ಇದೇ ಮೊದಲು: ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ

ಪ್ರಸ್ತುತ ‘ಬಿಗ್ ಬಾಸ್ ತೆಲುಗು ಸೀಸನ್ 10' ರಿಯಾಲಿಟಿ ಶೋನಲ್ಲಿ ಹತ್ತನೇ ವಾರದ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದು, ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಹೌಸ್ ಒಳಗೆ ಬಂದು ಸಂಭ್ರಮಿಸುತ್ತಿದ್ದಾರೆ. ಅದರ ಒಂದು ಭಾಗವಾಗಿ ನಟ ಶಿವಕುಮಾರ್ ಅವರ ಗೆಳತಿ ಹಾಗೂ ನಟಿ ಪ್ರಿಯಾಂಕಾ ಜೈಸ್ವಾಲ್ ಹೌಸ್ ಒಳಗೆ ಪ್ರವೇಶಿಸಿದ್ದಾರೆ.

ಇದೇ ಮೊದಲು: ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ
Bigg Boss Telugu 10

Updated on: Nov 11, 2026 | 6:39 PM

ಮುಖ್ಯಾಂಶಗಳು

  • ಬಿಗ್​ಬಾಸ್ ಮನೆಯಲ್ಲಿ ನಡೆಯಿತು ನಿಶ್ಚಿತಾರ್ಥ
  • ತೆಲುಗು ಬಿಗ್​​ಬಾಸ್ ನಲ್ಲಿ ನಡೆದಿದೆ ಈ ಘಟನೆ
  • ಇದೇ ಮೊದಲ ಬಾರಿಗೆ ಇಂಥಹ ಘಟನೆ ನಡೆದಿದೆ

‘ಬಿಗ್​​ಬಾಸ್’ ಮನೆಯಲ್ಲಿ ಸ್ಪರ್ಧಿಗಳ ನಡುವೆ ರೊಮ್ಯಾನ್ಸ್, ಪ್ರೀತಿ-ಪ್ರೇಮ ನಡೆಯುವುದು ಬಹಳ ಸಾಮಾನ್ಯ. ಬಿಗ್​​ಬಾಸ್ ಮನೆಯಲ್ಲಿ ಹುಟ್ಟಿದ ಪ್ರೀತಿ, ಬಿಗ್​​ಬಾಸ್ ಹೊರಗೂ ಚಾಲ್ತಿಯಲ್ಲಿರುತ್ತದೆ. ಕೆಲವೊಮ್ಮೆ ಬಿಗ್​​ಬಾಸ್​​ ಮನೆಯಲ್ಲಿ ಹುಟ್ಟಿದ ಪ್ರೀತಿ ಅಲ್ಲೇ ಅಂತ್ಯವೂ ಆಗುತ್ತದೆ. ಕೆಲವೊಮ್ಮೆ ಬಿಗ್​​ಬಾಸ್​ ಮನೆಗೆ ಜೋಡಿಗಳನ್ನೇ ಕಳಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಬಿಗ್​​ಬಾಸ್ ಮನೆಯಲ್ಲಿ ಮದುವೆ ನಿಶ್ಚಿತಾರ್ಥ ನಡೆದಿದೆ.

ಎಲ್ಲ ಭಾಷೆಗಳಲ್ಲಿ ಒಟ್ಟಿಗೆ ಬಿಗ್​​ಬಾಸ್ ಚಾಲ್ತಿಯಲ್ಲಿದೆ. ಇದೀಗ ತೆಲಗು ಬಿಗ್​​ಬಾಸ್ ಮನೆಯಲ್ಲಿ ಮದುವೆ ನಿಶ್ಚಿತಾರ್ಥ ನಡೆದಿದೆ. ಇದು ಯಾವುದೇ ಟಾಸ್ಕ್ ಅಲ್ಲ, ಬದಲಾಗಿ ನಿಜವಾಗಿಯೂ ಬಿಗ್​​ಬಾಸ್ ಮನೆಯಲ್ಲಿ ನಿಶ್ಚಿತಾರ್ಥವೊಂದು ನಡೆದಿದೆ. ತೆಲುಗು ಬಿಗ್​​ಬಾಸ್ ನಲ್ಲಿ ಈ ಶೋನಲ್ಲಿ ಕಳೆದ ಬಾರಿ ಪ್ರಿಯಾಂಕಾ ಜೈಸ್ವಾಲ್ ಭಾಗವಹಿಸಿದ್ದರು, ಈ ಬಾರಿ ಅವರ ಪ್ರಿಯಕರ ನಟ ಶಿವಕುಮಾರ್ ಸ್ಪರ್ಧಿಯಾಗಿ ಭಾಗಿ ಆಗಿದ್ದಾರೆ. ಪ್ರಸ್ತುತ ‘ಬಿಗ್ ಬಾಸ್ ತೆಲುಗು ಸೀಸನ್ 10′ ರಿಯಾಲಿಟಿ ಶೋನಲ್ಲಿ ಹತ್ತನೇ ವಾರದ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದು, ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಹೌಸ್ ಒಳಗೆ ಬಂದು ಸಂಭ್ರಮಿಸುತ್ತಿದ್ದಾರೆ. ಅದರ ಒಂದು ಭಾಗವಾಗಿ ನಟ ಶಿವಕುಮಾರ್ ಅವರ ಗೆಳತಿ ಹಾಗೂ ನಟಿ ಪ್ರಿಯಾಂಕಾ ಜೈಸ್ವಾಲ್ ಹೌಸ್ ಒಳಗೆ ಪ್ರವೇಶಿಸಿದ್ದಾರೆ.

Loading...

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಜೋಡಿಯು ಹೌಸ್‌ನಲ್ಲಿರುವ ಇತರ ಸ್ಪರ್ಧಿಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರೋಮೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ‘ಕಾಬೋಯೇ ನೂತನ ವಧುವರರು’ (ಭವಿಷ್ಯದ ವಧು-ವರ) ಎನ್ನುವಂತೆ ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಬಿಡುಗಡೆಯಾದ ಹೊಸ ಪ್ರೋಮೋದಲ್ಲಿ ಪ್ರಿಯಾಂಕಾ ಜೈಸ್ವಾಲ್ ಹೌಸ್ ಒಳಗೆ ಬಂದಿರುವುದು ವಿಶೇಷವಾಗಿದೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ತಾಂಡವ್-ಪ್ರಶಾಂತ್ ಸಖತ್ ಕಾಮಿಡಿ: ವಿಡಿಯೋ

ಶಿವಕುಮಾರ್ಗಾಗಿ ಪ್ರಿಯಾಂಕಾ ವಿಶೇಷವಾಗಿ ಬಟ್ಟೆಗಳನ್ನು ಸಹ ತಂದಿದ್ದರು. ನಂತರ ಶೋನಲ್ಲಿ ಇಬ್ಬರೂ ಉಂಗುರಗಳನ್ನು ಸಹ ಬದಲಾಯಿಸಿಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡರು. ಹೊಸದಾಗಿ ಮದುವೆಯಾದ ಹೆಣ್ಣು ಹಾಗೂ ಗಂಡು ಮನೆಗೆ ಕಾಲಿಡುವ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿಸಲಾಯಿತು. ಈ ಹಿಂದೆ ಎಂದಿಗೂ ಹೀಗೆ, ನಿಜವಾದ ಮದುವೆ ನಿಶ್ಚಿತಾರ್ಥ ಬಿಗ್​​ಬಾಸ್ ಮನೆಯಲ್ಲಿ ನಡೆದಿದ್ದಿಲ್ಲ. ಆದರೆ ಈ ಬಾರಿ ನಡೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us