ಬಿಗ್ ಬಾಸ್ ಮನೆ ಸೇರಿದ ಮೋಕ್ಷಿತಾ ಪೈ ಹಿಂದಿದೆ ಒಂದು ದುಃಖದ ಕಥೆ

ಮೋಕ್ಷಿತಾ ಪೈ ಸಹೋದರನಿಗೆ ನರದ ತೊಂದರೆ ಇದೆ. ಇದರಿಂದ ಅವರ ಬೆಳವಣಿಗೆ ಕುಂಟಿತ ಆಗಿದೆ. ಅವರು ಸಹೋದರನ ಆರೈಕೆ ಮಾಡುತ್ತಾರೆ. ಈಗ ಸಹೋದರನ ಬಿಟ್ಟು ಅವರು ದೊಡ್ಮನೆಗೆ ಹೋಗುತ್ತಿದ್ದಾರೆ. ಇದು ಅವರ ಮುಂದಿರೋ ದೊಡ್ಡ ಸವಾಲುಗಳಲ್ಲಿ ಒಂದು.  

ಬಿಗ್ ಬಾಸ್ ಮನೆ ಸೇರಿದ ಮೋಕ್ಷಿತಾ ಪೈ ಹಿಂದಿದೆ ಒಂದು ದುಃಖದ ಕಥೆ

Updated on: Sep 29, 2024 | 10:45 PM

ಮೋಕ್ಷಿತಾ ಪೈ ಅವರಿಗೆ ಈಗಿನ್ನೂ 29 ವರ್ಷ. ಅವರು ಮಂಗಳೂರಿನವರು. 1995ರ ಅಕ್ಟೋಬರ್ 22ರಂದು ಅವರು ಜನಿಸಿದರು. ಅವರು ನಾಗೇಶ್ ಪೈ ಹಾಗೂ ಗೋದಾವರಿ ದಂಪತಿಗೆ ಜನಿಸಿದರು. ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ಸಹೋದರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನ್ನೋದು ದುಃಖದ ವಿಚಾರ.

ಮೋಕ್ಷಿತಾ ಪೈ ಸಹೋದರನಿಗೆ ನರದ ತೊಂದರೆ ಇದೆ. ಇದರಿಂದ ಅವರ ಬೆಳವಣಿಗೆ ಕುಂಟಿತ ಆಗಿದೆ. ಅವರು ಸಹೋದರನ ಆರೈಕೆ ಮಾಡುತ್ತಾರೆ. ಈಗ ಸಹೋದರನ ಬಿಟ್ಟು ಅವರು ದೊಡ್ಮನೆಗೆ ಹೋಗುತ್ತಿದ್ದಾರೆ. ಇದು ಅವರ ಮುಂದಿರೋ ದೊಡ್ಡ ಸವಾಲುಗಳಲ್ಲಿ ಒಂದು.

ಮೋಕ್ಷಿತಾ ಪೈ ಅವರು ಜನಪ್ರಿಯತೆ ಪಡೆದಿದ್ದು ‘ಪಾರು’ ಧಾರಾವಾಹಿ ಮೂಲಕ. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. 2018ರಿಂದ ಈ ವರ್ಷ ಮಾರ್ಚ್​ವರೆಗೆ ಧಾರಾವಾಹಿ ಪ್ರಸಾರ ಕಂಡಿದೆ. ಬರೋಬ್ಬರಿ 1393 ಎಪಿಸೋಡ್​ಗಳನ್ನು ಇದು ಹೊಂದಿದೆ. ಅವರು ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ಮೋಕ್ಷಿತಾ ಪೈ ಬಾಲಿ ಟ್ರಿಪ್; ಇಲ್ಲಿವೆ ಸುಂದರ ಫೋಟೋಸ್  

ಮೋಕ್ಷಿತಾ ಪೈ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 6.96 ಲಕ್ಷ ಹಿಂಬಾಲಕರು ಇದ್ದಾರೆ. ಈಗ ಬಿಗ್ ಬಾಸ್​ಗೆ ಬಂದ ಬಳಿಕ ಅವರ ಜನಪ್ರಿಯತೆ ಹೆಚ್ಚಲಿದೆ. ಬಿಗ್ ಬಾಸ್ ಪೂರ್ಣಗೊಳ್ಳುವವರೆಗೆ ಒಂದು ಮಿಲಿಯನ್ ಹಿಂಬಾಲಕರು ಆದರೂ ಅಚ್ಚರಿ ಏನಿಲ್ಲ. ಅವರು ಬಿಗ್ ಬಾಸ್ ಎಂಟ್ರಿಗೂ ಮೊದಲು ಬಾಲಿ ಟ್ರಿಪ್ ಮಾಡಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us