ಬಳ್ಳಾರಿ ಜೈಲಲ್ಲಿ ದರ್ಶನ್ ಊಟ: 2 ಚಪಾತಿ, 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆ

ಬಳ್ಳಾರಿ ಜೈಲಿಗೆ ಶಿಫ್ಟ್​ ಆದ ಬಳಿಕ ದರ್ಶನ್​ ಸಾಮಾನ್ಯ ಖೈದಿಯಂತೆ ದಿನ ಕಳೆಯುವುದು ಅನಿವಾರ್ಯ ಆಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಅವರು ಊಟ ಮಾಡಿರಲಿಲ್ಲ. ಆದರೆ ಜೈಲಿನ ನಿಗದಿತ ಸಮಯದ ಪ್ರಕಾರ ಸಂಜೆ 7 ಗಂಟೆಗೆ ದರ್ಶನ್​ ಊಟ ಸೇವಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ಮನೆ ಊಟ ಬೇಕು ಎನ್ನುತ್ತಿದ್ದ ಅವರಿಗೆ ಈಗ ಜೈಲಿನ ಊಟವೇ ಗತಿ ಆಗಿದೆ.

ಬಳ್ಳಾರಿ ಜೈಲಲ್ಲಿ ದರ್ಶನ್ ಊಟ: 2 ಚಪಾತಿ, 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆ
ದರ್ಶನ್​
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಮದನ್​ ಕುಮಾರ್​

Updated on: Aug 29, 2024 | 8:47 PM

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್​ ಅವರು ಈಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ದಿನ ಕಳೆಯುತ್ತಿದ್ದಾರೆ. ಇಂದು (ಆಗಸ್ಟ್​ 29) ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ರಾತ್ರಿ ಊಟ ಸೇವಿಸಿದ್ದಾರೆ. ಅವರಿಗೆ 2 ಚಪಾತಿ-ಪಲ್ಯ, ಅನ್ನ ಸಾಂಬರ್, ಮಜ್ಜಿಗೆ ನೀಡಲಾಗಿದೆ. ಜೈಲಿನ ನಿಯಮದಂತೆ 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆಯನ್ನು ಜೈಲಿನ ಸಿಬ್ಬಂದಿ ನೀಡಿದ್ದಾರೆ. ಇಷ್ಟು ದಿನ ಮನೆಯೂಟ ಬೇಕು ಎನ್ನುತ್ತಿದ್ದ ದರ್ಶನ್​ ಈಗ ಜೈಲಿನ ಊಟವನ್ನೇ ಮಾಡುವುದು ಅನಿವಾರ್ಯ ಆಗಿದೆ.

ಬಳ್ಳಾರಿ ಶೈಲಿಗೆ ಶಿಫ್ಟ್​ ಆ ಬಳಿಕ ಬೆಳಗ್ಗೆ, ಮಧ್ಯಾಹ್ನ ದರ್ಶನ್​ ಅವರು ಊಟ ನಿರಾಕರಿಸಿದ್ದರು. ಆದರೆ ರಾತ್ರಿ ಊಟ ಸೇವಿಸಿದ್ದಾರೆ. ಜೈಲಿನ ನಿಗದಿತ ಸಮಯದಂತೆ ಸಂಜೆ 7 ಗಂಟೆಗೆ ಊಟ ನೀಡಲಾಗಿದೆ. ಸಾಮಾನ್ಯ ಖೈದಿಗಳಂತೆ ದರ್ಶನ್​ ಕೂಡ ಜೈಲೂಟ ಸೇವಿಸಿ ಸೆಲ್​ಗೆ ತೆರಳಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ಮನೆಯೂಟಕ್ಕಾಗಿ ದರ್ಶನ್​ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಕೂರ್ಟ್​ ಅನುಮತಿ ನೀಡಿರಲಿಲ್ಲ.

ತಮ್ಮ ಪ್ರಭಾವ ಬಳಸಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ಟೀ, ಸಿಗರೇಟ್​, ಮೊಬೈಲ್​ ಮುಂತಾದ ಸೌಲಭ್ಯ ಪಡೆದಿದ್ದರು. ಆ ಫೋಟೋ ಮತ್ತು ವಿಡಿಯೋ ಲೀಕ್​ ಆದ ಬಳಿಕ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಯಿತು. ಅದರ ಪರಿಣಾಮವಾಗಿ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಇನ್ನುಳಿದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್​ ಸ್ನೇಹಿತ ಪ್ರದೋಷ್​ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್

ದರ್ಶನ್ ಅನಾರೋಗ್ಯದ ಬಗ್ಗೆ ಹಬ್ಬಿರುವುದು ಕೇವಲ ವದಂತಿ ಎಂದು ಎಸ್​ಪಿ ಶೋಭಾರಾಣಿ ಹೇಳಿದ್ದಾರೆ. ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಹೇಳಿಕೆ ನೀಡಿದ್ದಾರೆ. ‘ಜೈಲಿನಲ್ಲಿರುವ ದರ್ಶನ್​​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ. ದರ್ಶನ್ ಧರಿಸಿದ್ದ ಕಡಗ, ದಾರ ಬಿಚ್ಚಿಸಲಾಗಿದೆ. ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲಿಸ್ತಿದ್ದೇವೆ. ದರ್ಶನ್​ ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಜೈಲಿನ ನಿಯಮದಂತೆ ಕುಟುಂಬಸ್ಥರಿಗೆ ಅವಕಾಶ ಇರುತ್ತದೆ. ಸದ್ಯ ದರ್ಶನ್ ಭೇಟಿಗೆ ಯಾರು ಬರ್ತಾರೆಂಬ ಮಾಹಿತಿ ಇಲ್ಲ’ ಎಂದು ಬಳ್ಳಾರಿ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಹೇಳಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ದರ್ಶನ್ ಅವರ ಭೇಟಿಗೆ ಅನೇಕರು ಆಗಮಿಸುತ್ತಿದ್ದರು. ಆದರೆ ಈಗ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಿದ್ದರಿಂದ ಅಲ್ಲಿಗೆ ತೆರಳುವವರ ಆಪ್ತರ ಸಂಖ್ಯೆ ಕಡಿಮೆ ಆಗಲಿದೆ. ಬೆಂಗಳೂರಿನಲ್ಲಿದ್ದ ಕುಟುಂಬದವರು ಬಳ್ಳಾರಿಗೆ ಹೋಗಿ ಭೇಟಿ ಮಾಡುವುದು ಕೂಡ ಕಷ್ಟ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ