Shah Rukh Khan: ಶಾರುಖ್​ ಖಾನ್​ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 31 ವರ್ಷ; ಅಂದು ಮಾಡಿದ ತಪ್ಪನ್ನು ಇಂದು ಒಪ್ಪಿಕೊಂಡ ನಟ

Shah Rukh Khan Movies: ಶಾರುಖ್​ ಖಾನ್​ ನಟನೆಯ ಮೊದಲ ಸಿನಿಮಾ ‘ದೀವಾನಾ’ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಆ ಚಿತ್ರದ ಅನೇಕ ದೃಶ್ಯಗಳನ್ನು ಮೆಲುಕು ಹಾಕಲಾಗುತ್ತಿದೆ.

Shah Rukh Khan: ಶಾರುಖ್​ ಖಾನ್​ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 31 ವರ್ಷ; ಅಂದು ಮಾಡಿದ ತಪ್ಪನ್ನು ಇಂದು ಒಪ್ಪಿಕೊಂಡ ನಟ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on:Jun 26, 2023 | 6:45 PM

ಬಣ್ಣದ ಲೋಕದಲ್ಲಿ ಹಂತಹಂತವಾಗಿ ಬೆಳೆದು ಬಂದ ನಟ ಶಾರುಖ್​ ಖಾನ್​ (Shah Rukh Khan) ಅವರು ಇಂದಿಗೂ ಸೂಪರ್​ ಸ್ಟಾರ್​ ಆಗಿ ಮೆರೆಯತ್ತಿದ್ದಾರೆ. ಅವರು​ ಚಿತ್ರರಂಗಕ್ಕೆ ಕಾಲಿಟ್ಟು 31 ವರ್ಷ ಕಳೆದಿದೆ. 57ರ ಪ್ರಾಯದಲ್ಲೂ ಅವರು ಚಾರ್ಮ್​ ಉಳಿಸಿಕೊಂಡಿದ್ದಾರೆ. ಹದಿಹರೆಯದ ನಟರಿಗೂ ಅವರು ಸಖತ್​ ಪೈಪೋಟಿ ನೀಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ 31 ವರ್ಷಗಳನ್ನು ಪೂರೈಸಿರುವುದಕ್ಕೆ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮೊದಲ ಸಿನಿಮಾ ‘ದೀವಾನಾ’ (Deewana Movie) ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಆ ಸಿನಿಮಾದ ಅನೇಕ ದೃಶ್ಯಗಳನ್ನು ಮೆಲುಕು ಹಾಕಲಾಗುತ್ತಿದೆ. ಈ ಕುರಿತು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸುವಾಗ ಶಾರುಖ್​ ಖಾನ್​ ಅವರು 31 ವರ್ಷಗಳ ಹಿಂದಿನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಏನದು? ಈ ಸ್ಟೋರಿಯಲ್ಲಿದೆ ಉತ್ತರ..

ಶಾರುಖ್​ ಖಾನ್​ ಅವರು ನಟಿಸಿದ ಮೊದಲ ಸಿನಿಮಾ ‘ದೀವಾನಾ’. ಆ ಸಿನಿಮಾ 1992ರ ಜೂನ್​ 25ರಂದು ತೆರೆಕಂಡಿತ್ತು. 2023ರ ಜೂನ್​ 25ಕ್ಕೆ ಬರೋಬ್ಬರಿ 31 ವರ್ಷಗಳು ಪೂರ್ಣಗೊಂಡಿವೆ. ಆ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರ ಎಂಟ್ರಿ ಸೀನ್​ ಬಗ್ಗೆ ಫ್ಯಾನ್ಸ್​ ಈಗಲೂ ಮಾತನಾಡುತ್ತಾರೆ. ‘ಕೋಯಿ ನಾ ಕೋಯಿ ಚಾಹಿಯೇ..’ ಹಾಡಿನಲ್ಲಿ ಶಾರುಖ್​ ಖಾನ್​ ಅವರು ಬೈಕ್​ ರೈಡ್​ ಮಾಡುತ್ತಾ, ಸ್ನೇಹಿತರ ಜೊತೆ ಹಾಡುವ ದೃಶ್ಯ ಇದೆ. ಅದರಲ್ಲಿ ಶಾರುಖ್​ ಅವರು ಹೆಲ್ಮೆಟ್​ ಧರಿಸಿಲ್ಲ. ಆ ವಿಡಿಯೋವನ್ನು ಅಭಿಮಾನಿಗಳು ಈಗ ಶೇರ್​ ಮಾಡಿಕೊಂಡಿದ್ದಾರೆ.

‘ಈ ನಿಮ್ಮ ಅದ್ಭತ ಎಂಟ್ರಿ ಸೀನ್​ ನೋಡಿದಾಗ ನಿಮಗೆ ಏನು ಅನಿಸುತ್ತದೆ? ಈ ಚಿತ್ರ ಬಂದು 31 ವರ್ಷ ಕಳೆದರೂ ನಮಗೆ ಇಂದಿಗೂ ಅಷ್ಟೇ ಖುಷಿ ನೀಡುತ್ತಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್​ ಖಾನ್​ ಅವರು, ‘ಹೆಲ್ಮೆಟ್​ ಹಾಕಿಕೊಳ್ಳಬೇಕಿತ್ತು ಎನಿಸುತ್ತದೆ’ ಎಂದು ಟ್ವೀಟ್​ ಮಾಡಿದ್ದಾರೆ. ಅನೇಕ ನಟರು ಸಿನಿಮಾಗಳಲ್ಲಿನ ಬೈಕ್​ ರೈಡ್​ ದೃಶ್ಯಗಳಲ್ಲಿ ಹೆಲ್ಮೆಟ್​ ಧರಿಸಿರುವುದಿಲ್ಲ. ಅಂಥ ಪೋಸ್ಟರ್​ ಮತ್ತು ದೃಶ್ಯಗಳಿಗೆ ಟ್ರಾಫಿಕ್​ ಪೊಲೀಸರು ಖಡಕ್​ ಎಚ್ಚರಿಕೆ ನೀಡಿದ್ದುಂಟು. ಅದೇ ಕಾರಣಕ್ಕೋ ಏನೋ ಶಾರುಖ್​ ಖಾನ್​ ಅವರು ಈಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್​ ಖಾನ್​ ಚಿತ್ರದ ಹಾಡಿನ ಮೂಲಕ ಅಮೆರಿಕದಲ್ಲಿ ಮೋದಿಗೆ ಸ್ವಾಗತ; ನಟನ ಪ್ರತಿಕ್ರಿಯೆ ಏನು?

ಈ ವರ್ಷ ಆರಂಭದಲ್ಲಿ ತೆರೆಕಂಡ ‘ಪಠಾಣ್​’ ಸಿನಿಮಾ ಮೂಲಕ ಶಾರುಖ್ ಖಾನ್​ ಅವರ ವೃತ್ತಿ ಜೀವನಕ್ಕೆ ಹೊಸ ಮೆರುಗು ಬಂತು. ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಈಗ ಶಾರುಖ್​ ಖಾನ್​ ಅವರ ‘ಜವಾನ್​’ ಮತ್ತು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಜವಾನ್​’ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ರಾಜ್​ಕುಮಾರ್​ ಹಿರಾನಿ ಅವರ ನಿರ್ದೇಶನದಲ್ಲಿ ‘ಡಂಕಿ’ ಚಿತ್ರ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:41 pm, Mon, 26 June 23

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್