ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಾಯ್​ಫ್ರೆಂಡ್ ವಿಚಾರ ರಿವೀಲ್ ಮಾಡಿದ ಶಿಶಿರ್

ಬಿಗ್ ಬಾಸ್ ಮನೆಗೆ ಶೋಭಾ ಶೆಟ್ಟಿ ಅವರ ಆಗಮವಾಗಿದೆ. ಶಿಶಿರ್ ಅವರು ಶೋಭಾ ಅವರಿಗೆ ಹೊರಗೆ ಬಾಯ್‌ಫ್ರೆಂಡ್ ಇರುವುದನ್ನು ಬಹಿರಂಗಪಡಿಸಿದ್ದಾರೆ. ಶೋಭಾ ಮತ್ತು ಶಿಶಿರ್ ನಡುವೆ ಈ ಮೊದಲೇ ಪರಿಚಯ ಇದೆ. ಶಿಶಿರ್ ಹೇಳಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಾಯ್​ಫ್ರೆಂಡ್ ವಿಚಾರ ರಿವೀಲ್ ಮಾಡಿದ ಶಿಶಿರ್
ಶೋಭಾ

Updated on: Nov 19, 2024 | 8:53 AM

ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಅವರ ಆಗಮನ ಆಗಿದೆ. ಅವರು ನೋಡೋಕೆ ಫ್ಲವರ್ ರೀತಿ ಇದ್ದರೂ ಅವರು ಫೈಯರ್ ಆಗುತ್ತಾರೆ. ಅವರು ಒಮ್ಮೆ ಧ್ವನಿ ಎತ್ತಿದರೆ ಎಲ್ಲರೂ ಸೈಲೆಂಟ್ ಆಗೋದು ಪಕ್ಕಾ. ಆ ರೀತಿಯಲ್ಲಿ ಅವರ ಆಟ ಆಡುತ್ತಾರೆ. ಇಷ್ಟು ದಿನ ಶಿಶಿರ್ ಅವರು ಐಶ್ವರ್ಯಾ ಜೊತೆ ಇದ್ದರು. ತ್ರಿವಿಕ್ರಂ ಭವ್ಯಾ ಜೊತೆ ಇದ್ದರು. ಇಬ್ಬರೂ ಶೋಭಾ ಜೊತೆ ಆಪ್ತತೆ ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಾರಾ ಎನ್ನುವ ಪ್ರಶ್ನೆ ಬಂತು. ಇದಕ್ಕೆ ಉತ್ತರ ಸಿಕ್ಕಿದೆ. ಶೋಭಾಗೆ ಈಗಾಗಲೇ ಬಾಯ್​ಫ್ರೆಂಡ್ ಇರುವ ವಿಚಾರವನ್ನು ಶಿಶಿರ್ ರಿವೀಲ್ ಮಾಡಿದ್ದಾರೆ.

ಶೋಭಾ ಶೆಟ್ಟಿ ಅವರು ದೊಡ್ಮನೆಗೆ ಬರುತ್ತಿದ್ದಂತೆ ಶಿಶಿರ್ ಜೊತೆ ಉತ್ತಮವಾಗಿ ಮಾತನಾಡಿದರು. ಇಬ್ಬರೂ ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಈ ಮೊದಲು ಕೆಲಸ ಮಾಡಿದ್ದರಿಂದ ಇಬ್ಬರ ಮಧ್ಯೆ ಒಳ್ಳೆಯ ಪರಿಚಯ ಇದೆ. ಈ ಕಾರಣದಿಂದಲೇ ಇಬ್ಬರೂ ಹಗ್ ಮಾಡಿಕೊಂಡು ಪರಸ್ಪರ ವಿಶ್ ಮಾಡಿದರು. ಇದನ್ನು ನೋಡಿದ ಮಂಜು ಅವರು ಶಿಶಿರ್​ನ ಕಾಲೆಳೆದರು.

ಶಿಶಿರ್ ಮುಖ ನೋಡಿಕೊಂಡು ಭವಿಷ್ಯ ಹೇಳೋಕೆ ಆರಂಭಿಸಿದರು ಮಂಜು. ‘ಯಾವಾಗಲೂ ಇಲ್ಲದಿರೋ ಕಳೆ ಈಗ ಕಾಣುತ್ತಿದೆ. ಯಾವಾಗೂ ಇಲ್ಲದ ಧ್ವನಿ ಈಗ ಬರ್ತಿದೆ. ಜೋರಾಗಿ ಸ್ವಾಗತ ಮಾಡಿದ್ದಾರೆ. ರವಿಚಂದ್ರನ್ ರೀತಿ ಬಣ್ಣದ ಡ್ರೆಸ್ ಹಾಕಿದ್ದಾರೆ’ ಎಂದರು ಮಂಜು. ಇದನ್ನು ಕೇಳಿ ಶಿಶಿರ್ ಒಂದು ಸೀಕ್ರೆಟ್ ರಿವೀಲ್ ಮಾಡಿದರು. ‘ಅವರಿಗೆ ಹೊರಗೆ ಹುಡುಗ ಇದ್ದಾನೆ, ಮದುವೆ ಆಗ್ತಿದ್ದಾರೆ’ ಎಂದರು. ಆದರೆ, ಅವರ ಬಾಯ್​ಫ್ರೆಂಡ್ ಯಾರು ಎಂದು ಹೇಳಿಲ್ಲ. ಆ ಬಳಿಕ ತ್ರಿವಿಕ್ರಂ ಬಳಿ, ‘ಮೀನು ನಿನ್ನ ಕಡೆ ಬರ್ತಿದೆ’ ಎಂದರು.

ಇದನ್ನೂ ಓದಿ: ಕ್ಯಾಪ್ಟನ್ ಆದರೂ ಭವ್ಯಾ ಗೌಡಗೆ ಇಲ್ಲ ಅಧಿಕಾರ; ಎಲ್ಲವನ್ನೂ ಕಸಿದುಕೊಂಡ ಶೋಭಾ ಶೆಟ್ಟಿ

ಯಶ್ವಂತ್ ರೆಡ್ಡಿ ಅವರನ್ನು ಶೋಭಾ ಪ್ರೀತಿಸುತ್ತಿದ್ದಾರೆ. ಇಬ್ಬರೂ ವಿವಾಹ ಆಗಲಿದ್ದಾರೆ. ‘ಕಾರ್ತಿಕ ದೀಪಂ’ ಧಾರಾವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದರು ಯಶ್ವಂತ್ ರೆಡ್ಡಿ. ಇದರಲ್ಲಿ ಶೋಭಾ ಕೂಡ ನಟಿಸಿದ್ದರು. ಆ ಸಂದರ್ಭದಲ್ಲೇ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us