‘ನನ್ನ ಹಿಂಬದಿ ಫೋಟೋ ತೆಗೆದರೆ ತೊಂದರೆ ಇಲ್ಲ’: ‘ಹುಡುಗರು’ ಪಂಕಜಾ ಬೋಲ್ಡ್ ಮಾತು
ಪಾಪರಾಜಿಗಳು ಹಿಂಬದಿಯಿಂದ ಫೋಟೋ ತೆಗೆಯುತ್ತಾರೆ ಎಂಬ ಕಾರಣಕ್ಕೆ ಕೆಲವು ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನಟಿ ಶೆಫಾಲಿ ಜರಿವಾಲಾ ಅವರು ಈ ವಿಚಾರದಲ್ಲಿ ಆಕ್ಷೇಪ ಎತ್ತಿಲ್ಲ. ‘ಹುಡುಗರು’ ಸಿನಿಮಾದ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಿ, ಸಿನಿಪ್ರಿಯರನ್ನು ರಂಜಿಸಿರುವ ಶೆಫಾಲಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ಪಾಪರಾಜಿಗಳು ತುಂಬ ಆ್ಯಕ್ಟೀವ್ ಆಗಿದ್ದಾರೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರ ಫೋಟೋ ತೆಗೆಯಲು ಹತ್ತಾರು ಪಾಪರಾಜಿಗಳು ಮುಗಿಬೀಳುವುದು ಕಾಮನ್. ಕೆಲವು ನಟಿಯರಿಗೆ ಇದರಿಂದ ಕಿರಿಕಿರಿ ಆಗಿದೆ. ಅದಕ್ಕೆ ಕಾರಣ ಆಗಿರುವುದು ಫೋಟೋ ತೆಗೆಯುವ ಭಂಗಿ. ಹೌದು, ದೇಹದ ಹಿಂಬದಿಯ ಫೋಟೋ ತೆಗೆದಿದ್ದನ್ನು ಕೆಲವು ನಟಿಯರು ಇತ್ತೀಚೆಗೆ ವಿರೋಧಿಸಿದ್ದಾರೆ. ಆದರೆ ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅವರು ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ. ತಮ್ಮ ಫೋಟೋವನ್ನು ಹಿಂಬದಿಯಿಂದ ತೆಗೆದರೆ ಯಾವುದೇ ತೊಂದರೆ ಇಲ್ಲ ಎಂದು ಶೆಫಾಲಿ ಹೇಳಿದ್ದಾರೆ.
ನಟಿಯರ ಹಿಂಬದಿ ಫೋಟೋವನ್ನು ತೆಗೆದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಈ ನಟಿ ಯಾರೆಂದು ಗುರುತಿಸಿ’ ಎಂಬ ಕ್ಯಾಪ್ಷನ್ಗಳನ್ನು ಅನೇಕ ಪಾಪರಾಜಿಗಳು ನೀಡುತ್ತಾರೆ. ಇದರ ವಿರುದ್ಧ ಜಾನ್ವಿ ಕಪೂರ್, ಮೃಣಾಲ್ ಠಾಕೂರ್, ಪಲಕ್ ತಿವಾರಿ ಮುಂತಾದ ನಟಿಯರು ಖಂಡಿಸಿದ್ದಾರೆ. ಇನ್ಮೇಲೆ ಇಂಥ ಫೋಟೋ ತೆಗೆಯಬೇಡಿ ಎಂದು ಪಾಪರಾಜಿಗಳಿಗೆ ಈ ನಟಿಯರು ತಾಕೀತು ಮಾಡಿದ್ದಾರೆ. ಆದರೆ ಶೆಫಾಲಿ ಜರಿವಾಲಾ ಅವರು ಆ ರೀತಿಯ ಕಟ್ಟುಪಾಡುಗಳನ್ನು ಇಟ್ಟುಕೊಂಡಿಲ್ಲ.
‘ನನಗೆ ತೊಂದರೆ ಏನಿಲ್ಲ. ನಾನು ಹಿಂಬದಿಗೂ ವರ್ಕೌಟ್ ಮಾಡುತ್ತೇನೆ. ಹಾಗಾಗಿ ಅದು ಚೆನ್ನಾಗಿ ಕಾಣುತ್ತದೆ’ ಎಂದು ಅವರು ಹೇಳಿಕೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ನಿಲುವು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಪಾಪರಾಜಿಗಳು ಹಿಂಬದಿಯ ಫೋಟೋ ತೆಗೆಯುವುದರ ಕುರಿತು ತಮಗೆ ಇರುವ ಅಭಿಪ್ರಾಯವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಾಪರಾಜಿಗಳಿಗೆ ಕ್ಯೂಟ್ ಆಗಿ ಪೋಸ್ ನೀಡುವುದು ಕಲಿತ ಆಲಿಯಾ ಭಟ್ ಮಗಳು ರಹಾ ಕಪೂರ್
‘ನಾನು ಕಷ್ಟಪಟ್ಟು ವರ್ಕೌಟ್ ಮಾಡುತ್ತೇನೆ. ಅದನ್ನು ಯಾರಾದರೂ ಹೊಗಳಿದರೆ ನನಗೆ ತೊಂದರೆ ಇಲ್ಲ. ನಾನೇನು ಚಡ್ಡಿ ಧರಿಸಿ ಹೊರಬರುವುದಿಲ್ಲ. ಪೂರ್ತಿ ಬಟ್ಟೆ ಧರಿಸಿದ್ದೇನೆ. ಯಾರೂ ಕೂಡ ಹಿಂಬದಿಯನ್ನು ಮುಚ್ಚಿಟ್ಟುಕೊಳ್ಳಲು ಆಗಲ್ಲ. ಬುರ್ಕಾ ಧರಿಸಿ ಹೊರೆಗೆ ಬರೋಕೆ ಆಗುವುದಿಲ್ಲ’ ಎಂದು ಶೆಫಾಲಿ ಜರಿವಾಲಾ ಅವರು ಹೇಳಿದ್ದಾರೆ. ಮ್ಯೂಸಿಕ್ ವಿಡಿಯೋ, ರಿಯಾಲಿಟಿ ಶೋಗಳ ಮೂಲಕ ಶೆಫಾಲಿ ಅವರು ಫೇಮಸ್ ಆಗಿದ್ದಾರೆ. ಕನ್ನಡದ ‘ಹುಡುಗರು’ ಸಿನಿಮಾದಲ್ಲಿ ‘ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ..’ ಹಾಡಿನಲ್ಲಿ ಪಂಕಜಾ ಆಗಿ ಕುಣಿಯುವ ಮೂಲಕ ಶೆಫಾಲಿ ಅವರು ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.