‘ಇವರು ಸೀತೆಯನ್ನೇ ಬಿಟ್ಟವರಲ್ಲ’; ಕುಮಾರಿ ಟ್ರೋಲ್ ಮಾಡಿದವರಿಗೆ ಸುದೀಪ್ ಖಡಕ್ ಉತ್ತರ

ಬಿಗ್ ಬಾಸ್ ಮನೆಗೆ ಹಳ್ಳಿ ಉಡುಪಿನಲ್ಲಿ ಬಂದಿದ್ದಕ್ಕೆ ಟ್ರೋಲ್ ಆದ ಸ್ಪರ್ಧಿ ಕುಮಾರಿಗೆ ಕಿಚ್ಚ ಸುದೀಪ್ ಧೈರ್ಯ ತುಂಬಿದ್ದಾರೆ. ‘ಇವರು ಸೀತೆಯನ್ನೇ ಬಿಟ್ಟವರಲ್ಲ, ಮಾತನಾಡುವವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ವೇದಿಕೆಯಲ್ಲಿ ಸುದೀಪ್ ಖಡಕ್ ಸಲಹೆ ನೀಡಿದ್ದಾರೆ. ಆ ಸಂದರ್ಭದ ವಿವಿರ ಇಲ್ಲಿದೆ.

‘ಇವರು ಸೀತೆಯನ್ನೇ ಬಿಟ್ಟವರಲ್ಲ’; ಕುಮಾರಿ ಟ್ರೋಲ್ ಮಾಡಿದವರಿಗೆ ಸುದೀಪ್ ಖಡಕ್ ಉತ್ತರ
ಕುಮಾರಿ-ಯಶ್

Updated on: Nov 09, 2026 | 6:57 AM

ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಉಡುಪಿನ ವಿಚಾರವಾಗಿ ಕುಮಾರಿ ಟ್ರೋಲ್ ಅನುಭವಿಸಿದರು. ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಧೈರ್ಯ ತುಂಬಿದ್ದಾರೆ. ‘ಮಾತನಾಡುವವರು ಏನೇನೋ ಮಾತನಾಡುತ್ತಾರೆ, ಇವರು ಸೀತೆಯನ್ನೇ ಬಿಟ್ಟವರಲ್ಲ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ’ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ.

ಬಿಗ್ ಬಾಸ್‌ನಿಂದ ಆರೋಗ್ಯ ಸಮಸ್ಯೆ ಕಾರಣಕ್ಕೆ ಹೊರಬಂದಿದ್ದ ಕುಮಾರಿ ಬಿಗ್ ಬಾಸ್ ಅಗ್ನಿಪರೀಕ್ಷೆಯ ಮೂಲಕ ಭಾರಿ ಜನಪ್ರಿಯತೆ ಗಳಿಸಿ ಮುಖ್ಯ ಮನೆಗೆ ಎಂಟ್ರಿ ಕೊಟ್ಟಿದ್ದ ಕುಮಾರಿ, ಅನಾರೋಗ್ಯದ ಕಾರಣದಿಂದಾಗಿ ಆಟವನ್ನು ಅರ್ಧಕ್ಕೇ ಮುಗಿಸಿ ಹೊರಬರಬೇಕಾಯಿತು. ಕಳೆದ ವಾರ ಎಲಿಮಿನೇಷನ್ ಆದ ನಂತರ, ಈ ವಾರ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡು ಮತ್ತೆ ಕಿಚ್ಚ ಸುದೀಪ್ ಅವರೊಂದಿಗಿನ ವೇದಿಕೆಗೆ ಆಗಮಿಸಿದ್ದರು.

Loading...

ಉಡುಪಿನ ಕುರಿತು ವ್ಯಕ್ತವಾಗಿದ್ದ ಸೋಶಿಯಲ್ ಮೀಡಿಯಾ ಟ್ರೋಲ್

ವೇದಿಕೆಯ ಮೇಲೆ ಕುಮಾರಿ ಅವರು ತಮ್ಮ ನೋವನ್ನು ಹಂಚಿಕೊಂಡರು. ‘ಅಗ್ನಿಪರೀಕ್ಷೆಯಲ್ಲಿ ಜನರು ನನ್ನನ್ನು ನೋಡಿ ತುಂಬಾ ಇಷ್ಟಪಟ್ಟಿದ್ದರು. ಆದರೆ ಬಿಗ್ ಬಾಸ್ ವೇದಿಕೆ ಮೇಲೆ ನಾನು ಹಳ್ಳಿಯ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಾಗ, ಜನರು ನನ್ನನ್ನು ಬಟ್ಟೆಯ ಆಧಾರದಲ್ಲೇ ಅಳೆಯಲು ಶುರು ಮಾಡಿದರು’ ಎಂದು ಕುಮಾರಿ ಬೇಸರ ವ್ಯಕ್ತಪಡಿಸಿದರು. ‘ರೀಲ್ಸ್ ಮಾಡುವಾಗ ಕಲರ್ ಫುಲ್ ಡ್ರೆಸ್ ಹಾಕ್ತಾರೆ, ಇಲ್ಲಿ ಮಾತ್ರ ಏತಕ್ಕೆ ಹೀಗೆ? ಇದು ಸಿಂಪತಿ ಕಾರ್ಡ್, ನಾಟಕನಾ’ ಎಂದು ಪ್ರಶ್ನಿಸಿ ಟ್ರೋಲ್ ಮಾಡಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಂಜ ರೀ ಎಂಟ್ರಿ: ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ

ಕುಮಾರಿಗೆ ಧೈರ್ಯ ತುಂಬಿದ ಕಿಚ್ಚ ಸುದೀಪ್

ಕುಮಾರಿ ಅವರ ಮಾತುಗಳನ್ನು ಆಲಿಸಿದ ನಿರೂಪಕ ಸುದೀಪ್, ‘ಜನರು ಏನೇನೋ ಮಾತನಾಡುತ್ತಾರೆ. ಇವರು ಸಾಕ್ಷಾತ್ ಸೀತೆಯನ್ನೇ ಬಿಟ್ಟವರಲ್ಲ. ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಅಂತಹ ಮಾತುಗಳಿಗೆಲ್ಲ ನೀವು ಯೋಚಿಸಬಾರದು ಹಾಗೂ ತಲೆಕೆಡಿಸಿಕೊಳ್ಳಬಾರದು’ ಎಂದು ಸೂಕ್ತ ಕಿವಿಮಾತು ಹೇಳಿ ಕುಮಾರಿಗೆ ಆತ್ಮವಿಶ್ವಾಸ ತುಂಬಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us