AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರೇ ನನ್ನ ಫೇವರಿಟ್’; ತಮಿಳು ಮಾಧ್ಯಮಗಳಲ್ಲಿ ಪುನೀತ್​ನ ಹೊಗಳಿದ ಪ್ರಿಯಾ ಆನಂದ್

ಕರ್ನಾಟಕದಲ್ಲಿ ಸಿನಿಮಾ ರಂಗದವರು, ಸಾಮಾನ್ಯರು ಪುನೀತ್ ಅವರನ್ನು ಹೊಗಳುತ್ತಿದ್ದಾರೆ. ಅದೇ ರೀತಿ ಪರಭಾಷೆಯವರು ಬೇರೆ ರಾಜ್ಯದಲ್ಲಿ ಈ ಹೀರೋನ ಮೆಚ್ಚುತ್ತಿದ್ದಾರೆ. ಪ್ರಿಯಾ ಆನಂದ್ ಅವರಿಗೆ ಪುನೀತ್ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. ಪುನೀತ್ ಫೇವರಿಟ್ ಎಂದಿದ್ದಾರೆ.

‘ಅವರೇ ನನ್ನ ಫೇವರಿಟ್’; ತಮಿಳು ಮಾಧ್ಯಮಗಳಲ್ಲಿ ಪುನೀತ್​ನ ಹೊಗಳಿದ ಪ್ರಿಯಾ ಆನಂದ್
ಪ್ರಿಯಾ ಆನಂದ್-ಪುನೀತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Aug 10, 2024 | 7:24 AM

Share

ಪುನೀತ್ ರಾಜ್​ಕುಮಾರ್ ಅವರ ಬಗ್ಗೆ ಎಷ್ಟೇ ಹೇಳಿದರೂ ಸಾಕಾಗುವುದಿಲ್ಲ. ಅವರು ಅನೇಕರಿಗೆ ಮಾದರಿ. ಅವರು ಫೇವರಿಟ್ ನಟ ಮಾತ್ರವಲ್ಲ ಫೇವರಿಟ್ ವ್ಯಕ್ತಿ ಕೂಡ ಹೌದು. ಅವರು ಇಲ್ಲ ಎಂಬುದನ್ನು ಅನೇಕರಿಗೆ ನಂಬೋಕೆ ಈಗಲೂ ಸಾಧ್ಯವಾಗುತ್ತಿಲ್ಲ. ಈಗ ಪ್ರಿಯಾ ಆನಂದ್ ಅವರು ಪುನೀತ್ ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಪ್ರಿಯಾ ಆನಂದ್ ಅವರು ಪುನೀತ್ ರಾಜ್​ಕುಮಾರ್ ಜೊತೆ ಮೊದಲ ಬಾರಿ ನಟಿಸಿದ್ದು ‘ರಾಜಕುಮಾರ’ ಸಿನಿಮಾದಲ್ಲಿ. ಈ ಸಿನಿಮಾ ಪುನೀತ್ ಅವರು ನಟಿಸಿದ ವಿಶೇಷ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಸಂತೋಷ್ ಆನಂದ್​ರಾಮ್ ನಿರ್ದೇಶನದ ಈ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿ. ಪ್ರಿಯಾ ಅವರು ಪುನೀತ್​ನ ಸೆಟ್​ನಲ್ಲಿ ಹತ್ತಿರದಿಂದ ಕಂಡವರು. ಆ ಬಳಿಕ ‘ಜೇಮ್ಸ್’ ಸಿನಿಮಾದಲ್ಲಿ ಪ್ರಿಯಾ ಆನಂದ್ ಅವರು ಪುನೀತ್ ಜೊತೆ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ‘ಜೇಮ್ಸ್’ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಪುನೀತ್ ನಿಧನ ಹೊಂದಿದ್ದು ಬೇಸರದ ಸಂಗತಿ.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಪುನೀತ್ ಅವರನ್ನು ಹೊಗಳೋದು ಸಾಮಾನ್ಯ. ಅವರ ಬಗ್ಗೆ ಮಾತನಾಡೋದು ಸಾಮಾನ್ಯ. ಅದೇ ರೀತಿ ಪರಭಾಷೆಯವರು ಬೇರೆ ರಾಜ್ಯದಲ್ಲಿ ಈ ಹೀರೋನ ಮೆಚ್ಚುತ್ತಿದ್ದಾರೆ. ಪ್ರಿಯಾ ಆನಂದ್ ಅವರಿಗೆ ಪುನೀತ್ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಕಾಲೇಜ್ ಒಂದಕ್ಕೆ ಪ್ರಿಯಾ ತೆರಳಿದ್ದರು. ಈ ವೇಳೆ ಅವರು ಟ್ರುತ್ ಆ್ಯಂಡ್ ಡೇರ್ ಆಡಿದ್ದಾರೆ. ‘ಟ್ರುತ್’ ಆಯ್ಕೆ ಅವರಿಗೆ ಬಂದಿದೆ. ‘ಇಷ್ಟದ ಕೋ ಸ್ಟಾರ್ ಯಾರು’ ಎಂದು ಕೇಳಲಾಯಿತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:  ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?

‘ನನ್ನ ಫೇವರಿಟ್ ಆ್ಯಕ್ಟರ್ ಎಂದರೆ ಅದು ಪುನೀತ್ ರಾಜ್​ಕುಮಾರ್. ಅವರು ಫೇವರಿಟ್ ವ್ಯಕ್ತಿ ಕೂಡ ಹೌದು. ರಾಜಕುಮಾರ ಸಿನಿಮಾದಲ್ಲಿ ನಾನು ನಟಿಸಿದ್ದೆ. ಅವರ ಜೊತೆ ಕಳೆದು ಹೋದೆ’ ಎಂದಿದ್ದಾರೆ ಅವರು. ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್​ನಲ್ಲಿ ನಿಧನ ಹೊಂದಿದರು. ಹೃದಯಾಘಾತದಿಂದ ಅವರ ಕೊನೆಯುಸಿರು ಎಳೆದಿದ್ದಾರೆ. ಪ್ರಿಯಾ ಆನಂದ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ಇತ್ತೀಚೆಗೆ ಕನ್ನಡದ ‘ಕರಟಕ ಧಮನಕ’ ಸಿನಿಮಾದಲ್ಲಿ ಶಿವಣ್ಣ ಜೊತೆ ತೆರೆ ಹಂಚಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:54 am, Sat, 10 August 24

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​