Nysa Devgan: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್​ ಪ್ರತಿಕ್ರಿಯೆ

Kajol: ನಿಸಾ ದೇವಗನ್​ ಅವರು ಈಗ ಪಾಪರಾಜಿಗಳ ಫೇವರಿಟ್ ಆಗಿದ್ದಾರೆ. ಅವರು ಎಲ್ಲಿಯೇ ಹೋದರೂ ಕೂಡ ಪಾಪರಾಜಿಗಳು ಸುತ್ತುವರಿಯುತ್ತಾರೆ.

Nysa Devgan: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್​ ಪ್ರತಿಕ್ರಿಯೆ
ನಿಸಾ ದೇವಗನ್​, ಕಾಜೋಲ್​
Follow us
ಮದನ್​ ಕುಮಾರ್​
|

Updated on: Jul 03, 2023 | 10:56 PM

ಸೆಲೆಬ್ರಿಟಿಗಳು ಹೋದ ಕಡೆಯಲ್ಲಾ ಪಾಪರಾಜಿಗಳು (Paparazzi) ಮುತ್ತಿಕೊಳ್ಳುತ್ತಾರೆ. ಮುಂಬೈನಲ್ಲಿ ಈ ಟ್ರೆಂಡ್​ ಜೋರಾಗಿದೆ. ಬಾಲಿವುಡ್​ ನಟ-ನಟಿಯರು, ನಿರ್ದೇಶಕರು-ನಿರ್ಮಾಪಕರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಪಾಪರಾಜಿಗಳು ಮುಗಿ ಬೀಳುತ್ತಾರೆ. ಇದರಿಂದ ಅನೇಕ ಬಾರಿ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಕೆಲವೊಮ್ಮೆ ನಟ-ನಟಿಯರು ಸಿಟ್ಟಾಗಿದ್ದು ಕೂಡ ಉಂಟು. ಆದರೆ ಇನ್ನೂ ಕೆಲವರು ಎಲ್ಲವನ್ನೂ ತುಂಬ ತಾಳ್ಮೆಯಿಂದ ನಿಭಾಯಿಸುತ್ತಾರೆ. ಕಾಜೋಲ್​ ಮತ್ತು ಅಜಯ್​ ದೇವಗನ್​ ಅವರ ಮಗಳು ನಿಸಾ ದೇವಗನ್​ (Nysa Devgan) ಅವರು ಪಾಪರಾಜಿಗಳ ಜೊತೆ ಸೌಮ್ಯವಾಗಿ ನಡೆದುಕೊಂಡಿದ್ದಾರೆ. ಆ ಬಗ್ಗೆ ಕಾಜೋಲ್​ (Kajol) ಅವರು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ನಿಸಾ ದೇವಗನ್​ ಅವರು ಈಗ ಪಾಪರಾಜಿಗಳ ಫೇವರಿಟ್ ಆಗಿದ್ದಾರೆ. ಅವರ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್​ಗಳಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿ ನಿಸಾ ದೇವಗನ್​ ಎಲ್ಲಿಯೇ ಹೋದರೂ ಕೂಡ ಪಾಪರಾಜಿಗಳು ಸುತ್ತುವರಿಯುತ್ತಾರೆ. ಆದರೆ ಇದರಿಂದ ನಿಸಾ ಕಿರಿಕಿರಿ ಮಾಡಿಕೊಂಡಿಲ್ಲ. ಎಲ್ಲರೊಂದಿಗೂ ಅವರು ಬಹಳ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಕಾಜೋಲ್​ ಅವರಿಗೆ ಹೆಮ್ಮೆ ಇದೆ. ಅದಕ್ಕೆ ಸಂಬಂಧಿಸಿದಂತೆ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Kajol: ಪ್ರಚಾರಕ್ಕಾಗಿ ಗಿಮಿಕ್​ ಮಾಡಿದ ಕಾಜೋಲ್​; ಇದು ಪ್ರೀತಿ, ಕಾನೂನು ಮತ್ತು ಮೋಸದ ಕಥೆ

‘ನಿಸಾ ಚಿಕ್ಕವಳಿದ್ದಾಗ ನಾನು ಅವಳ ಜೊತೆ ಜೈಪುರಕ್ಕೆ ಹೋಗಿದ್ದೆ. ನಮ್ಮ ಜೊತೆ ಯಾರೂ ಕೂಡ ಇರಲಿಲ್ಲ. ಆಗ 30 ಜನ ಪಾಪರಾಜಿಗಳು ನಮ್ಮನ್ನು ಸುತ್ತುವರಿದು, ಕೂಗಾಡಲು ಆರಂಭಿಸಿದರು. ಆಗ ನಿಸಾ ಅಳಲು ಶುರು ಮಾಡಿದಳು. ನಾನು ಆಕೆಯನ್ನು ಕರೆದುಕೊಂಡು ಕಾರು ಹತ್ತಿದೆ. ಆಗ ಅವಳಿಗೆ ತಿಳಿಸಿ ಹೇಳಿದೆ. ಅದು ಅವರ ಕೆಲಸ, ಅವರಿಂದ ನಮಗೆ ಯಾವುದೇ ಹಾನಿ ಆಗುವುದಿಲ್ಲ ಅಂತ ಹೇಳಿದೆ’ ಎಂದು ಆ ಸಂಗತಿಯನ್ನು ಕಾಜೋಲ್​ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Kajol: ‘ಕಪ್ಪಗಿದ್ದಾಳೆ, ದಪ್ಪಗಿದ್ದಾಳೆ’ ಎಂದು ಬಾಡಿ ಶೇಮಿಂಗ್​​ ಮಾಡಿದ್ದ ಜನರ ಬಾಯಿ ಮುಚ್ಚಿಸಿದ್ದ ಕಾಜೋಲ್​

‘ಪಾಪರಾಜಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಾನು ನಿಸಾಗೆ ಕಲಿಸಿಕೊಡುವ ಅವಶ್ಯಕತೆ ಇಲ್ಲ. ಅನುಭವದಿಂದ ಆಕೆಯೇ ಅದನ್ನು ಕಲಿತಿದ್ದಾಳೆ’ ಎಂದು ಕಾಜೋಲ್​ ಹೇಳಿದ್ದಾರೆ. ನಿಸಾ ದೇವಗನ್​ ಅವರು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಗ್ಲಾಮರಸ್​ ಫೋಟೋಗಳು ಆಗಾಗ ವೈರಲ್​ ಆಗುತ್ತಿವೆ. ಸೆಲೆಬ್ರಿಟಿ ಕಿಡ್​ಗಳ ಜೊತೆ ಅವರು ಪಾರ್ಟಿ ಮಾಡುವ ಮೂಲಕ ಸುದ್ದಿ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.