ದರ್ಶನ್ ಬಟ್ಟೆ ತೊಳೆದರೂ ರೇಣುಕಾ ಸ್ವಾಮಿ ರಕ್ತ ಸಿಕ್ಕಿದ್ದು ಹೇಗೆ? ಎಡವಿದ್ದು ಎಲ್ಲಿ?

ಎಷ್ಟೇ ಪ್ರಯತ್ನಿಸಿದರೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳುವುದು ದರ್ಶನ್​ಗೆ ಕಷ್ಟವಾಗಿದೆ. ಕೊಲೆ ನಡೆದ ದಿನ ದರ್ಶನ್​ ಧರಿಸಿದ್ದ ಬಟ್ಟೆಗಳಲ್ಲಿ ಸಿಕ್ಕಿರುವ ರಕ್ತದ ಕಲೆಗಳು ರೇಣುಕಾ ಸ್ವಾಮಿಯ ದೇಹದ್ದು ಎಂಬುದು ಈಗ ಎಫ್​ಎಸ್​ಎಲ್​ ವರದಿಯಲ್ಲಿ ಪತ್ತೆ ಆಗಿದೆ.

ದರ್ಶನ್ ಬಟ್ಟೆ ತೊಳೆದರೂ ರೇಣುಕಾ ಸ್ವಾಮಿ ರಕ್ತ ಸಿಕ್ಕಿದ್ದು ಹೇಗೆ? ಎಡವಿದ್ದು ಎಲ್ಲಿ?
ದರ್ಶನ್
Follow us
Prajwal Kumar NY
| Updated By: ರಾಜೇಶ್ ದುಗ್ಗುಮನೆ

Updated on: Aug 09, 2024 | 11:50 AM

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಅವರನ್ನು ಜೈಲಿನಲ್ಲಿ ಇಡಲಾಗಿದೆ. ಅವರು ಜೈಲು ಸೇರಿ ಎರಡು ತಿಂಗಳೇ ಕಳೆದಿದೆ. ದರ್ಶನ್ ಅವರ ಬಟ್ಟೆಯ ಮೇಲೆ  ರೇಣುಕಾ ಸ್ವಾಮಿ ರಕ್ತದ ಕಲೆ ಇರೋದು ಎಫ್​ಎಸ್​ಎಲ್ ವರದಿ ಮೂಲಕ ಪತ್ತೆ ಆಗಿದೆ. ಇದು ಅವರಿಗೆ ಕಂಟಕ ಆಗೋ ಸಾಧ್ಯತೆ ಇದೆ. ಇದು ಪ್ರಮುಖ ಸಾಕ್ಷಿ ಎನಿಸಿಕೊಳ್ಳುವ ಸಾಧ್ಯತೆ ಇದೆ. ಕೊಲೆ ದಿನ ಹಾಕಿಕೊಂಡಿದ್ದ ಬಟ್ಟೆಯನ್ನು ದರ್ಶನ್ ತೊಳೆದಿದ್ದರು. ಆದಾಗ್ಯೂ ರೇಣುಕಾ ಸ್ವಾಮಿ ರಕ್ತದ ಕಲೆ ಸಿಕ್ಕಿದ್ದು ಹೇಗೆ? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ವಿವರಣೆ ಇದೆ.

ದರ್ಶನ್ ಅವರು ಪಟ್ಟಣಗೆರೆ ಶೆಡ್​ನಿಂದ ಮನೆಗೆ ಬಂದರು. ಆದಿನ ಅವರು ಬ್ಲ್ಯೂ ಜೀನ್ಸ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟೀ ಶರ್ಟ್ ಹಾಕಿದ್ದರು. ಮನೆಗೆ ಬಂದ ತಕ್ಷಣ ಅವರು ಶರ್ಟ್ ಹಾಗೂ ಪ್ಯಾಂಟ್​ನ ಒಗೆದು, ಒಣ ಹಾಕಿದ್ದರು. ಇದನ್ನು ದರ್ಶನ್ ಮನೆಯಿಂದ ಪೊಲೀಸರು ರಿಕವರಿ ಮಾಡಿದ್ದರು. ನಂತರ ಅದನ್ನು ಪರೀಕ್ಷೆಗೆ ಕಳುಹಿಸಲಾಯಿತು. ಎಫ್​ಎಸ್​ಎಲ್​ನಲ್ಲಿ ನಡೆಸಿದ ಲುಮಿನಲ್ ಟೆಸ್ಟಟ್​ನಲ್ಲಿ ರಕ್ತದ ಗುರುತು ಪತ್ತೆ ಹಚ್ಚಲಾಗಿದೆ.

ಏನಿದು ಲುಮಿನಲ್ ಟೆಸ್ಟ್?

ಲುಮಿನಲ್ ಎಂಬುದು ಒಂದು ಕೆಮಿಕಲ್. ಬಟ್ಟೆಯನ್ನ ವಾಶ್ ಮಾಡಿದ್ದರೂ ಹೀಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ಯಾವ ಬಟ್ಟೆಯ ಮೇಲೆ ರಕ್ತ ಕಲೆ ಇರುತ್ತದೆಯೋ ಅದರ ಮೇಲೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹೀಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಈ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್​ಎ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ: ಎಫ್​ಎಸ್​ಎಲ್​ ವರದಿ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್​ ವಿರುದ್ಧ ಇದು ಪಕ್ಕಾ ಸಾಕ್ಷಿ

ದರ್ಶನ್ ಅವರ ಪ್ರಕರಣದಲ್ಲೂ ಇದೇ ರೀತಿಯಲ್ಲಿ ಪರೀಕ್ಷೆ ಮಾಡಲಾಗಿದೆ. ದರ್ಶನ್ ಅವರ ಪ್ಯಾಂಟ್​ ಮೇಲೆ ಲುಮಿನಲ್ ರಾಸಾಯನಿಕ ಬಳಕೆ ಮಾಡಲಾಗಿದೆ. ಅದರಿಂದ ಬಂದ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ದರ್ಶನ್ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತ ಇರೋದು ಖಚಿತ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ