತಿಲ್ಲ’ ಎನ್ನುವ ಉತ್ತರ ಅವರ ಕಡೆಯಿಂದ ಬರುತ್ತಿತ್ತು. ಕೊನೆಗೂ ಅವರ ಕೈಗೆ ಕಾರು ಸೇರಿದ್ದು ಅವರು ಖುಷಿಯಾಗಿದ್ದಾರೆ. ಅಮ್ಮನ ಜೊತೆ ತೆರಳಿ ಅವರು ಕಾರು ಖರೀದಿ ಮಾಡಿದ್ದಾರೆ.

ಕಾರ್ತಿಕ್ ಮಹೇಶ್​ಗೆ ಸಿಕ್ಕಿರೋದು ಹೈಬ್ರಿಡ್ ಕಾರು. ಅಂದರೆ ಈ ಕಾರಿನಲ್ಲಿ ಬ್ಯಾಟರಿ ಕೂಡ ಇರುತ್ತದೆ. ಚಲಿಸುವಾಗ ಕಾರಿನ ಬ್ಯಾಟರಿ ಚಾರ್ಜ್ ಆಗುತ್ತದೆ. ಈ ಕಾರಿನ ಎಕ್ಸ್​ಶೋರೂಂ ಬೆಲೆ 11 ಲಕ್ಷದಿಂದ ಆರಂಭ ಆಗಿ 14 ಲಕ್ಷದವರೆಗೂ ಇದೆ. ಈ ಕಾರು 19 ಕಿ.ಮೀ ಮೈಲೇಜ್ ನೀಡುತ್ತದೆ. ಬ್ರೇಜಾ ಕಾರು 1.5 ಲೀಟರ್ ಇಂಜಿನ್ ಹೊಂದಿದೆ.

ಇದನ್ನೂ ಓದಿ: ‘ರಾಮರಸ’ ಕುಡಿದ ಕಾರ್ತಿಕ್ ಮಹೇಶ್ ಸ್ಥಿತಿ ನೋಡಿ; ಮತ್ತೆ ಮತ್ತೆ ಅದೇ ಬೇಕು ಅಂತಿದ್ದಾರೆ ಬಿಗ್ ಬಾಸ್ ವಿನ್ನರ್

ಕಾರ್ತಿಕ್ ಮಹೇಶ್ ಅವರು ಸದ್ಯ ‘ರಾಮರಸ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಈ ಚಿತ್ರದ ಇಂಟ್ರೋಡಕ್ಷನ್ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿತ್ತು. ಬಿಗ್ ಬಾಸ್ ಬಳಿಕ ಅವರು ಘೋಷಿಸಿದ ಮೊದಲ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್