Darshan Thoogudeepa: ಬಳ್ಳಾರಿ ಜೈಲಿನಲ್ಲಿ ದರ್ಶನ್: ಹೇಗಿತ್ತು ಮೊದಲ ದಿನ?

Darshan Thoogudeepa: ನಟ ದರ್ಶನ್ ಅನ್ನು ನಿನ್ನೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ಮೊದಲ ದಿನ ಹೇಗಿತ್ತು ವಾಸ್ತವ್ಯ. ದರ್ಶನ್ ಕುರಿತಾದ ಇನ್ನಿತರೆ ಬೆಳವಣಿಗಳ ವಿವರಗಳು ಇಲ್ಲಿವೆ.

Darshan Thoogudeepa: ಬಳ್ಳಾರಿ ಜೈಲಿನಲ್ಲಿ ದರ್ಶನ್: ಹೇಗಿತ್ತು ಮೊದಲ ದಿನ?
Follow us
ಮಂಜುನಾಥ ಸಿ.
|

Updated on: Aug 30, 2024 | 10:57 AM

ನಟ ದರ್ಶನ್ ಅನ್ನು ನಿನ್ನೆ (ಆಗಸ್ಟ್ 29) ಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ವಿಶೇಷ ಆತಿಥ್ಯ ದೊರೆಯುತ್ತಿದ್ದ ಕಾರಣ ಹಾಗೂ ಒಂದೇ ಪ್ರಕರಣದ ಆರೋಪಿಗಳಿಗೆ ಭೇಟಿ ಮಾಡಲು ಮಾಡಲು ಅವಕಾಶ ಸಿಕ್ಕಿದ್ದ ಕಾರಣ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗಿದೆ. ದರ್ಶನ್ ಅನ್ನು ನಿನ್ನೆ ಬೆಳಿಗ್ಗೆ ಬಳ್ಳಾರಿ ಜೈಲಿಗೆ ಕರೆತರಲಾಯ್ತು.

ಸನ್ ಗ್ಲಾಸು

ದರ್ಶನ್ ಅನ್ನು ಜೈಲಿಗೆ ಕರೆತಂದಾಗ ಅವರ ಬಳಿ ಕೂಲಿಂಗ್ ಗ್ಲಾಸ್ ಇದ್ದಿದ್ದರ ಬಗ್ಗೆ ಚರ್ಚೆಯಾಗಿತ್ತು. ದರ್ಶನ್ ಕೈಯಲ್ಲಿ, ಕಡಗ, ಕೊರಳಲ್ಲಿ ಮಣಿ ಸರ ಇತ್ತು ಎನ್ನಲಾಗಿತ್ತು. ಆದರೆ ಬಳ್ಳಾರಿ ಎಸ್​ಪಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಕೈಯಲ್ಲಿ ಕಡಗ ಇರಲಿಲ್ಲ ಎಂದಿದ್ದಾರೆ. ಹಾಗೂ ದರ್ಶನ್ ಅವರದ್ದು ಟೆಸ್ಟೆಡ್ ಗ್ಲಾಸು ಎಂದಿದ್ದಾರೆ. ಅದರ ಬಗ್ಗೆ ಪರೀಕ್ಷೆ ಮಾಡುತ್ತೇವೆ ಎಂದಿದ್ದಾರೆ.

ಬೆಳಿಗಿನ ತಿಂಡಿ

ನಿನ್ನೆ ಮಧ್ಯಾಹ್ನ ಊಟ ನಿರಾಕರಿಸಿ ನಿದ್ದೆಗೆ ಜಾರಿದ್ದ ನಟ ದರ್ಶನ್, ನಿನ್ನೆ ರಾತ್ರಿ ತುಸು ಊಟ ಮಾಡಿದ್ದರು. ಇಂದು (ಆಗಸ್ಟ್ 30) ರ ಬೆಳಿಗ್ಗೆ ಜೈಲಿನಲ್ಲಿ ತಿನ್ನಲು ಉಪ್ಪಿಟ್ಟು ನೀಡಿದ್ದು, ಉಪ್ಪಿಟ್ಟು ಸೇವಿಸಿದ್ದಾರೆ. ಎರಡು ಬ್ಯಾಗಿನ ತುಂಬ ಪುಸ್ತಕಗಳನ್ನು ದರ್ಶನ್ ಬಳ್ಳಾರಿ ಜೈಲಿಗೆ ಕೊಂಡು ಒಯ್ದಿದ್ದು, ಪುಸ್ತಕ ಓದುವುದರಲ್ಲಿ ನಿರತರಾಗಿದ್ದಾರಂತೆ. ಸುಮಾರು 20 ಹೊಸ ಪುಸ್ತಕಗಳನ್ನು ದರ್ಶನ್, ಜೈಲಿಗೆ ತಂದಿದ್ದಾರಂತೆ.

ಅಭಿಮಾನಿಗಳ ಪೂಜೆ

ದರ್ಶನ್ ಇರುವ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ದುರ್ಗಾ ದೇವಿ ದೇವಸ್ಥಾನಕ್ಕೆ ದರ್ಶನ್ ಅಭಿಮಾನಿಗಳು ಭೇಟಿ ನೀಡಲಿದ್ದು, ದರ್ಶನ್​ರ ಒಳಿತಾಗಿ ಇಂದು ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಮಾಡಲಿದ್ದಾರೆ. ಈಗ ಬಳ್ಳಾರಿ ಜೈಲಿನಲ್ಲಿ ದರ್ಶನ್​ಗೆ ಕೈದಿ ಸಂಖ್ಯೆ 511 ನೀಡಿದ್ದು, ಆ ಸಂಖ್ಯೆಯನ್ನು ಆಟೋಗಳ ಮೇಲೆ, ಬೈಕುಗಳ ಮೇಲೆ ಬರೆದುಕೊಳ್ಳುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ:ದರ್ಶನ್ ತೂಗುದೀಪ: ಬಳ್ಳಾರಿ ಜೈಲು ಮುಂದಿನ ರಸ್ತೆಗಳು ಸಂಚಾರ ಮುಕ್ತ, ಬ್ಯಾರಿಕೇಡ್ ಸರಿಸಿದ ಪೊಲೀಸರು

ವಿಜಯಲಕ್ಷ್ಮಿ ಭೇಟಿ ಸಾಧ್ಯತೆ

ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಪ್ರತಿ ಸೋಮವಾರ ವಿಜಯಲಕ್ಷ್ಮಿ ಅವರು ಜೈಲಿಗೆ ಬಂದು ದರ್ಶನ್ ಅನ್ನು ಭೇಟಿ ಮಾಡುತ್ತಿದ್ದರು. ಹಣ್ಣು, ಬಟ್ಟೆಗಳನ್ನು ನೀಡುತ್ತಿದ್ದರು. ಆದರೆ ಕಳೆದ ಸೋಮವಾರ ಭೇಟಿ ಮಾಡಿರಲಿಲ್ಲ. ಇದೀಗ ಬಳ್ಳಾರಿ ಜೈಲಿಗೆ ದರ್ಶನ್ ವಾಸ್ತವ್ಯ ಬದಲಾಗಿದ್ದು, ಇಂದು (ಆಗಸ್ಟ್ 30) ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಕರಿಯ ಮರು ಬಿಡುಗಡೆ

ಇತ್ತ ಬೆಂಗಳೂರಿನಲ್ಲಿ ದರ್ಶನ್ ನಟನೆಯ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ಅತಿರೇಕದ ಸಂಭ್ರಮಾಚರಣೆ ಮಾಡಿದ್ದಾರೆ. ದರ್ಶನ್ ಕೈದಿ ಸಂಖ್ಯೆಯ ಪೋಸ್ಟರ್​ಗಳನ್ನು ಹಾಕಲಾಗಿದೆ. ಮಾಧ್ಯಮಗಳ ವಿರುದ್ಧ ಘೋಷಣೆಗಳನ್ನು ಸಹ ಕೂಗಲಾಗಿದೆ. ಬಳಿಕ ಪೊಲೀಸರು ಬಂದು ದರ್ಶನ್ ಅಭಿಮಾನಿಗಳಿಗೆ ‘ಬುದ್ಧಿ’ ಹೇಳಿ ಕಟೌಟ್​ಗಳನ್ನು ತೆಗೆಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.