2024ನೇ ಸಾಲಿನ 30ನೇ ವಾರದ ಟಿಆರ್ಪಿ ಹೊರ ಬಿದ್ದಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಆದರೆ, ಶೀಘ್ರವೇ ಈ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಆಗೋ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ‘ಪುಟ್ಟಕನ ಮಕ್ಕಳು’ ಧಾರಾವಾಹಿಯ ವೀಕ್ಷಕರು ಬೇಸರ ಹೊರಹಾಕುತ್ತಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಅಭಿಮಾನಿ ವರ್ಗ ದಿನ ಕಳೆದಂತೆ ಹೆಚ್ಚುತ್ತಿದ್ದಾರೆ. ಹಳ್ಳಿ ಭಾಗದಲ್ಲಿ ಮಾತ್ರವಲ್ಲದೆ, ನಗರ ಭಾಗದಲ್ಲೂ ಈ ಧಾರಾವಾಹಿಗೆ ದೊಡ್ಡ ವೀಕ್ಷಕ ಬಳಗ ಸೃಷ್ಟಿ ಆಗಿದೆ. ‘ಅಣ್ಣಯ್ಯ’ ಹೆಸರಿನ ಹೊಸ ಧಾರಾವಾಹಿ ಇದೇ ಆಗಸ್ಟ್ 12ರಿಂದ ಆರಂಭ ಆಗಲಿದೆ. ಈ ಧಾರಾವಾಹಿ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಇದೇ ಸಮಯದಲ್ಲಿ ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೀಗಾಗಿ, ಈ ಧಾರಾವಾಹಿಯ ಸಮಯ ಬದಲಾಗಲಿದೆ.
ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜನ ಮೆಚ್ಚುಗೆ ಪಡೆದಿದೆ. ವಿಶೇಷ ಎಂದರೆ ನಗರ ಭಾಗದ ಟಿಆರ್ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್ಪಿಯನ್ನು ಹಿಂದಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆಯುತ್ತಿದೆ.
ಇದನ್ನೂ ಓದಿ: ‘ಸೀತಾ ರಾಮ’ ಟಿಆರ್ಪಿಯಲ್ಲಿ ಭರ್ಜರಿ ಏರಿಕೆ; ಉಳಿದ ಧಾರಾವಾಹಿಗಳ ಕಥೆ ಏನು?
ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮ್ ಮದುವೆ ನೆರವೇರಿದೆ. ಈ ಕಾರಣಕ್ಕೆ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದು ಮುನ್ನುಗ್ಗುತ್ತಿದೆ. ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ. ಕಲರ್ಸ್ ಕನ್ನಡದ ಧಾರಾವಾಹಿಗಳ ಪೈಕಿ ಸ್ಥಾನ ಪಡೆದ ಏಕೈಕ ಧಾರಾವಾಹಿ ಇದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.