‘ಅಣ್ಣಯ್ಯ’ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ರೌಡಿ ಬೇಬಿ; ಇಲ್ಲಿದೆ ಪ್ರಸಾರ ದಿನಾಂಕ, ಸಮಯ

|

Updated on: Aug 01, 2024 | 1:04 PM

ಜೀ ಕನ್ನಡ ವಾಹಿನಿ ‘ಅಣ್ಣಯ್ಯ’ ಧಾರಾವಾಹಿಯ ಪ್ರಸಾರ ದಿನಾಂಕವನ್ನು ರಿವೀಲ್ ಮಾಡಿದೆ. ಈ ಧಾರಾವಾಹಿ ಆಗಸ್ಟ್ 12ರಿಂದ ಪ್ರತಿ ದಿನ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಸೋಮವಾರದಿಂದ-ಶುಕ್ರವಾರದವರೆಗೆ ಈ ಧಾರಾವಾಹಿ ಪ್ರಸಾರ ಕಾಣಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

‘ಅಣ್ಣಯ್ಯ’ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ರೌಡಿ ಬೇಬಿ; ಇಲ್ಲಿದೆ ಪ್ರಸಾರ ದಿನಾಂಕ, ಸಮಯ
ನಿಶಾ
Follow us on

‘ಗಟ್ಟಿಮೇಳ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡು ಭರ್ಜರಿ ಟಿಆರ್​ಪಿ ಪಡೆದುಕೊಂಡಿತ್ತು. ಈ ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣ ಅವರು ಮಾಡಿದ್ದ ಅಮೂಲ್ಯ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅವರು ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದರು. ಈಗ ಅವರು ‘ಅಣ್ಣಯ್ಯ’ ಧಾರಾವಾಹಿ ಮೂಲಕ ಅವರು ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಧಾರಾವಾಹಿಯ ಪ್ರೋಮೋ ಗಮನ ಸೆಳೆದಿದೆ.

‘ಅಣ್ಣಯ್ಯ’ ಧಾರಾವಾಹಿಯ ಪ್ರಸಾರ ದಿನಾಂಕವನ್ನು ಜೀ ಕನ್ನಡ ವಾಹಿನಿ ರಿವೀಲ್ ಮಾಡಿದೆ. ಈ ಧಾರಾವಾಹಿ ಆಗಸ್ಟ್ 12ರಿಂದ ಪ್ರತಿ ದಿನ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಸೋಮವಾರದಿಂದ-ಶುಕ್ರವಾರದವರೆಗೆ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಈ ಅವಧಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಸಮಯದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗೆ ಯಾವ ಸ್ಲಾಟ್ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.


ತಂಗಿಯರ ಮದುವೆ ಮಾಡಬೇಕು ಎಂದು ಕಥಾ ನಾಯಕ ಕಾಯುತ್ತಾ ಇರುತ್ತಾನೆ. ಹೋಗಿ ಶಾಸ್ತ್ರ ಕೂಡ ಕೇಳಿಸುತ್ತಾನೆ. ಆದರೆ, ಶಾಸ್ತ್ರ ಹೇಳುವವನು ‘ನಿನ್ನ ತಂಗಿಯರಿಗಿಂತ ಮೊದಲು ನಿನಗೆ ಮದುವೆ ಆಗುತ್ತದೆ’ ಎಂದು ಭವಿಷ್ಯ ಹೇಳುತ್ತಾನೆ. ಕಥಾ ನಾಯಕನಿಗೆ ಸಣ್ಣ ವಯಸ್ಸಿನ ಒಂದು ಪ್ರೀತಿ ಇರುತ್ತದೆ. ಈ ರೀತಿಯಲ್ಲಿ ಪ್ರೋಮೋ ಮೂಡಿ ಬಂದಿದೆ. ನಿಶಾ ಅವರು ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಪ್ರೋಮೋ ಗಮನ ಸೆಳೆದಿದೆ.

ಇದನ್ನೂ ಓದಿ: ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ ನಿಶಾ

ಈ ಧಾರಾವಾಹಿಯನ್ನು ಪ್ರಮೋದ್ ಶೆಟ್ಟಿ ಅವರು ನಿರ್ಮಾಣ ಮಾಡುತ್ತಿದ್ದಾರೆ.  ನಿರ್ಮಾಣದಲ್ಲಿ ಅವರಿಗೆ ಇದು ಮೊದಲ ಅನುಭವ. ಉತ್ತಮ್ ಮಧು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಉತ್ತಯ್ಯ ಹಾಗೂ ನಿಶಾ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಧಾರಾವಾಹಿಯ ಪ್ರಸಾರ ದಿನಾಂಕ ರಿವೀಲ್ ಆಗಿದೆ. ನಿಶಾ ಅವರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 1:01 pm, Thu, 1 August 24