AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jawan Trailer: ‘ಜವಾನ್​’ ಟ್ರೇಲರ್​ಗೆ ಹಾಲಿವುಡ್​ ಚಿತ್ರದ ಸಾಥ್​; ಫ್ಯಾನ್ಸ್​ ಬಯಸಿದ್ದಕ್ಕಿಂತ ಹೆಚ್ಚಿನ ಖುಷಿ ನೀಡುತ್ತಿರುವ ಶಾರುಖ್​

Shah Rukh Khan: ‘ಜವಾನ್​’ ಸಿನಿಮಾದ ಟೀಸರ್​ ಬದಲು ನೇರವಾಗಿ ಟ್ರೇಲರ್​ ರಿಲೀಸ್​ ಮಾಡಿದರೆ ಧಮಾಕ ಜೋರಾಗಿ ಇರಲಿದೆ. ಆ ನಿಟ್ಟಿನಲ್ಲಿ ಚಿತ್ರತಂಡದವರು ಭರ್ಜರಿ ಪ್ಲ್ಯಾನ್​ ಮಾಡಿದ್ದಾರೆ.

Jawan Trailer: ‘ಜವಾನ್​’ ಟ್ರೇಲರ್​ಗೆ ಹಾಲಿವುಡ್​ ಚಿತ್ರದ ಸಾಥ್​; ಫ್ಯಾನ್ಸ್​ ಬಯಸಿದ್ದಕ್ಕಿಂತ ಹೆಚ್ಚಿನ ಖುಷಿ ನೀಡುತ್ತಿರುವ ಶಾರುಖ್​
‘ಜವಾನ್​’ ಮತ್ತು ‘ಮಿಷನ್​ ಇಂಪಾಸಿಬಲ್​ 7’ ಚಿತ್ರದ ಪೋಸ್ಟರ್​
ಮದನ್​ ಕುಮಾರ್​
|

Updated on: Jul 03, 2023 | 6:07 PM

Share

ಮುಂಬರುವ ತಿಂಗಳಲ್ಲಿ ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ಗೆ ಸಾಲುಗಟ್ಟಿ ನಿಂತಿವೆ. ಆ ಪೈಕಿ ಶಾರುಖ್​ ಖಾನ್​ ನಟನೆಯ ‘ಜವಾನ್​’ (Jawan Movie) ಸಿನಿಮಾಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಟೀಸರ್​ ಯಾವಾಗ ಬರಲಿದೆ ಎಂದು ಪ್ರಶ್ನೆ ಕೇಳುತ್ತಿದ್ದ ಶಾರುಖ್​ ಖಾನ್​​ (Shah Rukh Khan) ಅಭಿಮಾನಿಗಳಿಗೆ ಈಗ ಸರ್ಪ್ರೈಸ್​ ಸಿಕ್ಕಿದೆ. ಅಚ್ಚರಿ ಏನೆಂದರೆ ಟೀಸರ್​ ಸಹವಾಸವೇ ಬೇಡ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಅಂದರೆ, ಟೀಸರ್​ ಬದಲು ನೇರವಾಗಿ ಟ್ರೇಲರ್​ (Jawan Trailer) ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಹರಡಿದೆ. ಅದೂ ಅಲ್ಲದೇ, ‘ಜವಾನ್​’ ಟ್ರೇಲರ್​ ಬಿಡುಗಡೆಗೆ ಒಂದು ಹಾಲಿವುಡ್​ ಸಿನಿಮಾದ ಜೊತೆ ಕೈ ಜೋಡಿಸಲಾಗುತ್ತಿದೆ. ಯಾವುದು ಆ ಸಿನಿಮಾ? ‘ಮಿಷನ್​ ಇಂಪಾಸಿಬಲ್​ 7’!

ಈ ಸುದ್ದಿಯ ಬಗ್ಗೆ ಶಾರುಖ್​ ಖಾನ್​ ಅವರಿಂದಾಗಲೀ ಅಥವಾ ನಿರ್ಮಾಣ ಸಂಸ್ಥೆಯಾದ ‘ರೆಡ್​ ಚಿಲ್ಲೀಸ್​ ಎಂಟರ್​​ಟೇನ್ಮೆಂಟ್​’ ಕಡೆಯಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಕೂಡ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ‘ಜವಾನ್​’ ಸಿನಿಮಾದ ರಿಲೀಸ್​ ಡೇಟ್​ ಕೆಲವೇ ದಿನಗಳ ಹಿಂದೆ ಅನೌನ್ಸ್​ ಆಗಿತ್ತು. ಸೆಪ್ಟೆಂಬರ್​ 7ರಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು. ಅದರ ಬೆನ್ನಲ್ಲೇ ಟೀಸರ್​ ಬರಬಹುದು ಎಂದು ಶಾರುಖ್​ ಖಾನ್​ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದನ್ನು ನೀಡಲು ಪ್ಲ್ಯಾನ್ ನಡೆದಿದೆ.

ಇದನ್ನೂ ಓದಿ: ​Shah Rukh Khan: ‘ಪಠಾಣ್​’ ರೀತಿ ‘ಜವಾನ್​’ ಕೂಡ ಮಾಡಲಿದೆ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್​; ಸಿಕ್ಕಿದೆ ಮುನ್ಸೂಚನೆ

‘ಜವಾನ್​’ ಸಿನಿಮಾದ ಟೀಸರ್​ ಬದಲು ನೇರವಾಗಿ ಟ್ರೇಲರ್​ ರಿಲೀಸ್​ ಮಾಡಿದರೆ ಧಮಾಕ ಜೋರಾಗಿ ಇರಲಿದೆ. ಹಾಲಿವುಡ್​ ಸ್ಟಾರ್​ ನಟ ಟಾಮ್​ ಕ್ರೂಸ್​ ಅಭಿನಯಿಸಿರುವ ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾ ಜುಲೈ 12ರಂದು ಬಿಡುಗಡೆ ಆಗಲಿದೆ. ಆ ಸಿನಿಮಾದ ಜೊತೆ ‘ಜವಾನ್​’ ಟ್ರೇಲರ್​ ಅಟ್ಯಾಚ್​ ಮಾಡಲಾಗುವುದು. ಚಿತ್ರಮಂದಿರಗಳಲ್ಲಿ ‘ಮಿಷನ್​ ಇಂಪಾಸಿಬಲ್​ 7’ ಚಿತ್ರದ ಇಂಟರ್​ವಲ್​ ಸಮಯದಲ್ಲಿ ಈ ಟ್ರೇಲರ್​ ಬಿತ್ತರ ಆಗಲಿದೆ. ಅದೇ ದಿನ ಸೋಶಿಯಲ್​ ಮೀಡಿಯಾದಲ್ಲೂ ಟ್ರೇಲರ್​ ರಿಲೀಸ್​ ಆಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Shah Rukh Khan: ಶಾರುಖ್​ ಖಾನ್​ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 31 ವರ್ಷ; ಅಂದು ಮಾಡಿದ ತಪ್ಪನ್ನು ಇಂದು ಒಪ್ಪಿಕೊಂಡ ನಟ

ಕಾಲಿವುಡ್​ನ ಸ್ಟಾರ್​ ನಿರ್ದೇಶಕ ಅಟ್ಲಿ ಕುಮಾರ್​ ಅವರು ‘ಜವಾನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಶಾರುಖ್​ ಖಾನ್​ ಜೊತೆ ನಯನತಾರಾ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ‘ಪಠಾಣ್​’ ಸಿನಿಮಾದಿಂದ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ ಶಾರುಖ್​ ಖಾನ್​ಗೆ ದೊಡ್ಡ ಸಕ್ಸಸ್​ ಸಿಕ್ಕಿತು. ಈಗ ಅವರು ‘ಜವಾನ್​’ ಸಿನಿಮಾದಿಂದಲೂ ಅಂಥದ್ದೇ ಗೆಲುವು ಪಡೆಯಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್