ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​

| Updated By: ರಾಜೇಶ್ ದುಗ್ಗುಮನೆ

Updated on: Feb 07, 2022 | 4:10 PM

ನೇಹಾ ಧೂಪಿಯಾ, ಪ್ರಿನ್ಸ್​ ನುರುಲಾ ಹಾಗೂ ಇತರರು ಗ್ಯಾಂಗ್​ ಲೀಡರ್​ ಆಗಿ ಕಾಣಿಸಿಕೊಂಡಿದ್ದರು. ಆದರೆ, ಈ ಬಾರಿ ಆ ಕಾನ್ಸೆಪ್ಟ್​ ಕೈ ಬಿಡಲಾಗಿದೆ. ಕೆಲ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಈ ಬಾರಿಯ ‘ರೋಡೀಸ್​’ ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ಇರಲಿದೆಯಂತೆ.

ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​
Follow us on

ಎಂಟಿವಿಯಲ್ಲಿ ಪ್ರಸಾರವಾಗುವ ‘ರೋಡೀಸ್​’ (MTV Roadies) ಯಶಸ್ವಿಯಾಗಿ 17 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಈ ಶೋನ 18ನೇ ಸೀಸನ್​ ಪ್ರಾರಂಭವಾಗಲಿದೆ. ವಿಶೇಷ ಎಂದರೆ, ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ (Sonu Sood)​ ಅವರ ಹೆಗಲು ಏರಿದೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಈ ಶೋನ ಶೂಟಿಂಗ್​ ನಡೆಯಲಿದೆ ಅನ್ನೋದು ವಿಶೇಷ. ಈ ಬಗ್ಗೆ ಶೀಘ್ರವೇ ಮುಂದಿನ ಅಪ್​ಡೇಟ್​ ಸಿಗಲಿದೆ. ವಿಜೆ ರಣವಿಜಯ್​ ಸಿಂಘ (Rannvijay Singha) ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿದೆ.  ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ನೇಹಾ ಧೂಪಿಯಾ, ಪ್ರಿನ್ಸ್​ ನುರುಲಾ ಹಾಗೂ ಇತರರು ಗ್ಯಾಂಗ್​ ಲೀಡರ್​ ಆಗಿ ಕಾಣಿಸಿಕೊಂಡಿದ್ದರು. ಆದರೆ, ಈ ಬಾರಿ ಆ ಕಾನ್ಸೆಪ್ಟ್​ ಕೈ ಬಿಡಲಾಗಿದೆ. ಕೆಲ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಈ ಬಾರಿಯ ‘ರೋಡೀಸ್​’ ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ಇರಲಿದೆಯಂತೆ. ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಹಲವು ರೀತಿಯ ಟ್ವಿಸ್ಟ್​ಗಳು ಶೋನಲ್ಲಿ ಇರಲಿದೆ ಎಂದು ತಿಳಿದು ಬಂದಿದೆ.

ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದಾರೆ ಸೋನು. ಫೆಬ್ರವರಿ ಎರಡನೇ ವಾರದಲ್ಲಿ ಈ ಶೋನ ಶೂಟಿಂಗ್​ ಆರಂಭವಾಗಲಿದ್ದು, ಮಾರ್ಚ್​ ವೇಳೆಗೆ ಶೋ ಪ್ರಸಾರವಾಗಲಿದೆ. ಪಿಪ್ಪಿಪ್​ ಮೀಡಿಯಾ ಈ ಬಾರಿ ರೋಡೀಸ್​ ನಿರ್ಮಾಣ ಮಾಡುತ್ತಿದೆ.

ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಡೇಟ್ಸ್​ ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಕಾರಣವನ್ನು ರಣವಿಜಯ್​ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಈ ಶೋ ವೀಕ್ಷಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭರವಸೆ ಈಡೇರಿಸದ ಸೋನು ಸೂದ್​ಗೆ ಹೆಚ್ಚಿತು ಸಂಕಷ್ಟ; ನಟನಿಗೆ ಎರಡನೇ ಬಾರಿಗೆ ನೋಟಿಸ್​

ಪಂಜಾಬ್‌: ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್‌ಗೆ ಸೇರ್ಪಡೆ, ಇದು ಗೇಮ್‌ಚೇಂಜರ್ ಎಂದ ಸಿಧು