ಪುನೀತ್ ಗ್ರಾನೈಟ್ ಬಿಸ್ನೆಸ್ ವಿಚಾರದಲ್ಲಿ ರಾಜ್​ಕುಮಾರ್ ನಿಲುವು ಏನಿತ್ತು?

ಪುನೀತ್ ರಾಜ್​ಕುಮಾರ್ ಅವರು ಕೇವಲ ನಟಾಗಿರಲಿಲ್ಲ. ಉದ್ಯಮದ ಕಡೆಗೂ ಅವರಿಗೆ ಆಸಕ್ತಿ ಇತ್ತು. ಅವರಿಗೆ ನಟನಾಗಬೇಕು ಎನ್ನುವ ಆಸೆಯೇ ಇರಲಿಲ್ಲವಂತೆ. ಅವರು ಉದ್ಯಮದ ಕಡೆ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿದ್ದರು. ಆರಂಭದಲ್ಲಿ ಅವರು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು.

ಪುನೀತ್ ಗ್ರಾನೈಟ್ ಬಿಸ್ನೆಸ್ ವಿಚಾರದಲ್ಲಿ ರಾಜ್​ಕುಮಾರ್ ನಿಲುವು ಏನಿತ್ತು?
ರಾಜ್​ಕುಮಾರ್-ಪುನೀತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 30, 2024 | 7:52 AM

ನಟ ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಅವರನ್ನು ಕಳೆದು ಕೊಂಡು ಕೆಲವು ವರ್ಷಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅಭಿಮಾನಿಗಳಿಂದ ಆಗಾಗ ಆಗುತ್ತಲೇ ಇರುತ್ತದೆ. ಪುನೀತ್ ಅವರು ಅಕ್ರಮವಾಗಿ ಗ್ರ್ಯಾನೇಟ್ ಬಿಸ್ನೆಸ್ ಮಾಡುತ್ತಿದ್ದರು. ಈ ಕಾರಣಕ್ಕೆ ಅವರ ತಂದೆ ರಾಜ್​ಕುಮಾರ್ ಅವರನ್ನು ಬಂಧಿಸಲಾಗಿತ್ತು ಎನ್ನುವ ಆರೋಪ ಇತ್ತು. ಇದಕ್ಕೆ ಪುನೀತ್ ಅವರು ಸ್ಪಷ್ಟನೆ ಕೊಟ್ಟಿದ್ದರು.

ಪುನೀತ್ ರಾಜ್​ಕುಮಾರ್ ಅವರು ಕೇವಲ ನಟಾಗಿರಲಿಲ್ಲ. ಉದ್ಯಮದ ಕಡೆಗೂ ಅವರಿಗೆ ಆಸಕ್ತಿ ಇತ್ತು. ಅವರಿಗೆ ನಟನಾಗಬೇಕು ಎನ್ನುವ ಆಸೆಯೇ ಇರಲಿಲ್ಲವಂತೆ. ಅವರು ಉದ್ಯಮದ ಕಡೆ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿದ್ದರು. ಅವರೇ ಆರಂಭಿಸಿದ ‘ಪಿಆರ್​ಕೆ’ ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಅವರ ಬಗ್ಗೆ ಕೇಳಿಬಂದ ಗಂಭೀರ ಆರೋಪದ ಬಗ್ಗೆ ಪುನೀತ್ ಮಾತನಾಡಿದ್ದರು. ಈ ವಿಡಿಯೋ ಈಗ ವೈರಲ್ ಮಾಡಲಾಗಿದೆ. ಪುನೀತ್ ರಾಜ್​ಕುಮಾರ್ ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಹೀಗಾಗಿ ರಾಜ್​ಕುಮಾರ್​ನ ವೀರಪ್ಪನ್ ಅರೆಸ್ಟ್ ಮಾಡಿದ್ದರು ಎಂಬುದು ಕೆಲವರ ವಾದ.

‘ನಮ್ಮ ತಂದೆಯವರು ಅರೆಸ್ಟ್ ಆದಾಗ ಅನೇಕ ಸುದ್ದಿಗಳು ಹರಿದಾಡಿದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ಹಲವಾರು ಸುದ್ದಿ ಬಂತು’ ಎಂದಿದ್ದರು.

‘ನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್​ನಲ್ಲಿ ಬಂದೊತ್ತು. ಈ ರೀತಿಯೆಲ್ಲ ಯಾಕೆ ಹಾಕುತ್ತಿದ್ದಾರೆ ಎಂದುಕೊಳ್ಳುತ್ತಿದ್ದೆ. ನನ್ನ ಬಿಸ್ನೆಸ್ ಅದು. ಅದು ಅಕ್ರಮವೇ ಆಗಿದ್ದರೆ ಕಾನೂನಿದೆ. ಹೊರಗಡೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು. ಯಾರೋ ಹೀಗೆ ಹೇಳಿದ್ರೂ ತೊಂದರೆ ಇಲ್ಲ. ಆದರೆ, ತಂದೆ ಅಪಹರಣ ಆದಾಗ ಅನೇಕರು ಇದನ್ನು ಲಿಂಕ್ ಮಾಡಿದಾಗ ಸಿಕ್ಕಾಪಟ್ಟೆ ನೋವಾಯ್ತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವ. ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು’ ಎಂದಿದ್ದರು ಪುನೀತ್. ಈ ರೀತಿಯ ಸುದ್ದಿಯಿಂದ ಬೇಸರಗೊಂಡಿದ್ದ ರಾಜ್​ಕುಮಾರ್ ಅವರು ಒಮ್ಮೆ ಪುನೀತ್​ಗೆ ಇದೆಲ್ಲ ನಿಲ್ಲಿಸುವಂತೆ ಕೋರಿಕೊಂಡಿದ್ದರು.

ಇದನ್ನೂ ಓದಿ: ‘ಅವರೇ ನನ್ನ ಫೇವರಿಟ್’; ತಮಿಳು ಮಾಧ್ಯಮಗಳಲ್ಲಿ ಪುನೀತ್​ನ ಹೊಗಳಿದ ಪ್ರಿಯಾ ಆನಂದ್

ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಅವರು ನಿಧನ ಹೊಂದಿದ್ದರು. ಅವರಿಗೆ ಕೇವಲ 46 ವರ್ಷ ವಯಸ್ಸು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು. ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರಿಲ್ಲ ಎನ್ನುವ ನೋವು ಎಲ್ಲರನ್ನೂ ಈಗಲೂ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:51 am, Fri, 30 August 24

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ