AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಬಳ್ಳಾರಿಗೆ ಕರೆತರುವಾಗ ದರ್ಶನ್​ ಕೈಗೆ ಕೋಳ ತೊಡಿಸಲಾಗಿತ್ತಾ? ಸ್ಪಷ್ಟನೆ ಕೊಟ್ಟ ಎಸ್ಪಿ

ಇಷ್ಟು ದಿನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ನಟ ದರ್ಶನ್​ ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್​ ಆಗಿದ್ದಾರೆ. ನಿನ್ನೆ ಮಧ್ಯರಾತ್ರಿ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕರೆತರಲಾಗಿದೆ. ಇನ್ನು ಕರೆತರುವ ವೇಳೆ ದರ್ಶನ್​ ಕೈಗೆ ಬೇಡಿ ಹಾಕಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಇದಕ್ಕೆ ಸ್ವತಃ ಬಳ್ಳಾರಿ ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದರ್ಶನ್​ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ ಕರೆತರುವಾಗ ದರ್ಶನ್​ ಕೈಗೆ ಕೋಳ ತೊಡಿಸಲಾಗಿತ್ತಾ? ಸ್ಪಷ್ಟನೆ ಕೊಟ್ಟ ಎಸ್ಪಿ
ದರ್ಶನ್
ರಮೇಶ್ ಬಿ. ಜವಳಗೇರಾ
|

Updated on:Aug 29, 2024 | 8:28 PM

Share

ಬಳ್ಳಾರಿ, (ಆಗಸ್ಟ್ 29): ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನವಾಗಿರುವ ನಟ ದರ್ಶನ್​ನನ್ನು​ ಕೊನೆಗೂ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲಾಗಿದೆ. ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಪೂಮಾ ಟೀ ಶರ್ಟ್‌, ಜೀನ್ಸ್ ಪ್ಯಾಂಟ್‌ ಕೂಲಿಂಗ್ ಗ್ಲಾಸ್‌ ಹಾಕೊಂಡು ಬಂದಿದ್ದರು. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿದ್ದ ರಾಜಾತಿಥ್ಯದ ಗತ್ತು ಹಾಗೇ ಇತ್ತು. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಾಗ ದರ್ಶನ್ ಕೈಯಲ್ಲಿದ್ದ ಕಡಗವನ್ನೂ ಪೊಲೀಸರು ತೆಗೆಸಿದ್ದಾರೆ. ಇನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಕರೆತರುವಾಗ ದರ್ಶನ್​ ಕೈಗೆ ಬೇಡಿ ಹಾಕಲಾಗಿತ್ತಾ? ಇಲ್ಲಾ ಎನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಇದಕ್ಕೆ ಖುದ್ದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪ್ರತಿಕ್ರಿಯಿಸಿದ್ದು, ದರ್ಶನ್​ ಕೈಯಲ್ಲಿ ಕೋಳ ಇರಲಿಲ್ಲ. ಕೈ ನೋವಾಗಿದ್ದರಿಂದ ​ಬಟ್ಟೆ ಕಟ್ಟಿದ್ದರು ಎಂದು ಸ್ಪಷ್ಟಪಡಿಸಿದರು.

ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಎಸ್ಪಿ ಶೋಭಾರಾಣಿ ಅವರು ಮೊದಲ ಬಾರಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್​ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ​ಬಟ್ಟೆ ಕಟ್ಟಿದ್ದರು. ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ. ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್ ಗಳನ್ನ ಬಿಚ್ಚಿಸಲಾಗಿದೆ. ಇನ್ನು ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಐಜಿ ಪತ್ರ

ಜೈಲಿನಲ್ಲಿ ಪವರ್ ಗ್ಲಾಸ್​ಗೆ ಅವಕಾಶ ಇದೆ. ಅದೆಷ್ಟು ಪವರ್ ಇದೆ ಎಂದು ಡಾಕ್ಟರ್ ಚೆಕ್ ಮಾಡುತ್ತಿದ್ದಾರೆ. ದರ್ಶನ್ ಇರುವ ಬ್ಯಾರಕ್​ನತ್ತ ಹೋಗಿಲ್ಲ. ಎಲ್ಲರಿಗೂ ಕೊಡುವ ಊಟವನ್ನೇ ದರ್ಶನ್​ಗೂ ಕೊಡುತ್ತೇವೆ. ಕೈಯಲ್ಲಿದ್ದ ಖಡಗ ಟೈಟ್ ಆಗಿತ್ತು, ಹಾಗಾಗಿ ತೆಗೆಯಲಾಗಿತ್ತು. ವಿಚಾರಣಾಧೀನ ಕೈದಿ ಸಂಖ್ಯೆ ಮಾಧ್ಯಮದಲ್ಲಿ ಹೇಳುವ ವಿಚಾರವಲ್ಲ ಎಂದು ತಿಳಿಸಿದರು.

ಖಡ್ಗ ತೆಗೆಸಿದ ಬಳ್ಳಾರಿ ಜೈಲಾಧಿಕಾರಿ

ಕೊಲೆ ಆರೋಪಿ ದರ್ಶನ್ ಅವರ ಕೈಯಲ್ಲಿ ಬಹಳ ವರ್ಷಗಳಿಂದ ಒಂದು ಕಡಗ ಇತ್ತು. ದೇವರ ಮೇಲಿನ ನಂಬಿಕೆ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಷ್ಟು ಇದನ್ನು ತೆಗೆಸುವ ಕಾರ್ಯಕ್ಕೆ ಜೈಲಾಧಿಕಾರಿಗಳು ಮುಂದಾಗಿರಲಿಲ್ಲ. ಇದೀಗ ಬೆಂಗಳೂರಿಂದ ಬಳ್ಳಾರಿಗೆ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ಬಳ್ಳಾರಿ ಪೊಲೀಸು, ದರ್ಶನ್‌ ಕೈನಲ್ಲಿದ್ದ ಕಡಗವನ್ನೂ ತೆಗೆಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾಧಿಕಾರಿಯಿಂದ ಆಗದ ಕೆಲಸವನ್ನು ಬಳ್ಳಾರಿ ಜೈಲಾಧಿಕಾರಿ ಖಡಕ್ ಆಗಿ ಮಾಡಿ ತೋರಿಸಿದ್ದಾರೆ.

ಎಲ್ಲಾ ಊಹಾಪೋಹಗಳಿಗೆ ತೆರೆ

ಇನ್ನು ಬಳ್ಳಾರಿ ಜೈಲಿನೊಳಗೆ ಪ್ರವೇಶಿಸುವಾಗ ದರ್ಶನ್​ ತಮ್ಮ ಕೈಗೆ ಬಟ್ಟೆ ಕಟ್ಟಿಕೊಂಡಿದ್ದರು. ಹೀಗಾಗಿ ಪೊಲೀಸರು ದರ್ಶನ್​ಗೆ ಕೈಗೆ ಕೋಳ ತೊಡಿಸಿಕೊಂಡು  ಬಂದಿದ್ದಾರೆ. ಅದನ್ನು ಕಾಣದಂತೆ ದರ್ಶನ್​ ಬಟ್ಟೆಯಿಂದ ಕೈ ಮುಚ್ಚಿಕೊಂಡಿದ್ದಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಇದೀಗ ಎಲ್ಲಾ ಗೊಂದಲಗಳಿಗೆ ಎಸ್ಪಿ ತೆರೆ ಎಳೆದಿದ್ದಾರೆ. ಅಲ್ಲದೇ ದರ್ಶನ್​ ಆರೋಗ್ಯದ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ದರ್ಶನ್​ ಧರಿಸಿದ್ದ ಕಪ್ಪು ಕನ್ನಡಕ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕ ಅದು ನಂಬರ್​ ಗ್ಲಾಸ್​ ನಾ ಅಥವಾ ಶೋಕಿಗಾಗಿ ಹಾಕಿಕೊಂಡ ಕೂಲಿಂಗ್ ಗ್ಲಾಸ್​ನ ಎಂದು ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:26 pm, Thu, 29 August 24

ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​