ಕೀರ್ತಿ ಸುರೇಶ್​ನ ದೋಸೆ ಎಂದು ಹೀಯಾಳಿಸಿದ ಬಾಲಿವುಡ್ ಮಂದಿ; ನಟಿಯ ಉತ್ತರ ಏನು?

Keerthy Suresh: ಬಾಲಿವುಡ್​ನಲ್ಲಿ ಪಾಪರಾಜಿಗಳು ಕೀರ್ತಿ ಸುರೇಶ್ ಅವರನ್ನು ಅವಮಾನಿಸಿದ ಆರೋಪ ಕೇಳಿಬಂದಿದೆ. ಅವರನ್ನು ‘ಕೃತಿ’ ಮತ್ತು ‘ದೋಸೆ’ ಎಂದು ಕರೆದ ಘಟನೆ ವಿವಾದಕ್ಕೆ ಕಾರಣವಾಗಿದೆ. ಕೀರ್ತಿ ಅವರು ಈ ಅವಮಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೀರ್ತಿ ಸುರೇಶ್​ನ ದೋಸೆ ಎಂದು ಹೀಯಾಳಿಸಿದ ಬಾಲಿವುಡ್ ಮಂದಿ; ನಟಿಯ ಉತ್ತರ ಏನು?
ಕೀರ್ತಿ
Edited By:

Updated on: Dec 30, 2024 | 7:52 AM

ದಕ್ಷಿಣ ಭಾರತದ ಸಿನಿಮಾ ಹಾಗೂ ಬಾಲಿವುಡ್ ಎಂಬ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇವುಗಳ ಮಧ್ಯೆಯೂ ದಕ್ಷಿಣದ ಹೀರೋ ಹಾಗೂ ಹೀರೋಯಿನ್​ಗಳು ಬಾಲಿವುಡ್​ಗೆ ಹೋಗಿ ಮಿಂಚಿದರೆ, ಅಲ್ಲಿನ ಕಲಾವಿದರು ದಕ್ಷಿಣಕ್ಕೆ ಬಂದ ಉದಾಹರಣೆ ಸಾಕಷ್ಟಿದೆ. ಈಗ ನಟಿ ಕೀರ್ತಿ ಸುರೇಶ್ ಅವರು ಬಾಲಿವುಡ್​ಗೆ ಹಾರಿದ್ದಾರೆ. ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಹೀಗಿರುವಾಗಲೇ ಅವರಿಗೆ ಬಾಲಿವುಡ್​ನಲ್ಲಿ ಅವಮಾನ ಆಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಬಾಲಿವುಡ್​ನಲ್ಲಿ ಪಾಪರಾಜಿ ಸಂಸ್ಕೃತಿ ವಿಶಾಲವಾಗಿದೆ. ದಕ್ಷಿಣದ ಸ್ಟಾರ್​ಗಳು ಅಲ್ಲಿಗೆ ತೆರಳಿದರೂ ಸಾಕಷ್ಟು ಮಂದಿ ಅವರನ್ನು ಮುತ್ತಿಕೊಂಡು ವಿಡಿಯೋ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ಪಾಪರಾಜಿಗಳು ಕೀರ್ತಿ ಸುರೇಶ್ ಅವರ ವಿಡಿಯೋ ಸೆರೆ ಹಿಡಿದ್ದಾರೆ. ಈ ವೇಳೆ ಪಾಪರಾಜಿಗಳು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದು ಏಂಬುದನ್ನು ನೋಡೋಣ.

ಇತ್ತೀಚೆಗೆ ಕೀರ್ತಿ ಸುರೇಶ್ ಅವರು ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡರು. ಆಗ ಪಾಪರಾಜಿಗಳು ಕೀರ್ತಿ ಸುರೇಶ್ ಅವರ ಫೋಟೋಗಳನ್ನು ಸೆರೆಹಿಡಿದರು. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಸುರೇಶ್ ಹೆಸರನ್ನು ಕೃತಿ..ಕೃತಿ ಎಂದು ಕರೆದಿದ್ದಾನೆ. ಕೃತಿ ಸನೋನ್ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಹೆಸರನ್ನು ಗೊಂದಲ ಮಾಡಿಕೊಂಡ ಆ ವ್ಯಕ್ತಿ ಹೀಗೆ ಕರೆದಿರಬಹುದು ಎಂದಿಟ್ಟುಕೊಳ್ಳೋಣ.


ಆದರೆ, ಮತ್ತೋರ್ವ ಪಾಪರಾಜಿ ಕೀರ್ತಿ ಅವರನ್ನು ‘ದೋಸೆ’ ಎಂದು ಕರೆದಿದ್ದಾನೆ. ದೋಸೆ ದಕ್ಷಿಣ ಭಾರತದ ತಿಂಡಿ. ಅಲ್ಲದೆ, ಈ ಮೊದಲು ಕೀರ್ತಿ ಅವರು ದೋಸೆ ಎಂದರೆ ನಮಗೆ ಸಖತ್ ಇಷ್ಟ ಎಂದು ಹೇಳಿದ್ದರು. ಈ ಕಾರಣಕ್ಕೋ ಏನೋ ಕೀರ್ತಿ ಅವರನ್ನು ದೋಸೆ ಎಂದು ಕರೆದು ಹೀಯಾಳಿಸಿದ್ದಾನೆ. ಆದರೆ, ಕೀರ್ತಿ ಅವರು ಇದಕ್ಕೆ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಸರಿಯಾದ ಉತ್ತ ನೀಡಿದ್ದಾರೆ.

ಇದನ್ನೂ ಓದಿ: ಸಮಂತಾ ಜೊತೆ ಹೋಲಿಕೆಗೊಳಗಾಗಿ ಟ್ರೋಲ್ ಆದ ಕೀರ್ತಿ ಸುರೇಶ್

‘ಕೀರ್ತಿ ದೋಸೆ ಅಲ್ಲ, ಕೀರ್ತಿ ಸುರೇಶ್. ಆದರೆ, ದೋಸೆ ಎಂದರೆ ನಂಗೆ ಇಷ್ಟ’ ಎಂದು ಕೀರ್ತಿ ಸುರೇಶ್ ಅವರು ಹೇಳಿದ್ದಾರೆ. ಸದ್ಯ ‘ಬೇಬಿ ಜಾನ್’ ಸಿನಿಮಾ ಜನರನ್ನು ಇಂಪ್ರೆಸ್ ಮಾಡಲು ವಿಫಲವಾಗಿದೆ. ಈ ಚಿತ್ರ ಐದು ದಿನಕ್ಕೆ ಕೇವಲ 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:46 am, Mon, 30 December 24

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us