ರಕ್ಷಕ್ ಬುಲೆಟ್​ಗೆ ರಮೋಲಾ ಮೇಲೆ ಮೂಡಿದೆ ಪ್ರೀತಿ; ಮುಖ ನೋಡಿಯೇ ಹೇಳಿದ ರವಿಚಂದ್ರನ್

Rakshak Bullet And Ramola: ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ ರಕ್ಷಕ್ ಬುಲೆಟ್ ಮತ್ತು ರಮೋಲಾ ಜೋಡಿಯಾಗಿ ಸ್ಪರ್ಧಿಸಿದ್ದಾರೆ. ರಮೋಲಾ ಮೇಲೆ ರಕ್ಷಕ್​ಗೆ ಪ್ರೀತಿ ಹೊಂದಿದ್ದಾರೆಂದು ರವಿಚಂದ್ರನ್ ತಿಳಿಸಿದ್ದಾರೆ. ರಕ್ಷಕ್ ರಮೋಲಾ ಮನೆಗೆ ಭೇಟಿ ನೀಡಿದ್ದಾರೆ ಮತ್ತು ಅಳಿಯನಂತೆ ಭಾವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ರಕ್ಷಕ್ ಬುಲೆಟ್​ಗೆ ರಮೋಲಾ ಮೇಲೆ ಮೂಡಿದೆ ಪ್ರೀತಿ; ಮುಖ ನೋಡಿಯೇ ಹೇಳಿದ ರವಿಚಂದ್ರನ್
ರಕ್ಷಕ್-ರಮೋಲಾ

Updated on: Jun 17, 2025 | 8:41 AM

ರಕ್ಷಕ್ ಬುಲೆಟ್ (Rakshak Bullet) ಹಾಗೂ ರಮೋಲಾ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಒಟ್ಟಾಗಿ ಸ್ಪರ್ಧೆ ಮಾಡಿದ್ದಾರೆ. ಈ ಜೋಡಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದೆ. ಈ ಮಧ್ಯೆ ರಮೋಲಾ ಮೇಲೆ ರಕ್ಷಕ್ ಬುಲೆಟ್​ಗೆ ಪ್ರೀತಿ ಮೂಡಿದೆಯಂತೆ. ಈ ವಿಚಾರವನ್ನು ಮುಖ ನೋಡಿ ರಿವೀಲ್ ಮಾಡಿದ್ದಾರೆ ರವಿಚಂದ್ರನ್. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಈ ಎಲ್ಲಾ ವಿಚಾರಗಳು ರಿವೀಲ್ ಆದವು.

ರಕ್ಷಕ್ ಹಾಗೂ ರಮೋಲಾ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಮೇಲೆ ಜೋಡಿಯಾಗಿ ಸ್ಪರ್ಧಿಸಿದ್ದಾರೆ. ರಕ್ಷಕ್​ಗೆ ಮೆಂಟರ್ ಆಗಿ ರಮೋಲಾ ಇದ್ದಾರೆ. ರಕ್ಷಕ್​​ನ ತಿದ್ದುವ ಕೆಲಸವನ್ನು ಅವರು ಮಾಡಿದ್ದಾರೆ. ಈ ಮೊದಲು ತುಂಬಾನೇ ರೇಗುತ್ತಿದ್ದ ರಕ್ಷಕ್​ನ ರಮೋಲಾ ಬದಲಾಯಿಸಿದ್ದಾರೆ. ಈಗ ರಕ್ಷಕ್ ಕೂಲ್ ಆಗಿ ಮಾತನಾಡುತ್ತಾರೆ. ಇಷ್ಟೆಲ್ಲ ತಿದ್ದಿದ್ದ ರಮೋಲಾ ಮೇಲೆಯೇ ರಕ್ಷಕ್​ಗೆ ಪ್ರೀತಿ ಮೂಡಿದೆ.

ಇದನ್ನೂ ಓದಿ
ಸಿನಿಮಾ ಸೆಟ್​ನಲ್ಲೇ ಹೀರೋನಾ ಮದುವೆ ಆಗಿದ್ರಾ ಜೆನಿಲಿಯಾ? ಉತ್ತರಿಸದ ನಟಿ
ಶೋಭಿತಾ ಹಾಗೂ ನಾಗ ಚೈತನ್ಯರನ್ನು ನಿರ್ಲಕ್ಷಿಸಿದ್ರಾ ಮಹೇಶ್ ಬಾಬು?
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ
ರವಿಚಂದ್ರನ್​ಗೆ ನೋವಾಗದಂತೆ ಸಿನಿಮಾ ಚೆನ್ನಾಗಿಲ್ಲ ಎಂದಿದ್ದ ತಂದೆ ವೀರಸ್ವಾಮಿ

ರಕ್ಷಕ್ ಅವರು ಇತ್ತೀಚೆಗೆ ರಮೋಲಾ ಹುಟ್ಟೂರಾದ ಸಾಗರಕ್ಕೆ ತೆರಳಿದ್ದರು. ಅಲ್ಲಿ ಅವರ ಮನೆಗೆ ತೆರಳಿ ಬಂದಿದ್ದರು. ‘ಅವನಿಗೆ (ರಕ್ಷಕ್) ಮನೆ ಒಳಗೆ ಹೋಗುವಾಗ ಅಳಿಯ ಎಂಬ ಭಾವನೆ ಬಂದುಬಿಟ್ಟಿದೆ. ಇಲ್ಲ ಎಂದು ಹೇಳಲಿ ಸೀಟ್ ಬಿಟ್ಟು ಹೋಗಿ ಬಿಡ್ತೀನಿ’ ಎಂದು ರವಿಚಂದ್ರನ್ ಹೇಳಿದರು. ಆಗ ಹೌದು ಎಂದರು ರಕ್ಷಕ್ ಬುಲೆಟ್. ರಕ್ಷಕ್ ಹೌದು ಎನ್ನುತ್ತಿದ್ದಂತೆ ರಮೋಲಾ ಶಾಕ್ ಆದರು.

‘ರಕ್ಷಕ್ ಸ್ಟುಡೆಂಟ್ ಅಲ್ಲ, ರಮೋಲಾ ಮೆಂಟರ್ ಅಲ್ಲ’ ಎಂದರು ರವಿಚಂದ್ರನ್. ‘ರಕ್ಷಕ್ ಇನ್ ಲವ್’ ಎಂದರು ನಿರಂಜನ್ ದೇಶಪಾಂಡೆ. ಈ ವೇಳೆ ರವಿಚಂದ್ರನ್ ಮುಂದಾಗಬಹುದಾದ ಘಟನೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು. ‘ಬಾಟಲಿ ಹಿಡಿದು ಕೂರೋ ದೃಶ್ಯವೊಂದು ಬಾಕಿ ಇದೆ’ ಎಂದರು. ಆಗ ಎಲ್ಲರೂ ನಕ್ಕರು.

ಇದನ್ನೂ ಓದಿ: ‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬುಲೆಟ್ ನಿಜ ಮುಖ ರಿವೀಲ್ ಮಾಡಿದ ರಮೋಲಾ

ರಕ್ಷಕ್​ಗೆ ಇನ್ನೂ 21 ವರ್ಷ. ವಯಸ್ಸಿನಲ್ಲಿ ರಮೋಲಾ ಅವರೇ ದೊಡ್ಡವರು ಎನ್ನಲಾಗುತ್ತಿದೆ. ಒಂದೊಮ್ಮೆ ರಕ್ಷಕ್​ಗೆ ಪ್ರೀತಿ ಮೂಡಿದ್ದರೂ ರಮೋಲಾ ಇದನ್ನು ಒಪ್ಪಿಕೊಳ್ಳೋದು ಅನುಮಾನವೆ. ಇದೆಲ್ಲ ರಿಯಾಲಿಟಿ ಶೋಗೆ ಮಾತ್ರ ಸೀಮಿತ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.